Indira Gandhi: ಮಿಜೋರಾಂನಲ್ಲಿ ಹೊಸ ಪಕ್ಷ ಅಧಿಕಾರಕ್ಕೆ- ಆದರೂ ಇಂದಿರಾಗಾಂಧಿ ಆಪ್ತನಿಗೆ ಸಿಎಂ ಪಟ್ಟ?! ಏನಿದು ಹೊಸ ಲಾಜಿಕ್ ?!
Indira Gandhi: ಸೋಮವಾರ ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಲಾಲ್ದುಹೋಮಾ ಅವರು ಎಮ್‌ಎನ್‌ಎಫ್ ಅಭ್ಯರ್ಥಿ ಜೆ ಮಲ್ಸಾವ್ಮ್‌ಜುವಾಲಾ ವಂಚೌಂಗ್ ಅವರ ವಿರುದ್ಧ 2,982 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇದೀಗ ಜೋರಾಮ್ ಪೀಪಲ್ಸ್ ಮೂವ್ಮೆಂಟ್(ZPM) ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿದೆ.
ಅಲ್ಲದೇ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರ ಭದ್ರತೆಯ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ ಮಾಜಿ ಐಪಿಎಸ್ ಅಧಿಕಾರಿ ಲಾಲ್ದುಹೋಮಾ ಅವರು ಜೋರಾಮ್ ಪೀಪಲ್ಸ್ ಮೂವ್ಮೆಂಟ್(ZPM)ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದು, ಭರ್ಜರಿ ಗೆಲುವಿನೊಂದಿಗೆ ಸಿಎಂ ಪಟ್ಟವೇರಲು ಸಜ್ಜಾಗಿದ್ದಾರೆ.
2019 ರಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲ್ಪಟ್ಟ ZPM ಸೋಮವಾರ ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. 40 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ZPM ಗೆದ್ದುಕೊಂಡಿದ್ದು, ಮತ್ತೊಂದರಲ್ಲಿ ಮುನ್ನಡೆ ಸಾಧಿಸಿದೆ ಎಂದು ಚುನಾವಣಾ ಆಯೋಗ(EC) ತಿಳಿಸಿದೆ.
ಅಷ್ಟಕ್ಕೂ 1988 ರಲ್ಲಿ ಕಾಂಗ್ರೆಸ್ ತೊರೆದ ಲಾಲ್ದುಹೋಮಾ ಅವರು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹಗೊಂಡಿದ್ದರು. ಈ ಮೂಲಕ ಪಕ್ಷಾಂತರ-ವಿರೋಧಿ ಕಾನೂನಿನಡಿಯಲ್ಲಿ ಅನರ್ಹಗೊಂಡ ಮೊದಲ ಸಂಸದ ಎಂಬ ಕುಖ್ಯಾತಿಗೆ ಪಾತ್ರರಾದರು. ನಂತರ ಜೋರಾಮ್ ನ್ಯಾಶನಲಿಸ್ಟ್ ಪಾರ್ಟಿ ಸ್ಥಾಪಿಸಿದ 73 ವರ್ಷದ ಲಾಲ್ದುಹೋಮಾ ಅವರು ಈಗ ಮಿಜೋರಾಂ ಮುಖ್ಯಮಂತ್ರಿ ಪಟ್ಟ ಏರುತ್ತಿದ್ದಾರೆ.
ಇದನ್ನೂ ಓದಿ: ಹುಡುಗನ ತುಟಿಗೆ ತುಟಿಯಿಟ್ಟು ಮೇಘ ಶೆಟ್ಟಿ ಇದೇನು ಮಾಡಿದ್ರು ?! ವೈರಲ್ ಆಗೇಬಿಡ್ತು ವಿಡಿಯೋ