Missing Dog : ಜಾತ್ರೆಯಲ್ಲಿ ದಾರಿ ತಪ್ಪಿದ ನಾಯಿ, ಬರೋಬ್ಬರಿ 225 ಕಿ.ಮೀ ದೂರ ಕಳೆದು ಹೋದ ನಾಯಿ ಮತ್ತೆ ಮನೆ ಸೇರಿದ್ದು ಹೇಗೆ ?
Missing Dog: ಅನಾದಿ ಕಾಲದಿಂದಲೂ ಮನುಷ್ಯ ನಾಯಿ ಸಾಕಿಕೊಂಡು ಬಂದಿದ್ದಾನೆ. ನಾಯಿ ಯಾವತ್ತು ನಿಯತ್ತಿಗೆ ಹೆಸರು. ಅನ್ನ ಹಾಕಿದ ದನಿಯನ್ನು ಎಂದೂ ಮರೆಯೋದಿಲ್ಲ. ನೀವು ಬಿಟ್ಟರು ಅದು ನಮ್ಮನ್ನು ಬಿಡಲ್ಲ. ನಾಯಿ ಎಷ್ಟು ಸ್ನೇಹ ಜೀವಿ ಅನ್ನೋದನ್ನು ನಾವು ನೋಡಿದ್ದೇವೆ. ಇದೀಗ ಅಂಥದ್ದೇ ಒಂದು ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.
ಕೊಲ್ಲಾಪುರದ ಕುಟುಂಬವೊಂದು ಪಂಡರಾಪುರಕ್ಕೆ ಪಾದಯಾತ್ರೆ ಹೊರಡುವಾಗ ತನ್ನೊಂದಿಗೆ ತಮ್ಮ ಮುದ್ದಿನ ಸಾಕು ನಾಯಿಯನ್ನು ಕರೆದುಕೊಂಡು ಹೋಗಿದ್ದರು. ಶ್ರೀ ವಿಠ್ಠಲನ ದರ್ಶನಕ್ಕೆ ಕುಟುಂಬ ಹೋದಾಗ ನಾಯಿ ಕುಟುಂಬದೊಂದಿಗೆ ಸಂಪರ್ಕ ಕಡಿದು ಕೊಂಡಿದೆ. ಕಳೆದು ಹೋದ ನಾಯಿಯನ್ನು ಎಷ್ಟು ಹುಡುಕಾಡಿದರೂ ಸಿಗದ ಕಾರಣ ಬೇಸರದಲ್ಲಿಯೇ ಕುಟುಂಬ ಮನೆಗೆ ಹೆಜ್ಜೆ ಹಾಕಿದ್ದರು.
ಎರಡು ದಿನ ಕಳೆದು ಮನೆಯವರಿಗೆ ಅಚ್ಚರಿ ಕಾದಿತ್ತು. ಅವತ್ತು ಬೆಳಿಗ್ಗೆ ಮನೆಯವರು ಎದ್ದಾಗ ವಿಸ್ಮಯ ಎದುರಾಗಿತ್ತು. ಬರೋಬ್ಬರಿ 225 ಕಿ.ಮೀ ದೂರದಲ್ಲಿ ಕಳೆದುಹೋಗಿದ್ದ ನಾಯಿ ತಮ್ಮ ಮನೆ ಮುಂದೆ ಬಾಲ ಅಲ್ಲಾಡಿಸುತ್ತಾ ನಿಂತಿತ್ತು. ಯಾರ ಸಹಾಯವೂ ಇಲ್ಲದೆ ತನ್ನ ಯಜಮಾನನನ್ನು ಹುಡುಕಿಕೊಂಡು ಮೈಲು ಮೈಲು ಸುತ್ತಿಕೊಂಡು ನಾಯಿ ಬಂದಿತ್ತು. ತನ್ನ ನಾಯಿಯ ಪ್ರೀತಿ ನೋಡಿ ಮಾಲೀಕನೇ ಆಶ್ಚರ್ಯಗೊಂಡಿದ್ದಾನೆ. ವಾಪಸ್ ಬಂದ ನಾಯಿಗೆ ಕುಟುಂಬಸ್ಥರು ಹೂವಿನ ಹಾರ ಹಾಕಿ, ತಿಲಕ ಇಟ್ಟು ಊರಿನಲ್ಲಿ ಮೆರವಣಿಗೆ ಮಾಡಿದ್ದಾರೆ.
ತನ್ನ ಪ್ರೀತಿಯ ನಾಯಿ ಕಳುವಾಗಿರುವ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಶ್ವಾನದ ಚಿತ್ರ ಸಮೇತ ಮಾಹಿತಿ ಹಂಚಿಕೊಂಡಿದ್ದರು. ನಾಯಿ ಬಗ್ಗೆ ಯಾವುದೇ ಮಾಹಿತಿ ಬರದಿದ್ದರೂ. ಸ್ವತಃ ನಾಯಿಯೇ ಎರಡು ದಿನ ನಂತರ ಬಂದು ಅವರ ಜೊತೆ ಸೇರಿದೆ. ನಾಯಿಗಳು ಎಲ್ಲೆ ಕಳೆದು ಹೋದರು ಸಾಮಾನ್ಯವಾಗಿ ಮತ್ತೆ ಮನೆ ಸೇರುತ್ತವೆ. ಇದಕ್ಕೆ ಕಾರಣ ಅವು ಹೋಗುವಾಗ ಅಲ್ಲಲ್ಲಿ ಮಾಡಿಕೊಂಡು ಹೋಗಿರುವ ಮಲವಿಸರ್ಜನೆ. ಇದರ ವಾಸನೆಯನ್ನು ಗ್ರಹಿಸಿಕೊಂಡು ಮತ್ತೆ ಹಿಂದಕ್ಕೆ ಜಾಡು ಹಿಡಿದು ಮನೆ ಸೇರುತ್ತವೆ ಎಂದು ಪಶು ವೈದ್ಯಾಧಿಕಾರಿಗಳು ಹೇಳುತ್ತಾರೆ.