Belthangady: ನಾಪತ್ತೆಯಾಗಿದ್ದ ಬೆಳ್ತಂಗಡಿ ಆಟೋ ಚಾಲಕ - ಕಾರ್ಕಳದಲ್ಲಿ ಶವವಾಗಿ ಪತ್ತೆ
Belthangady: ಉಜಿರೆಯ ಆಟೋ ಚಾಲಕ ಸುಧಾಕರ ಮಾಚಾರ್ ಎಂಬವರು ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಇದೀಗ ಕಾರ್ಕಳದ ನಲ್ಲೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
01:03 PM Jul 01, 2024 IST | ಕಾವ್ಯ ವಾಣಿ
UpdateAt: 01:07 PM Jul 01, 2024 IST
Advertisement
Belthangady: ಉಜಿರೆಯ ಆಟೋ ಚಾಲಕ ಸುಧಾಕರ ಮಾಚಾರ್ ಎಂಬವರು ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಇದೀಗ ಕಾರ್ಕಳದ ನಲ್ಲೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Advertisement
35 ವರ್ಷದ ಸುಧಾಕರ್ ಅವರು ಶುಕ್ರವಾರ ಜೂನ್ 28 ರಂದು ಬೆಳಗಿನ ಉಪಹಾರ ಮುಗಿಸಿ ಆಟೋರಿಕ್ಷಾ ಚಲಾಯಿಸಿಕೊಂಡು ಬೆಳ್ತಂಗಡಿಯಿಂದ (Belthangadi) ಹೊರಟವರು ವಾಪಸ್ ಬಂದಿಲ್ಲ ಮತ್ತು ಯಾವುದೇ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ. ಅಲ್ಲದೇ ಅವರ ಕುಟುಂಬ ಸದಸ್ಯರು, ಆಪ್ತರು, ಆಟೋ ಚಾಲಕರು ಹುಡುಕಾಟ ನಡೆಸಿದರೂ ಅವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.
Advertisement
ಇದೀಗ ಶನಿವಾರ ಕಾರ್ಕಳದ ನಲ್ಲೂರು ಸಮೀಪದ ಪಾದೆಗುಡ್ಡೆ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಸದ್ಯ ಈ ಬಗ್ಗೆ ಹೆಚ್ಚಿನ ಮಾಹಿತಿ ವಿಚಾರಣೆ ನಂತರ ಇನ್ನಷ್ಟೇ ತಿಳಿದುಬರಬೇಕಿದೆ.
Advertisement