ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Parliment election : ಪ್ರತಾಪ್ ಸಿಂಹಗೆ ಈ ಸಲ ಟಿಕೆಟ್ ಮಿಸ್? ಯಾರೂ ಊಹಿಸದ ಇವರು ಬಿಜೆಪಿಯಿಂದ ಕಣಕ್ಕಿಳಿಯೋದು ಫಿಕ್ಸ್ ?

11:59 PM Mar 09, 2024 IST | ಹೊಸ ಕನ್ನಡ
UpdateAt: 11:59 PM Mar 09, 2024 IST
Advertisement

Parliment election : ಈ ಬಾರಿ ಲೋಕಸಭೆ ಚುನಾವಣೆಯಲ್ಲಿ(Parliament election) ಮೈಸೂರಿನಿಂದ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ನೀಡಲು ರಾಜ್ಯ ಬಿಜೆಪಿ ನಾಯಕರು ನಿರಾಕರಿಸುತ್ತಿದ್ದಾರೆ ಎಂದು ಭಾರೀ ಸುದ್ದಿಯಾಗುತ್ತಿದೆ. ಈ ಬೆನ್ನಲ್ಲೇ ಬಿಜೆಪಿ(BJP)ಯಿಂದ ಮೈಸೂರು ಅರಸ ಯದುವೀರ್ ಒಡೆಯರು ಕಣಕ್ಕಿಳಿಯುತ್ತಾರೆ ಎನ್ನುವ ವಿಚಾರವೂ ಚರ್ಚೆಯಾಗುತ್ತಿದೆ.

Advertisement

ನಾನು ಮೈಸೂರು- ಕೊಡಗು ಕ್ಷೇತ್ರದಲ್ಲಿ (Mysore Kodadu Constituency) ಗೆದ್ದರೆ ಸಿಎಂ ಸಿದ್ದರಾಮಯ್ಯ(CM Siddaramaiah)ಸೀಟು ಅಲುಗಾಡುತ್ತದೆ. ಆ ಮಟ್ಟದ ಹವಾ ಇದೆ. ನಾನು ಸಂಸದನಾಗಿ ಯಾರೂ ಮಾಡದಷ್ಟು ಕೆಲಸ ಮಾಡಿದ್ದೇನೆ ಎಂದು ಹೇಳುತ್ತಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಬುಡವೇ ಅಲುಗಾಡುತ್ತಿದೆ..ಯಾಕೆಂದರೆ ಈ ಸಲ ಬಿಜೆಪಿಯಿಂದ ಅವರಿಗೆ ಟಿಕೆಟ್ ಸಿಗೋದು ಡೌಟ್ ಎನ್ನಲಾಗಿದೆ. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra)ಅವರು ನೀಡಿರುವ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹೌದು, ವಿಜಯೇಂದ್ರ ಅವರ ಬಳಿ ಪ್ರತಾಪ್ ಸಿಂಹ(Pratap simha)ಗೆ ಟಿಕೆಟ್ ಮಿಸ್ ಆಗತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ವಿಜಯೇಂದ್ರ ನಾಲ್ಕು ಗೋಡೆ ಮಧ್ಯೆ ಅನೇಕ ವಿಚಾರ ಚರ್ಚೆ ಆಗಿದೆ. ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಊಹಾಪೋಹಗಳಿಗೆ ಉತ್ತರ ಕೊಡುವುದಿಲ್ಲ ಎಂದಿದ್ದು, ಪರೋಕ್ಷವಾಗಿ ಪ್ರತಾಪ್ ಸಿಂಹ್ ಗೆ ಟಿಕೆಟ್ ಮಿಸ್ ಆಗುವ ಸುಳಿವು ನೀಡಿದರಾ? ಎಂಬ ಅನುಮಾನ ಮೂಡಿದೆ.

Advertisement

ಇಷ್ಟೇ ಅಲ್ಲದೆ ಮೈಸೂರಿ(Mysore)ಗೆ ಯದುವೀರ್ ಒಡೆಯರ್ ಸ್ಪರ್ಧೆ ವಿಚಾರವಾಗಿ ವಿಜಯೇಂದ್ರ ಅವರು ತೇಲಿಸೇ ಮಾತನಾಡಿ ಗೆಲ್ಲುವ ಅಭ್ಯರ್ಥಿ ಹಾಕ್ತೇವೆ ಎಂದಿದ್ದಾರೆ. ಈ ಮೂಲಕ ವಿಜಯೇಂದ್ರ ಅವರು ಮೈಸೂರಲ್ಲಿ ಅಭ್ಯರ್ಥಿ ಬದಲಾವಣೆ ಸುಳಿವು ಕೊಟ್ಟಿದ್ದಾರೆ, ಯದುವೀರ್ ಸ್ಪರ್ಧೆ ಪಕ್ಕಾ ಎನ್ನಲಾಗಿದೆ. ಅಲ್ಲದೆ ಬಿಜೆಪಿ ಕಳೆದ ಹಲವು ಸಮಯದಿಂದ ಯದುವೀರ್‌ ಅವರ ಜತೆ ಸಂಪರ್ಕದಲ್ಲಿದೆ. ಒಂದು ವೇಳೆ ಅವರು ಒಪ್ಪುವುದೇ ಖಚಿತವಾದರೆ ಮೈಸೂರಿನಿಂದ ಅವರಿಗೆ ಟಿಕೆಟ್‌ ನೀಡುವುದು ಖಚಿತ ಎಂಬ ಅಭಿಪ್ರಾಯವಿದೆ. ಈ ಬಾರಿ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂದಹಾಗೆ ಪ್ರತಾಪ್‌ ಸಿಂಹ ಅವರು ಉತ್ತಮ ಕೆಲಸಗಾರರೇ ಆದರೂ ಪಕ್ಷದಲ್ಲಿ ಉತ್ತಮ ಅಭಿಪ್ರಾಯ ಇಲ್ಲದೆ ಇರುವುದು ಮತ್ತು ಅವರ ಗೆಲುವಿನ ಬಗ್ಗೆ ಸಮೀಕ್ಷೆಯಲ್ಲಿ ಸಕಾರಾತ್ಮಕ ಅಂಶಗಳು ಕಂಡುಬಂದಿಲ್ಲ ಎಂಬ ಕಾರಣಕ್ಕಾಗಿ ಹೈಕಮಾಂಡ್‌ ಅವರಿಗೆ ಟಿಕೆಟ್‌ ಕೊಡುವ ಬಗ್ಗೆ ಹಿಂದೆ ಮುಂದೆ ನೋಡುತ್ತಿದೆ ಎನ್ನಲಾಗಿದೆ.

Advertisement
Advertisement