Ice Cream Seller: ಐಸ್‌ಕ್ರೀಮ್ ಕೊಳ್ಳಲು ಬಂದ ಬಾಲಕಿಯ ಹಿಂಭಾಗ ಮುಟ್ಟಿ ಮಾರಾಟಗಾರನ ಅಸಭ್ಯ ವರ್ತನೆ; ವೀಡಿಯೋ ವೈರಲ್
Ice Cream Seller: ಕಾಮುಕರ ಅಟ್ಟಹಾಸ ಎಲ್ಲೆ ಮೀರುತ್ತಿದೆ. ಅಪ್ರಾಪ್ತ ಬಾಲಕಿಯರನ್ನೇ ಟಾರ್ಗೆಟ್ ಮಾಡುತ್ತಿರುವ ಕಾಮುಕರು ಬೀದಿ ಬೀದಿಯಲ್ಲಿ ಭಯವಿಲ್ಲದೆ ಸುತ್ತಾಡುತ್ತಿದ್ದಾರೆ. ಅಂತೆಯೇ, ಐಸ್ ಕ್ರೀಮ್ ಮಾರಾಟಗಾರನೊಬ್ಬ ತನ್ನ ಬಳಿ ಐಸ್ ಕ್ರೀಮ್ ಕೊಳ್ಳಲು ಬಂದ ಬಾಲಕಿಗೆ ಫ್ರೀ ಐಸ್ ಕ್ರೀಮ್ ಆಸೆ ತೋರಿಸಿ ಆ ಮುಗ್ಧ ಬಾಲಕಿಯ ಮೈ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಕುರಿತ ಅಘಾತಕಾರಿ ವಿಡಿಯೋವೊಂದು ವೈರಲ್ (Viral Video) ಆಗುತ್ತಿದೆ. ಈ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದ್ದು, ಐಸ್ ಕ್ರೀಮ್ ಮಾರಾಟಗಾರನೊಬ್ಬ (Ice Cream Seller) ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ.
ಮಾಹಿತಿ ಪ್ರಕಾರ ಎರಡು ವಾರಗಳ ಹಿಂದೆ ಜಹಾಂಗೀರಾಬಾದ್‌ನಲ್ಲಿ 11 ವರ್ಷ ವಯಸ್ಸಿನ ಬಾಲಕಿಯೊಬ್ಬಳು ಐಸ್ ಕ್ರೀಮ್ ಕೊಳ್ಳಲು ಬಂದಿದ್ದು, ಆ ಸಂದರ್ಭದಲ್ಲಿ ಮಾರಾಟಗಾರ ಮೊಹಮ್ಮದ್ ಖಾಲಿದ್ ಖಾನ್ (52) ಎಂಬಾತ ಬಾಲಕಿಯ ಮೈ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಈತನ ಈ ಹೇಯ ಕೃತ್ಯವನ್ನು ಸ್ಥಳೀಯ ನಿವಾಸಿಯಾದ ರಮೇಶ್ ಸಾಹು ಎಂಬಾತ ರೆಕಾರ್ಡ್ ಮಾಡಿದ್ದು, ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಾಲಕಿಯ ತಾಯಿ ದೂರನ್ನು ನೀಡಿದ್ದು, ತಾಯಿ ನೀಡಿದ ದೂರಿನ ಹಿನ್ನೆಲೆ ಜಹಾಂಗೀರಾಬಾದ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆದ್ರೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ತನ್ನ ಊರಿಗೆ ಎಸ್ಕೇಪ್ ಆಗಿದ್ದು, ನಂತರ ಆರೋಪಿಯನ್ನು ಕಲ್ಪಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಜುಲೈ 10 ರಂದು ಈ ಕುರಿತ ಪೋಸ್ಟ್ ಒಂದನ್ನು CeoVoice_ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ‘ ಇಂತಹ ಕಾಮುಕರಿಗೆ ಸರಿಯಾದ ಶಿಕ್ಷೆ ನೀಡಬೇಕು’ ಎಂದು ಕಿಡಿಕಾರಿದ್ದಾರೆ. ಇನ್ನೂ ಅನೇಕರು ಇಂತಹ ಕಾಮುಕರು ಬೀದಿ ಬೀದಿಗಳಲ್ಲಿ ಇದ್ದು, ಇವರ ನೀಚ ಕೃತ್ಯ ನಿಲ್ಲಲು, ಇಂತಹವರಿಗೆ ಬಿಸಿ ಮುಟ್ಟಿಸಲೇ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
మీ పిల్లలను జాగ్రత్తగా చూసుకోండి 🙏
భోపాల్ : జహంగీరాబాద్లో ఐస్క్రీం అమ్మే వ్యక్తి 11 ఏళ్ల బాలికకు ఉచితంగా ఐస్క్రీం ఇప్పిస్తానని అసభ్యకరంగా ప్రవర్తిస్తూ పట్టుబడ్డాడు. pic.twitter.com/SXDVB9WR9t— CEO Voice (@CeoVoice_) July 10, 2024