ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Iran-Israel: ಮಧ್ಯಪ್ರಾಚ್ಯ ಉದ್ವಿಗ್ನ : ಇರಾನ್‌, ಇಸ್ರೇಲ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ಇಲಾಖೆಯಿಂದ ಸೂಚನೆ

Iran-Israel: ಇರಾನ್ ಇಸ್ರೇಲ್ ಮೇಲೆ ನೇರ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ವರದಿಗಳ ಮಧ್ಯೆ ವಿದೇಶಾಂಗ ಸಚಿವಾಲಯ ಸೂಚನೆ ಹೊರಡಿಸಿದೆ.
10:06 PM Apr 12, 2024 IST | ಸುದರ್ಶನ್
UpdateAt: 10:33 PM Apr 12, 2024 IST
Advertisement

Iran-Israel: ಮುಂದಿನ ಸೂಚನೆ ಬರುವವರೆಗೂ ಇರಾನ್ ಮತ್ತು ಇಸ್ರೇಲ್‌ಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಮುಂದಿನ 48 ಗಂಟೆಗಳಲ್ಲಿ ಇರಾನ್ ಇಸ್ರೇಲ್ ಮೇಲೆ ನೇರ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ವರದಿಗಳ ಮಧ್ಯೆ ವಿದೇಶಾಂಗ ಸಚಿವಾಲಯ ಸೂಚನೆ ಹೊರಡಿಸಿದೆ.

Advertisement

ಇದನ್ನೂ ಓದಿ: Adhar Card: ಆಧಾರ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್! ಹೊಸ ಪೋರ್ಟಲ್ ಸ್ಟಾರ್ಟ್

ಪ್ರಸ್ತುತ ಇರಾನ್ ಹಾಗೂ ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯರು ಅಲ್ಲಿನ ಭಾರತೀಯ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಿ ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ಸಚಿವಾಲಯ ತಿಳಿಸಿದೆ.

Advertisement

ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇಸ್ರೇಲ್ ನಲ್ಲಿರುವ ಭಾರತೀಯ ಪ್ರಜೆಗಳಿಗೆ "ಅನಗತ್ಯ ಪ್ರಯಾಣವನ್ನು ತಪ್ಪಿಸಿ, ಸುರಕ್ಷಿತವಾಗಿರಿ ಮತ್ತು ಸ್ಥಳೀಯ ಅಧಿಕಾರಿಗಳು ನೀಡುವ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲು" ವಿನಂತಿಸಿದೆ.

ಇದನ್ನೂ ಓದಿ: Numerology: ಈ ಡೇಟ್ ನಲ್ಲಿ ಹುಟ್ಟಿದವರು ಸುಳ್ಳು ಹೇಳಲ್ಲ, ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಇವರು!

ಮುಂದಿನ 48 ಗಂಟೆಗಳಲ್ಲಿ ಇರಾನ್ ಇಸ್ರೇಲ್ ಮೇಲೆ ನೇರ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಇರಾನ್ ನಾಯಕತ್ವದಿಂದ ಮಾಹಿತಿ ಪಡೆದ ವ್ಯಕ್ತಿಯನ್ನು ಉಲ್ಲೇಖಿಸಿ ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ ನಂತರ ವಿದೇಶಾಂಗ ಸಚಿವಾಲಯದ ಈ ಸಲಹೆ ಬಂದಿದೆ. ವರದಿಯಲ್ಲಿ ಉಲ್ಲೇಖಿಸಿದ ವ್ಯಕ್ತಿ ಇರಾನ್ ಇಸ್ರೇಲ್ ಮೇಲೆ ನೇರ ದಾಳಿಯ ಅಪಾಯಗಳನ್ನು ಇದೆ ಎಂದು ಹೇಳಿದ್ದಾರೆ.

ಇದರ ಹಿನ್ನೆಲೆ, ಇಬ್ಬರು ಅಮೆರಿಕನ್ ಅಧಿಕಾರಿಗಳು ಬಿಬಿಸಿಯ ಯುಎಸ್ ಪಾಲುದಾರ ಸಿಬಿಎಸ್ ನ್ಯೂಸ್‌ಗೆ ಶುಕ್ರವಾರ ದಾಳಿ ಬರಬಹುದು ಎಂದು ಹೇಳಿದ್ದಾರೆ. ದಾಳಿಯಲ್ಲಿ 100 ಕ್ಕೂ ಹೆಚ್ಚು ಡೋನ್‌ಗಳು, ಡಜನ್‌ಗಟ್ಟಲೆ ಕ್ರೂಸ್ ಕ್ಷಿಪಣಿಗಳು ಮತ್ತು ಬಹುಶಃ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಇಸ್ರೇಲ್‌ನಲ್ಲಿನ ಮಿಲಿಟರಿ ಗುರಿಗಳನ್ನು ಗುರಿಯಾಗಿಸಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Advertisement
Advertisement