For the best experience, open
https://m.hosakannada.com
on your mobile browser.
Advertisement

Wayanad: ವಯನಾಡ್ ದುರಂತದ ಬಗ್ಗೆ ವರ್ಷದ ಹಿಂದೆಯೇ ಸುಳಿವು ನೀಡಿದ್ದ ಮಾನಸಿಕ ಅಸ್ವಸ್ಥ! ವಿಡಿಯೋ ವೈರಲ್!

Wayanad: ಕೇರಳದ ಭೂಕುಸಿತ ದುರಂತದಲ್ಲಿ ಸತ್ತವರ ಸಂಖ್ಯೆ 300 ರ ಆಸು ಪಾಸಿನಲ್ಲಿದೆ. ಹಚ್ಚ ಹಸಿರು, ಬೆಟ್ಟ ಗುಡ್ಡಗಳಿಂದ ಕೂಡಿದ ಸುಂದರ ವಯಾನಡು ಇದೀಗ ನರಕ ಸದೃಶ್ಯವಾಗಿದೆ.
03:54 PM Aug 01, 2024 IST | ಕಾವ್ಯ ವಾಣಿ
UpdateAt: 03:55 PM Aug 01, 2024 IST
wayanad  ವಯನಾಡ್ ದುರಂತದ ಬಗ್ಗೆ ವರ್ಷದ ಹಿಂದೆಯೇ ಸುಳಿವು ನೀಡಿದ್ದ ಮಾನಸಿಕ ಅಸ್ವಸ್ಥ  ವಿಡಿಯೋ ವೈರಲ್
Advertisement

Wayanad: ಕೇರಳದ ಭೂಕುಸಿತ ದುರಂತದಲ್ಲಿ ಸತ್ತವರ ಸಂಖ್ಯೆ 300 ರ ಆಸು ಪಾಸಿನಲ್ಲಿದೆ. ಹಚ್ಚ ಹಸಿರು, ಬೆಟ್ಟ ಗುಡ್ಡಗಳಿಂದ ಕೂಡಿದ ಸುಂದರ ವಯಾನಡು ಇದೀಗ ನರಕ ಸದೃಶ್ಯವಾಗಿದೆ. ಎಲ್ಲೆಡೆ ಮೃತದೇಹಗಳು ಸಿಗುತ್ತಿದೆ. ಶವಗಳ ರಾಶಿ ನದಿಯಲ್ಲಿ ತೇಲುತ್ತಿದೆ. ಈ ವಯನಾಡು (Wayanad) ಭೂಕುಸಿತ ದುರಂತ ಘಟನೆ ಬಗ್ಗೆ, ಅದರಿಂದ ಆಗುವ ಸಾವು ನೋವಿನ ಕುರಿತು ಕೆಲ ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥ ಮೊದಲೇ ಭವಿಷ್ಯ ನುಡಿದಿದ್ದು, ಇಂದಿನ ಪರಿಸ್ಥಿತಿಯನ್ನು ನಿಖರವಾಗಿ ಸೂಚಿಸಿದ್ದ ಈತನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.

Advertisement

ಹೌದು, ಈ ಭಯಾನಕ ದುರಂತದ ಕುರಿತು ಕೆಲ ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥನೊಬ್ಬ ಭವಿಷ್ಯ ನುಡಿದಿದ್ದ. ಸದ್ಯದ ಪರಿಸ್ಥಿತಿಯನ್ನು ನಿಖರವಾಗಿ ಊಹಿಸಿದ್ದ. ಆದರೆ ಈತನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಷ್ಟೇ ಅಲ್ಲ ಈ ಕುರಿತು ವಿಡಿಯೋ ಕೂಡ ವೀಕ್ಷಣೆ ಕಾಣದೆ ಸೊರಗಿತ್ತು. ಇದೀಗ ಕೇರಳ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹ ದುರಂತ  ಚಿತ್ರವಣನ್ನು ತೆರೆದಿಟ್ಟು ಎಚ್ಚರಿಸಿದ್ದ. ಈ ಮಾನಸಿಕ ಅಸ್ವಸ್ಥ ಹೇಳಿದ ಭವಿಷ್ಯ ಇಲ್ಲಿದೆ.

ಯಾರಿಗೂ ಸಮಯವೇ ಇಲ್ಲ, ಹಣ ಮಾಡುವುದರಲ್ಲಿ ಬ್ಯೂಸಿಯಾಗಿದ್ದಾರೆ. ಕಂತೆ ಕಂತೆ ಹಣ ಮಾಡಿ ಈ ರೀತಿ ದೊಡ್ಡ ಅರಮನೆ ರೀತಿಯ ಕಟ್ಟಡ ಕಟ್ಟುತ್ತಿದ್ದಾರೆ. ಆದರೆ ನೆನಪಿಟ್ಟುಕೊಳ್ಳಿ, ಇದೆಲ್ಲಾ ಕೊನೆಗೆ ನೀರು, ಮಣ್ಣು, ಕಲ್ಲು ಪ್ರವಾಹ ರೀತಿಯಲ್ಲಿ ಬರುತ್ತದೆ. ಅದು ಮರಣದ ಓಟವಾಗಿರುತ್ತದೆ. ಈ ಮೃತ್ಯವಿನ ಓಟಕ್ಕೆ ಎಲ್ಲವೂ ನಶಿಸುತ್ತದೆ. ನೀವು, ನಿಮ್ಮ ಕುಟುಂಬ, ಗ್ರಾಮದವರರು ಎಲ್ಲವೂ ಶೂನ್ಯ ಆಗಲಿದೆ.

Advertisement

ಅದಕ್ಕೂ ಮುನ್ನ ಈ ದುರಂತವನ್ನು ತಡೆಯಲು ನೋಡಿ, ಏನಾದರು ಪ್ರಯತ್ನ ಮಾಡಿ. ಹಿಂದೂ, ಮುಸ್ಲಿಂ, ಕ್ರಿಶ್ಟಿಯನ್ ಎಲ್ಲರು ಸಾಯುತ್ತಾರೆ. ಬಡವ, ಶ್ರೀಮಂತ ಎಲ್ಲರು ಸಾಯುತ್ತಾರೆ. ಹೋಗಿ ತಡೆಯಿರಿ, ಇಲ್ಲದಿದ್ದರೆ ಒಂದು ದಿನ ನೀರಿನಲ್ಲಿ  ಮೃತದೇಹ ತೇಲುತ್ತದೆ. ಹಲವರ ಕೆಸರು ಮಣ್ಣಿನಡಿಯಲ್ಲಿ ಮೌನವಾಗುತ್ತಾರೆ. ಯಾರಿಗೂ ಸಮಯ ಇಲ್ಲ, ಸಾಧ್ಯವಾದರೆ ಹೋಗಿ ತಡೆಯಿರಿ ಎಂದು ಈ ಮಾನಸಿಕ ಅಸ್ವಸ್ಥ ಹೇಳಿದ್ದಾನೆ. ಇದೀಗ ಹೇಳಿಕ ಪ್ರತಿಯೊಂದು ಮಾತುಗಳು ಅಕ್ಷರಶಃ ನಿಜವಾಗಿದೆ. ಈ ಕುರಿತ ಹಳೇ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಹಲವು ಎಚ್ಚರಿಕೆ ಕರೆಗಂಟೆಗಳನ್ನು ಮನುಷ್ಯ ನಿರ್ಲಕ್ಷಿಸುತ್ತಿದ್ದಾನೆ ಎಂದು ಇದೀಗ ಭಾರಿ ಚರ್ಚೆಯಾಗುತ್ತಿದೆ.

HSRP Number Plate: HSRP ನಂಬರ್ ಪ್ಲೇಟ್‌ ಬುಕಿಂಗ್‌ ಮಾಡುವವರಿಗೆ ಹೊಸ ಪ್ರಾಬ್ಲಮ್!

Advertisement
Advertisement
Advertisement