ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

ಶಿರಾಡಿ ಘಾಟ್‌ನ ದೊಡ್ಡತಪ್ಲುವಿನಲ್ಲಿ ಮತ್ತೆ ಭಾರಿ ಭೂಕುಸಿತ : ಮಣ್ಣಿನಡಿಯಲ್ಲಿ 2 ಕಂಟೈನರ್‌ : ಸಂಚಾರ ಸಂಪೂರ್ಣ ಬಂದ್

Shiradi Ghat: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರುಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆ ಸಂಚಾರ ಹದಗೆಟ್ಟಿದೆ. ಮೇಲಿಂದ ಮೇಲೆ ಗುಡ್ಡ ಕುಸಿತದ ಪರಿಣಾಮ ವಾಹನಗಳು ಓಡಾಡಲು ಆಗದ ಪರಿಸ್ಥಿತಿ ಎದುರಾಗಿದೆ.
08:07 PM Jul 31, 2024 IST | ಸುದರ್ಶನ್
UpdateAt: 08:07 PM Jul 31, 2024 IST
Advertisement

Shiradi Ghat: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರುಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆ ಸಂಚಾರ ಹದಗೆಟ್ಟಿದೆ. ಮೇಲಿಂದ ಮೇಲೆ ಗುಡ್ಡ ಕುಸಿತದ ಪರಿಣಾಮ ವಾಹನಗಳು ಓಡಾಡಲು ಆಗದ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಮಂಗಳೂರು-ಬೆಂಗಳೂರು ರೈಲು ಸಂಪರ್ಕ ಕಡಿತಗೊಂಡಿದೆ. ಸಕಲೇಶಪುರ- ಸುಬ್ರಹ್ಮಣ್ಯ ರೈಲ್ವೇ ಹಳಿಗಳ ಮೇಲೆ ಮಣ್ಣು ಬಿದ್ದ ಪರಿಣಾಮ ಇನ್ನು ಸಂಚಾರಕ್ಕೆ ಮುಖ್ತವಾಗಿಲ್ಲ. ಈ ಮಧ್ಯೆಯೇ ನಿನ್ನೆ ಶಿರಾಡಿ ಘಾಟ್‌ನಲ್ಲಿ ಭಾರಿ ಭೂ ಕುಸಿತ ಉಂಟಾದ ಪರಿಣಾಮ ನಾಲ್ಕಾರು ವಾಹನಗಳು ಮಣ್ಣಿನ ಅಡಿಯಲ್ಲಿ ಸಿಲುಕಿದ್ದವು. ರಸ್ತೆ ಮಣ್ಣು ಬಿದ್ದ ಪರಿಣಾಮ ಕಾಮಗಾರಿಯಲ್ಲಿದ್ದ ಪರಿಣಾಮ ಸಂಚಾಋ ಬಂದ್‌ ಮಾಡಲಾಗಿದೆ. ‌

Advertisement

ಆದರೆ ಇದೀಗ ಬಂದ ಮಾಹಿತಿ ಪ್ರಕಾರ ಮತ್ತೆ ಶಿರಾಡಿ ಘಾಟ್‌ನ ಮಾರೇನಹಳ್ಳಿ ಸಮೀಪದ ದೊಡ್ಡ ತಪ್ಲು ಬಳಿ ಹೆದ್ದಾರಿಗೆ ಮತ್ತೆ ಗುಡ್ಡ ಕುಸಿದು ಬಿದ್ದಿದ್ದು, ಎರಡು ದೊಡ್ಡ ಕಂಟೈನರ್‌ಗಳು ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ನಿನ್ನೆಯೇ ಬಂದಾಗಿದ್ದ ರಸ್ತೆ ಸಂಚಾರ ಮತ್ತೆ ಸಂಪೂರ್ಣ ಬಂದ್‌ ಆಗಿದೆ. ಮಂಗಳೂರು – ಬೆಂಗಳೂರು ಸಂಚರಿಸುವವರು ಆದಷ್ಟು ಸಂಚಾರವನ್ನು ಮುಂದೂಡುವುದು ಒಲಿತು. ಹಾಗೂ ಬದಲಿ ಮಾರ್ಗಗಳನ್ನು ಬಳಸಿ ಸಂಚರಿಸುವುದು ಉತ್ತಮ. ಸದ್ಯಕ್ಕೆ ಸಂಪಾಜೆ – ಮಡಿಕೇರಿ ಅಥವಾ ಬೆಳ್ತಂಗಡಿ – ಚಾರ್ಮಾಡಿ ಘಾಟ್ ರಸ್ತೆಯ ಮುಖಾಂತರ ತೆರಳಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Advertisement

Related News

Advertisement
Advertisement