Mashco Piro: ಪ್ರಪ್ರಥಮ ಬಾರಿಗೆ ಹೊರ ಜಗತ್ತಿಗೆ ಕಾಣಿಸಿಕೊಂಡ 'ಮಾಶ್ಕೊ ಪಿರೋ' ಬುಡಕಟ್ಟು ಜನಾಂಗ !! ಇದಕ್ಕಿಂದ್ದಂತೆ ಇವರು ಹೊರಟದ್ದೆಲ್ಲಿಗೆ ?
Mashco Piro: ಪ್ರಪಂಚದ ಕಾಡುಗಳಲ್ಲಿ ಇಂದಿಗೂ ಕೂಡ ಅನೇಕ ಬುಡಕಟ್ಟುಗಳು ನಿಗೂಢವಾಗಿಯೇ ಉಳಿದಿವೆ. ಅವು ಯಾರ ಕಣ್ಣಿಗೂ ಬೀಳದೆ, ಹೊರ ಜಗತ್ತಿನ ಅರಿವಿಲ್ಲದೆ ಪ್ರಕೃತಿ ಮಡಿಲಲ್ಲೇ ಜೀವಿಸುತ್ತಿವೆ. ಅಂತೆಯೇ ಇವುಗಳಲ್ಲಿ ಪ್ರಮುಖವಾದುದು ಎಂದರೆ ಪೆರುವಿಯನ್ ಅಮೆಜಾನ್ ನಲ್ಲಿ (Peruvian Amazon) ಇರುವ ಪ್ರಪಂಚದ ಅತೀ ದೊಡ್ಡ ಬುಡಕಟ್ಟು ಸಮುದಾಯವಾದ (World’s Largest Tribe)ಮಾಶ್ಕೊ ಪಿರೋ (Mashco Piro) ಸಮುದಾಯ.
Mansoon Session: ಇಂದಿನಿಂದ ಮುಂಗಾರು ಅಧಿವೇಶನ ಶುರು – ಮಂಡನೆಯಾಗಲಿದೆ ಈ 6 ಮಸೂದೆಗಳು !!
ಹೌದು, ಪೆರುವಿಯನ್ ಅಮೆಜಾನ್ ನಲ್ಲಿ (Peruvian Amazon) ಇರುವ ಮಾಶ್ಕೊ ಪಿರೋ (Mashco Piro) ಸಮುದಾಯ ಇಂದಿಗೂ ಯಾರಕಣ್ಣಿಗೂ ಬಿದ್ದಿಲ್ಲ. ಇವರದು ಹೊರ ಜಗತ್ತಿನ ಸಂಪರ್ಕವಿಲ್ಲದ ಬುಡಕಟ್ಟು ಸಮುದಾಯ. ಆದರೆ ಇದೇ ಮೊದಲ ಬಾರಿಗೆ ಈ ಸಮುದಾಯ ಹೊರ ಜಗತ್ತಿನ ಕಣ್ಣಿಗೆ ಬಿದ್ದಿರೆ. ಈ ಜನರ ಚಲನವಲನದ ಅಪರೂಪದ ದೃಶ್ಯಗಳನ್ನು ʼಸರ್ವೈವಲ್ ಇಂಟರ್ನ್ಯಾಷನಲ್ʼ ಬಿಡುಗಡೆ ಮಾಡಿದೆ. ಮಾಶ್ಕೊ ಪಿರೋ ಬುಡಕಟ್ಟು ಸಮುದಾಯದ ಯೋಗಕ್ಷೇಮದ ಕಾಳಜಿ ಹೆಚ್ಚಾಗುತ್ತಿರುವ ಮಧ್ಯೆಯೇ ಈ ವಿಡಿಯೋ ತುಣುಕು ಬಿಡುಗಡೆಯಾಗಿದೆ. ಇದರಲ್ಲಿ ಮಾಶ್ಕೊ ಪಿರೋ ಬುಡಕಟ್ಟು ಸಮುದಾಯದ ಹಲವಾರು ಸದಸ್ಯರು ನದಿಯ ದಡದಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು.
ಅಂದಹಾಗೆ ಬ್ರೆಜಿಲ್‌ನ ಗಡಿಯಲ್ಲಿರುವ ಆಗ್ನೇಯ ಪೆರುವಿಯನ್ ಪ್ರಾಂತ್ಯದ ಮ್ಯಾಡ್ರೆ ಡಿ ಡಿಯೋಸ್‌ನ ನದಿಯ ದಡದ ಬಳಿ ಜೂನ್ ಅಂತ್ಯದಲ್ಲಿ ಈ ವಿಡಿಯೋಗಳನ್ನು ತಗೆದಿರುವುದಾಗಿ ʼಸರ್ವೈವಲ್ ಇಂಟರ್‌ನ್ಯಾಷನಲ್ʼ ವರದಿ ಮಾಡಿದೆ. ಈ ಪ್ರದೇಶದಲ್ಲಿ ಮರಗಳನ್ನು ಕಡಿಯುವುದು ಹೆಚ್ಚಾಗಿರುವುದರಿಂದ ಇಲ್ಲಿರುವ ಮಾಶ್ಕೊ ಪಿರೋ ಬುಡಕಟ್ಟು ಜನಾಂಗಕ್ಕೆ ಅಪಾಯ ಎದುರಾಗಿದೆ, ಅವರ ಸಾಂಪ್ರದಾಯಿಕ ಭೂಮಿಯಿಂದ ಅವರು ಹೊರಗೆ ತಳ್ಳಲ್ಪಡುತ್ತಿದ್ದಾರೆ. ಮಾಶ್ಕೊ ಪಿರೋ ಜನಾಂಗದವರು ಆಹಾರ ಮತ್ತು ಸುರಕ್ಷಿತ ಆಶ್ರಯಕ್ಕಾಗಿ ಹುಡುಕಾಡುತ್ತ ವಲಸೆ ಹೋಗುತ್ತಿರಬಹುದು ಎನ್ನಲಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಪೆರುವಿಯನ್ ಸರ್ಕಾರವು ಜೂನ್ 28ರಂದು ಮಡ್ರೆ ಡಿ ಡಿಯೋಸ್‌ನ ರಾಜಧಾನಿ ಪೋರ್ಟೊ ಮಾಲ್ಡೊನಾಡೊ ನಗರದಿಂದ 150 ಕಿಲೋಮೀಟರ್ ದೂರದಲ್ಲಿರುವ ಲಾಸ್ ಪೀಡ್ರಾಸ್ ನದಿಯ ದಡದಲ್ಲಿ ಮಾಶ್ಕೊ ಪಿರೊವನ್ನು ನೋಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ವರದಿ ಮಾಡಿದ್ದಾರೆ ಎಂದು ತಿಳಿಸಿದೆ.
ತುಂಬಾ ಡೇಂಜರ್ ಈ ಮಾಶ್ಕೊ ಪಿರೋ :
ಈ ಮಾಶ್ಕೊ ಪಿರೋ ಪೆರುವಿಯನ್ ಭಾಗದಲ್ಲಿ ಲಾಗರ್ಸ್‌ನಿಂದ ವಲಸೆ ಹೋಗುತ್ತಿದ್ದಾರೆ. ಈ ಸಮಯದಲ್ಲಿ ಅವರು ಟ್ರಾಕಾಜಾ ಅಂದರೆ ಅಮೆಜಾನ್ ಆಮೆಗಳ ಮೊಟ್ಟೆಗಳನ್ನು ತೆಗೆದುಕೊಳ್ಳಲು ಕಡಲತೀರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಯಾವ ಕ್ಷಣ ಏನು ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಶಾಂತಿಯ ವರ್ತನೆ ತೋರುವುದಿಲ್ಲ. ದಾಳಿಗೆ ಮುಂದಾಗುತ್ತಾರೆ. ಜನರನ್ನು ಕಂಡಾಕ್ಷಣ ಓಡಿ ಹೋಗುತ್ತಾರೆ.