For the best experience, open
https://m.hosakannada.com
on your mobile browser.
Advertisement

Marks Card: ಪರೀಕ್ಷೆಯಲ್ಲಿ 200ಕ್ಕೆ 212 ಅಂಕ ಪಡೆದ ವಿದ್ಯಾರ್ಥಿನಿ !!

Marks Card: ವಿದ್ಯಾರ್ಥಿನಿಯ ಮಾರ್ಕ್ಸ್ ಕಾರ್ಡ್(Marks Crad) ಕಂಡು ಪೋಷಕರು ಶಾಕ್ ಆಗಿದ್ದಾರೆ. ಸದ್ಯ ಬಾಲಕಿಯ ಮಾರ್ಕ್ಸ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
01:40 PM May 08, 2024 IST | ಸುದರ್ಶನ್
UpdateAt: 02:37 PM May 08, 2024 IST
marks card  ಪರೀಕ್ಷೆಯಲ್ಲಿ 200ಕ್ಕೆ 212 ಅಂಕ ಪಡೆದ ವಿದ್ಯಾರ್ಥಿನಿ
Advertisement

Marks Card: ಶಾಲೆಯಲ್ಲಿ ನಡೆಸೋ ಪರೀಕ್ಷೆಗಳಲ್ಲಿ ಎಲ್ಲರಿಗೂ ತಾನು ಹೆಚ್ಚು ಅಂಕ ತೆಗೆಯಬೇಕು ಎಂಬ ಆಸೆ. ಹೆಚ್ಚಿಗೆ ಅಂಕ ಎಂದರೆ ಔಟ್ ಆಫ್ ಔಟ್ ತೆಗೆಯಬಹುದು. ಅಂದರೆ 100ಕ್ಕೆ 100 ಅಂಕ ತೆಗೆಯುವುದು ಎಂದು. ಇದಕ್ಕಿಂತ ಹೆಚ್ಚಿಗೆ ತೆಗೆಯಲು ಆಗುತ್ತಾ? ಸಾಧ್ಯವೇ ಇಲ್ಲ. ಇದು ಒಂದು ಅರ್ಥವೇ ಇಲ್ಲದ ಪ್ರಶ್ನೆ ಎನ್ನಬುಹುದು. ಆದರೆ ಪೂರ್ಣಾಂಕಗಳೂ ಮೀರಿ ಹೆಚ್ಚಿಗೆ ಅಂಕವನ್ನು ವಿದ್ಯಾರ್ಥಿನಿಯೊಬ್ಬಳು ಪಡೆದಿದ್ದಾಳೆ.

Advertisement

ಇದನ್ನೂ ಓದಿ: IPL-T20 Chahal: ಕ್ರಿಕೆಟ್ ಇತಿಹಾಸದಲ್ಲಿಯೇ ಯಜುವೇಂದ್ರ ಚಹಾಲ್  ಅಪರೂಪದ ದಾಖಲೆ : ಗೊತ್ತಾದ್ರೆ ಶಾಕ್ ಆಗ್ತೀರ

Advertisement

ಗುಜರಾತ್‌ನ(Gujarath) ದಾಹೋದ್ ಜಿಲ್ಲೆಯ(Dahod District) ಪ್ರಾಥಮಿಕ ಶಾಲೆಯೊಂದರಲ್ಲಿ ಓದುತ್ತಿರುವ ವಂಶಿಬೆನ್ ಮನೀಶ್‌ಭಾಯ್(Vamshiben Manish Bhay) ಎಂಬ ನಾಲ್ಕನೇ ತರಗತಿ ವಿದ್ಯಾರ್ಥಿನಿ ಗುಜರಾತಿ ಭಾಷೆಯಲ್ಲಿ 200ಕ್ಕೆ 211 ಅಂಕ, ಗಣಿತದಲ್ಲಿ 200ಕ್ಕೆ 212 ಅಂಕ ಗಳಿಸಿದ್ದಾಳೆ. ಇದೀಗ ವಿದ್ಯಾರ್ಥಿನಿಯ ಮಾರ್ಕ್ಸ್ ಕಾರ್ಡ್(Marks Crad) ಕಂಡು ಪೋಷಕರು ಶಾಕ್ ಆಗಿದ್ದಾರೆ. ಸದ್ಯ ಬಾಲಕಿಯ ಮಾರ್ಕ್ಸ್ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಇದನ್ನೂ ಓದಿ: Bhama Family: ಭಾಮಾ ದಾಂಪತ್ಯ ಜೀವನಕ್ಕೊಂದು ಬ್ರೇಕ್! ಇನ್ಸ್ಟಾಗ್ರಾಮ್ ನಲ್ಲಿ ಸ್ಪಷ್ಟನೆ!

ಕೆಲ ದಿನಗಳ ಹಿಂದಷ್ಟೇ ಶಾಲೆಯಲ್ಲಿ ಪರೀಕ್ಷೆ ನಡೆದಿತ್ತು. ಒಂದೊಂದು ವಿಷಯವೂ 200 ಅಂಕಗಳಿಗೆ ಎಂಬಂತೆ ಪರೀಕ್ಷೆ ನಡೆದಿದ್ದು, ಒಟ್ಟು 5 ವಿಷಯಗಳಿಂದ ವಂಶಿಬೆನ್ 1000 ಅಂಕಗಳಿಗೆ 934 ಅಂಕಗಳನ್ನು ಪಡೆದಿದ್ದಾಳೆ. ಆದರೆ ಎರಡು ವಿಷಯಗಳಲ್ಲಿ ಆಕೆಗೆ 200ಕ್ಕೂ ಹೆಚ್ಚು ಅಂಕ ನೀಡಲಾಗಿದೆ. ಗುಜರಾತಿ ಭಾಷೆ ಪರೀಕ್ಷೆಯಲ್ಲಿ 200 ರಿಂದ 211 ಅಂಕಗಳನ್ನು ಮತ್ತು ಗಣಿತದಲ್ಲಿ 200 ರಿಂದ 212 ಅಂಕಗಳನ್ನು ನೀಡಲಾಗಿದೆ.

ಪರೀಕ್ಷೆ ಫಲಿತಾಂಶ ಬಂದು ಮಾರ್ಕ್ಸ್ ಕಾರ್ಡ್ ಕೈಗೆ ಬಂದ ಬಳಿಕ ವಿದ್ಯಾರ್ಥಿನಿ ವಂಶಿಬೆನ್ ಮಾರ್ಕ್ಸ್ ಕಾರ್ಡ್ ಅನ್ನು ತನ್ನ ಪೋಷಕರಿಗೆ ತೋರಿಸಿದ್ದಳು.ಇದನ್ನು ಕಂಡು ಪೋಷಕರು ಗೊಂದಲಕ್ಕೊಳಗಾಗಿದ್ದರು. ಸದ್ಯ ಈ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪರೀಕ್ಷೆಯ ಫಲಿತಾಂಶಗಳಲ್ಲಿನ ದೋಷವು ವಿವಾದವನ್ನು ಹುಟ್ಟುಹಾಕಿದೆ.

Advertisement
Advertisement
Advertisement