Mark zuckerberg :ಹಸುಗಳಿಗೆ ಡ್ರೈ ಫ್ರೂಟ್ಸ್ ತಿನ್ನಿಸಿ, ಬಿಯರ್ ಕುಡಿಸಿದರೆ ʼಗೋಮಾಂಸʼ ರುಚಿಯಾಗಿರುತ್ತೆ ;
Mark zuckerberg : ಮೆಟಾ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮುಖ್ಯಸ್ಥರಾದ ಬಿಲಿಯನೇರ್ ಮಾರ್ಕ್ ಜುಕರ್‌ಬರ್ಗ್ (Mark zuckerberg) ತಮ್ಮ ಹೊಸ ಚಿಂತನೆ ಆಲೋಚನೆಗಳಿಂದ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ, ಮಾರ್ಕ್ ಜುಕರ್‌ಬರ್ಗ್ ಸೋಷಿಯಲ್ ಮೀಡಿಯಾದಲ್ಲಿ ಗೋಮಾಂಸದ (Mark zuckerberg beef)ಉತ್ಪಾದನೆ ಬಗ್ಗೆ ಮಾತನಾಡಿದ್ದಾರೆ.
ಜುಕರ್‌ಬರ್ಗ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮ್ಮ ಹಸು ಸಾಕಾಣಿಕೆ ಮತ್ತು ಗೋಮಾಂಸ ಉತ್ಪಾದನೆ ವ್ಯಾಪಾರದ ಕುರಿತು ಮಾಹಿತಿ ನೀಡಿದ್ದಾರೆ. ಗೋವುಗಳನ್ನು ಬೆಳೆಸುವುದು ಮಾತ್ರವಲ್ಲದೆ ಅವುಗಳ ಆಹಾರ ಶೈಲಿಯಲ್ಲಿ ಬದಲಾವಣೆ ತರಬೇಕು. ಆಗ ಮಾತ್ರವೆ ವಿಶ್ವದ ಉತ್ತಮ ಗುಣಮಟ್ಟದ ಗೋಮಾಂಸ ಉತ್ಪಾದಿಸಬಹುದು ಎಂದು ಹೇಳಿಕೊಂಡಿದ್ದಾರೆ.
ಮಾರ್ಕ್ ಅವರ ಪೋಸ್‌ನಲ್ಲಿ, ಕೌವೈನಲ್ಲಿರುವ ಕೊಯೊಲೌ ರಾಂಚ್‌ನಲ್ಲಿ ವಾಗ್ಯು ಮತ್ತು ಆಂಗಸ್ ಎಂಬ ಜಾನುವಾರ ತಳಿಗಳನ್ನು ಸಾಕಲು ಆರಂಭಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಪಂಚದಲ್ಲೇ ಅತ್ಯುನ್ನತ ಗುಣಮಟ್ಟದ ಗೋಮಾಂಸವನ್ನು ಉತ್ಪಾದಿಸುವುದು ತನ್ನ ಗುರಿಯಾಗಿದ್ದು, ಜಾನುವಾರುಗಳಿಗೆ ಮಕಾಡಾಮಿಯಾ ಡ್ರೈ ಫ್ರುಟ್ಸ್ ಮತ್ತು ಬಿಯರ್ ನೀಡಲಾಗುತ್ತದೆ. ಇದರ ಜೊತೆಗೆ ಪ್ರತಿ ಹಸು ಪ್ರತಿ ವರ್ಷವೂ 5,000-10,000 ಪೌಂಡ್‌ಗಳಷ್ಟು ಆಹಾರವನ್ನು ಸೇವಿಸುತ್ತದೆ. ಆದ್ದರಿಂದ ಬಹಳಷ್ಟು ಎಕರೆಗಳಷ್ಟು ಮಕಾಡಾಮಿಯಾ ಮರಗಳನ್ನು ನೆಡಲು ನನ್ನ ಹೆಣ್ಣುಮಕ್ಕಳು ಸಹಕರಿಸುತ್ತಾರೆ. ನಾವು ಇನ್ನೂ ಪ್ರಯಾಣದ ಆರಂಭದಲ್ಲಿದ್ದೇವೆ. ಎಲ್ಲಾ ಯೋಜನೆಗಳಲ್ಲಿ, ಇದು ಅತ್ಯಂತ ವಿಶೇಷ ಅಂತ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಗೆ ವಿದೇಶಿಗರು ಮೆಚ್ಚುಗೆ ವ್ಯಕ್ತಪಡಿಸಿದರೆ, ಭಾರತೀಯರು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.