Marcos Commandos: ಭಾರತೀಯ ಸೇನೆಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್, ಕಡಲ ಒಡಲಲ್ಲಿ ನಡೆಯಿತು ಮಹಾನ್ ಕಾರ್ಯಾಚರಣೆ !!
Marcos Commandos: ಭಾರತೀಯ ಸೇನೆಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆದಿದ್ದು, ಕಡಲ ಒಡಲಲ್ಲಿ ಭಾರತೀಯರ ಮಹಾನ್ ಕಾರ್ಯಾಚರಣೆ ಮೂಲಕ ಸೊಮಾಲಿಯಾದ ಕರಾವಳಿ ಬಳಿ ಅಪಹರಣವಾಗಿದ್ದ 15 ಭಾರತೀಯರಿದ್ದ ಸರಕು ಸಾಗಣೆ ಹಡಗು ‘ಎಂವಿ ಲೀಲಾ ನಾರ್ಫೋಕ್’ (MV LILA NORFOLK) ರಕ್ಷಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ.
ಹೌದು, ಭಾರತದ ನೌಕಾಪಡೆಯ ಮಾರ್ಕೋಸ್ ಕಮಾಂಡೋಗಳು(Marcos Commandos) ಸೋಮಲಿಯಾ ಕಡಲತೀರದಲ್ಲಿ ಯಶಸ್ವಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು, ಹೈಜಾಕ್ ಮಾಡಲಾಗಿದ್ದ ಹಡಗನ್ನು ಕಡಲ್ಗಳ್ಳರಿಂದ ರಕ್ಷಣೆ ಮಾಡಿದ್ದಾರೆ. ಇದರಿಂದಾಗಿ 15 ಭಾರತೀಯರು ಸೇರಿದಂತೆ ಒಟ್ಟು 21 ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮಾಲಿಯಾ ಕರಾವಳಿಯ ಬಳಿ ಗುರುವಾರ ಸಂಜೆ 88,000 ಟನ್‌ಗಳಷ್ಟು ತೂಕದ ‘MV LILA NORFOLK’ ಎಂಬ ಸರಕು ಸಾಗಣೆ ಹಡಗನ್ನು ಅಪಹರಿಸಲಾಗಿತ್ತು. ಲೈಬೀರಿಯನ್‌ಗೆ ಸೇರಿದ ಈ ಹಡಗು ಬ್ರೆಜಿಲ್‌ನಿಂದ ಬಹ್ರೇನ್ ಕಡೆಗೆ ಹೊರಟ್ಟಿತ್ತು. ಹಡಗು ಅಪಹರಣ ಸುದ್ದಿ ತಿಳಿಯುತ್ತಲೇ ಭಾರತೀಯ ನೌಕಾಪಡೆ ಕಾರ್ಯಚರಣೆಗೆ ಇಳಿದಿತ್ತು. ಸತತ ಕಾರ್ಯಾಚರಣೆಯಿಂದಾಗಿ ಭಾರತೀಯ ನೌಕಾಪಡೆ ವಶವಾಗಿದ್ದ ಹಡಗನ್ನು ಪತ್ತೆಹಚ್ಚಲಾಗಿದ್ದು, ಅದರಲ್ಲಿದ್ದ ಭಾರತೀಯರನ್ನೂ ರಕ್ಷಣೆ ಮಾಡಿದೆ. ಈ ಸಂದರ್ಭದಲ್ಲಿ ಅಲ್ಲಿ ಯಾವುದೇ ಹೈಜಾಕರ್‌ಗಳು ಅಲ್ಲಿರಲಿಲ್ಲ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ
ಇನ್ನು 'ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಕಡಲ್ಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅರಬ್ಬೀ ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಯುದ್ಧನೌಕೆಗಳಿಗೆ ನಿರ್ದೇಶನ ನೀಡಿದ್ದರು. ಈ ಪ್ರದೇಶದಲ್ಲಿ ವ್ಯಾಪಾರಿ ಹಡಗುಗಳ ಮೇಲಿನ ದಾಳಿಯನ್ನು ತಡೆಯಲು ಭಾರತೀಯ ನೌಕಾಪಡೆಯ ನಾಲ್ಕು ಯುದ್ಧನೌಕೆಗಳನ್ನು ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿದೆ' ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದರು.