Mangaluru: ಸ್ನಾನ ಮಾಡುತ್ತಿರುವ ಯುವತಿಯ ವೀಡಿಯೋ ಮಾಡಿದ ಯುವಕ; ಸ್ಥಳೀಯರಿಂದ ಬಿತ್ತು ಗೂಸಾ
Mangaluru: ಯುವತಿಯೋರ್ವಳು ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಆಕೆಯ ಮನೆಯ ಹಿಂಭಾಗದಿಂದ ಯುವಕನೋರ್ವ ವೀಡಿಯೋ ಮಾಡುತ್ತಿದ್ದ ಘಟನೆಯೊಂದು ನಡೆದಿದೆ.
09:31 AM Jul 20, 2024 IST | ಸುದರ್ಶನ್
UpdateAt: 09:31 AM Jul 20, 2024 IST
Advertisement
Mangaluru: ಯುವತಿಯೋರ್ವಳು ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಆಕೆಯ ಮನೆಯ ಹಿಂಭಾಗದಿಂದ ಯುವಕನೋರ್ವ ವೀಡಿಯೋ ಮಾಡುತ್ತಿದ್ದ ಘಟನೆಯೊಂದು ನಡೆದಿದೆ. ಈ ಸಂದರ್ಭದಲ್ಲಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದು, ಧರ್ಮದೇಟು ತಿಂದಿದ್ದಾನೆ ಯುವಕ. ಈ ಘಟನೆ ನಡೆದಿರುವುದು ಮಂಗಳೂರು ಸಮೀಪದ ತೋಟಬೆಂಗ್ರೆಯಲ್ಲಿ.
Advertisement
ಬೆಂಗ್ರೆ ನಿವಾಸಿಯಾದ ಮೊಹಮ್ಮದ ರಂಶಿದ್ (21) ಎಂಬಾತನೇ ಆರೋಪಿ. ಈತನ ಮೇಲೆ ಮಾದಕ ದ್ರವ್ಯ ವ್ಯಸನಿ ಎಂಬ ಆರೋಪ ಕೂಡಾ ಇದೆ. ಇದೀಗ ಪಣಂಬೂರು ಪೊಲೀಸರು ಈತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ ಎಂದು ವರದಿಯಾಗಿದೆ.
Advertisement
Advertisement