For the best experience, open
https://m.hosakannada.com
on your mobile browser.
Advertisement

Mangaluru Vande Bharat Rail: ವಂದೇ ಭಾರತ್‌ ರೈಲು ಮಂಗಳೂರು-ಮಡಗಾಂವ್‌ ಗೆ ಇಂದಿನಿಂದ ಪ್ರಾಯೋಗಿಕ ಸಂಚಾರ!

10:47 AM Dec 26, 2023 IST | ಹೊಸ ಕನ್ನಡ
UpdateAt: 10:47 AM Dec 26, 2023 IST
mangaluru vande bharat rail  ವಂದೇ ಭಾರತ್‌ ರೈಲು ಮಂಗಳೂರು ಮಡಗಾಂವ್‌ ಗೆ ಇಂದಿನಿಂದ ಪ್ರಾಯೋಗಿಕ ಸಂಚಾರ
Image source: zoomintv.online

Mangaluru: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ತಲುಪಿದೆ. ಸೆಮಿ ಹೈ ಸ್ಪೀಡ್‌ ನ ಈ ರೈಲು ಸೋಮವಾರ ಸಂಜೆ ಮಂಗಳೂರಿಗೆ ಬಂದಿದ್ದು, ಇಂದಿನಿಂದ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಚೆನೈನಿಂದ ಈ ರೈಲು ಮಂಗಳೂರಿಗೆ ಬಂದಿದೆ.

Advertisement

ಇಂದು ಬೆಳಗ್ಗೆ 8.30 ಕ್ಕೆ ಮಂಗಳೂರು ಸೆಂಟ್ರಲ್‌ ನಿಲ್ದಾಣದ ಮೂಲಕ ಹೊರಡುವ ಈ ರೈಲು ಮಧ್ಯಾಹ್ನ 1.15 ರ ಸಮಯಕ್ಕೆ ಮಡಗಾಂವ್‌ ತಲುಪಲಿದೆ. ನಂತರ 1.45 ಕ್ಕೆ ಮಡಗಾಂವ್‌ನಿಂದ ಹೊರಟು ಸಂಜೆ 6.30ರ ವೇಳೆಗೆ ಮಂಗಳೂರು ತಲುಪಲಿದೆ.

ಮಂಗಳೂರು ಸೆಂಟ್ರಲ್‌-ಮಡಗಾಂವ್‌ ಸೆಮಿ ಹೈ ಸ್ಪೀಡ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಡಿ.30 ರಿಂದ ಪ್ರಾರಂಭಗೊಳ್ಳಿದೆ ಎಂದು ವರದಿಯಾಗಿದೆ. ಆದರೆ ಈ ಕುರಿತು ರೈಲ್ವೆ ಮಂಡಳಿ ಇನ್ನೂ ಅಧಿಕೃತ ಪ್ರಕಟನೆ ಹೊರಡಿಸಿಲ್ಲ.

Advertisement

ಇದನ್ನು ಓದಿ: Liquor Rules: ಇಷ್ಟು ಲೀಟರ್‌ನಷ್ಟು ನೀವು ಮನೆಯಲ್ಲಿ ಮದ್ಯ ಶೇಖರಣೆ ಮಾಡಲು ಸಾಧ್ಯ! ಇದಕ್ಕಿಂತ ಹೆಚ್ಚು ಸಂಗ್ರಹಿಸಿದರೆ ಏನಾಗುತ್ತೆ ಗೊತ್ತೇ?

Advertisement
Advertisement