ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Toll Plaza: ವಾಹನ ಸವಾರರಿಗೆ ಮುಖ್ಯ ಮಾಹಿತಿ- ವಾಹನ ಸಂಖ್ಯೆಗೆ ಇದರ ಜೋಡಣೆ ಕಡ್ಡಾಯ !!

10:17 AM Nov 27, 2023 IST | ಅಶ್ವಿನಿ ಹೆಬ್ಬಾರ್
UpdateAt: 10:17 AM Nov 27, 2023 IST
Advertisement

Toll Plaza: ಪಡುಬಿದ್ರಿಯಲ್ಲಿ ಕೆಲವು ಕಾರು ಹಾಗೂ ಬಸ್ಗಳಲ್ಲಿ ಫಾಸ್ಟ್ಯಾಗ್ ಚಾಸಿಸ್ ನಂಬರ್ ಮೇಲೆ ಅಳವಡಿಸಿರುವುದರಿಂದ ಟೋಲ್ ಪ್ಲಾಝಾಗಳಲ್ಲಿ (Toll Plaza)ಸ್ಕ್ಯಾನ್ ಆಗದೆ ಸಮಸ್ಯೆ ಎದುರಾಗಿದೆ. ವಾಹನ ಖರೀದಿ ಮಾಡುವ ಸಂದರ್ಭ ಶೋರೂಮ್ನವರು ನೀಡುವ ಫಾಸ್ಟ್ಯಾಗ್ ಅವಧಿ ಕೇವಲ 2 ತಿಂಗಳಾಗಿದ್ದು, ಅದು ವಾಹನ ರಿಜಿಸ್ಪ್ರೇಶನ್(Vechicle Registeration)ನಂಬರ್ಗೆ ಸ್ವಯಂಚಾಲಿತವಾಗಿ ಬದಲಾವಣೆಯಾಗುತ್ತದೆ. ಇದನ್ನೇ ಬಳಸಿಕೊಂಡು ಕಾರು ಚಾಲಕರು ಟೋಲ್ ದಾಟುತ್ತಾರೆ. ಈ ಸಂದರ್ಭ ಯಾವುದೇ ಸಮಸ್ಯೆ ಇಲ್ಲದೆ ತಮ್ಮ ಖಾತೆಯಿಂದ ಟೋಲ್ಗಳಿಗೆ ಹಣ ಸಂದಾಯವಾಗುತ್ತದೆ. ಆದರೆ 2 ತಿಂಗಳು ಕಳೆದರೆ ಕಾರು ಕಂಪನಿ ನೀಡಿದ ಫಾಸ್ಟ್ಯಾಗ್ ಸ್ಥಗಿತಗೊಳ್ಳುತ್ತದೆ. ಈ ಬಗ್ಗೆ ಪೂರ್ವ ಮಾಹಿತಿ ಇಲ್ಲದ ಕಾರು ಮಾಲೀಕರು ತಮ್ಮ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಕೂಡ ಟೋಲ್ ದಾಟುವಾಗ ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ಉಡುಪಿಯ ಹೆಜಮಾಡಿ ಟೋಲ್ನಲ್ಲಿ ಇದೇ ರೀತಿ ಸಮಸ್ಯೆ ಎದುರಿಸಿದ ಸಂದರ್ಭ ಕಸ್ಟಮರ್ ಕೇರ್ಗೆ ಕಾಲ್ ಮಾಡಿದಾಗ ಮೊಬೈಲ್ ಸಂಖ್ಯೆ ಸಹಿತ ಎಲ್ಲ ಮಾಹಿತಿಗಳು ಸರಿಯಿದ್ದರೂ ಕೂಡ ವಾಹನ ಮಾಲೀಕರ ಹೆಸರಿನ ಬಳಿ ಶೋರೂಮ್ ಹೆಸರಿತ್ತು. ಹೀಗಾಗಿ, ಅವರಿಗೆ ಬದಲಾಯಿಸುವುದು ಸುಲಭ ವಾಗಿರಲಿಲ್ಲ. ದಾಖಲೆಗಳು ಹೊಂದಾಣಿಕೆಯಾಗದಿದ್ದರೆ ಕೆವೈಸಿ ಮಾಡುವಾಗಲೂ ಸಮಸ್ಯೆ ಎದುರಾಗುತ್ತದೆ.ವಾಹನ ಮಾಲೀಕರು ಫಾಸ್ಟ್ಯಾಗ್ನಲ್ಲಿರುವ ಕಸ್ಟಮರ್ ಕೇರ್ಗೆ(Customer Care)ಕಾಲ್ ಮಾಡಿ ಸೂಕ್ತ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ವಾಹನ ಮಾಲೀಕರಿಗೆ ಈ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇಲ್ಲದಿರುವುದರಿಂದ ಟೋಲ್ಗಳಲ್ಲಿ ಬರುವ ಸಂದರ್ಭ ಈ ಸಮಸ್ಯೆ ಬಗ್ಗೆ ಅರಿವಾಗುತ್ತದೆ.

ನ.24ರಂದು ಹೆಜಮಾಡಿ ಕೆ.ಕೆ.ಆರ್.(ಹಿಂದಿನ ನವಯುಗ್) ಟೋಲ್ ಪ್ಲಾಝಾದಲ್ಲಿ 30ಕ್ಕೂ ಅಧಿಕ ಇಂತಹ ಘಟನೆಗಳು ವರದಿಯಾಗಿದೆ ಎನ್ನಲಾಗಿದೆ. ವಾಹನ ಮಾಲೀಕರೇ ಗಮನಿಸಿ, ತಮ್ಮ ವಾಹನದ ಫಾಸ್ಟ್ಯಾಗ್ ಖಾತೆಯು ಚಾಸಿಸ್ ಸಂಖ್ಯೆಯಲ್ಲಿ ಜೋಡಣೆಯಾಗಿದ್ದಲ್ಲಿ ಈ ಕೂಡಲೇ ತಮ್ಮ ವಾಹನದ ನಂಬರಿಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ಚಾಸಿಸ್ ಸಂಖ್ಯೆಯಲ್ಲಿ ಜೋಡಣೆಯಾಗಿರುವ ಫಾಸ್ಟ್ಯಾಗ್ ಖಾತೆಯನ್ನು ಸ್ಥಗಿತವಾಗುತ್ತದೆ. ಈ ಖಾತೆಯಲ್ಲಿ ಹಣ ಇದ್ದರೂ ಯಾವುದೇ ಟೋಲ್ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ತಮ್ಮ ಫಾಸ್ಟ್ಯಾಗ್ ಕಾರ್ಡ್ನಲ್ಲಿರುವ ಟೋಲ್ ಫ್ರೀ ನಂಬರ್ಗೆ ಕರೆ ಮಾಡಿ ಚಾಸಿಸ್ ಸಂಖ್ಯೆಯಿಂದ ವಾಹನ ಸಂಖ್ಯೆಗೆ ಬದಲಾಯಿಸಿಕೊಳ್ಳಬಹುದಾಗಿದೆ.

Advertisement

ಹೆಜಮಾಡಿ ಟೋಲ್ನಲ್ಲಿ ನಡೆದ ಘಟನೆಯ ಬಗ್ಗೆ ಟೋಲ್ನವರಿಂದ ಮಾಹಿತಿ ಪಡೆಯಲಾಗಿದ್ದು, ಟೋಲ್ ನವರು ಈ ಕುರಿತು ಸಮಸ್ಯೆಯ ಬಗ್ಗೆ ಸಾರ್ವಜನಿಕರಿಗೆ ಪೂರ್ವ ಮಾಹಿತಿ ನೀಡಬೇಕಾಗುತ್ತದೆ. ಹೀಗಾಗಿ, ಪೂರ್ವ ಮಾಹಿತಿ ನೀಡದೆ ಬಲವಂತವಾಗಿ ಪಡೆದ ಹಣವನ್ನು ವಾಪಸ್ ನೀಡಬೇಕಾಗಿದೆ. ವಾಹನ ಮಾಲೀಕರು ಟೋಲ್ ನೀಡದಿದ್ದರೆ ಬಲವಂತವಾಗಿ ಪಡೆಯಲು ಅವಕಾಶವಿಲ್ಲ. ಇದರ ಬದಲಿಗೆ ವಾಹನ ನಂಬರ್ ಮೇಲೆ ನೋಟಿಸ್ ನೀಡಬಹುದಾಗಿದೆ

ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ವೈಭವೋಪೇತ ತೆರೆ: ಯಾವ ವಿಭಾಗದಲ್ಲಿ ಯಾರು ಜಯಶಾಲಿ, ಫೈನಲ್ ನಲ್ಲಿ ಟೈ ಆದ ಕೋಣಗಳು ಯಾವುವು ...?

Related News

Advertisement
Advertisement