Mangaluru: ಶೋಧ ನಡೆಸಿದರೂ ಸಿಗದ ವ್ಯಕ್ತಿಯ ಮೃತದೇಹ, ಮುದ್ದಿನ ನಾಯಿ ಬಂದೊಡನೆ ತೇಲಿ ಬಂತು!! ಪೊಳಲಿ ಫಲ್ಗುಣಿ ನದಿಯಲ್ಲಿ ಹೀಗೊಂದು ಪವಾಡ
Mangaluru: ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಠಾಣಾ ವ್ಯಾಪ್ತಿಯ ಪೊಳಲಿ ಸಮೀಪದ ಅಡ್ಡೂರು ಎಂಬಲ್ಲಿ ಫಲ್ಗುಣಿ ನದಿಯಲ್ಲಿ ಕಣ್ಮರೆಯಾದ ವ್ಯಕ್ತಿಯ ಮೃತದೇಹ ಪತ್ತೆಯಾಗುವಲ್ಲಿ ಶ್ವಾನವೊಂದು ಸಹಕರಿಸಿ ಪವಾಡವೊಂದು ನಡೆದ ಬಗ್ಗೆ ವರದಿಯಾಗಿದೆ(Mangaluru news).
ಕಳೆದ ಮಂಗಳವಾರ ಪ್ರಶಾಂತ್ (40) ಎಂಬ ಯುವಕನೋರ್ವ ಆಕಸ್ಮಿಕವಾಗಿ ನದಿ ನೀರಿನಲ್ಲಿ ಬಿದ್ದು ಕಣ್ಮರೆಯಾಗಿದ್ದರು. ಕೂಡಲೇ ಸ್ಥಳೀಯ ಈಜುಗಾರರ ತಂಡದ ಸಹಿತ ಅಗ್ನಿಶಾಮಕ ದಳ ಕಾರ್ಯಾಚರಣೆ ಆರಂಭಿಸಿದ್ದು, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಳಿಕ ಉಡುಪಿ ಜಿಲ್ಲೆಯ ಈಶ್ವರ್ ಮಲ್ಪೆ ತಂಡಕ್ಕೆ ವಿಷಯ ತಿಳಿಸಿದ್ದು, ಉಡುಪಿಯಿಂದ ಆಗಮಿಸಿದ ಈಶ್ವರ್ ಮಲ್ಪೆ ತಂಡವು ನೀರಿನಲ್ಲಿ ಹುಡುಕಾಟ ಆರಂಭಿಸಿತ್ತು.
ಕೆಲವು ಗಂಟೆಗಳ ಕಾರ್ಯಾಚರಣೆಯ ಬಳಿಕವೂ ಯಾವುದೇ ಸುಳಿವು ಸಿಗದೇ ಇದ್ದಾಗ ಸ್ಕೂಬಾ ಡೈವಿಂಗ್ ಮೂಲಕವೂ ಹುಡುಕಾಟ ನಡೆಸಲಾಗಿತ್ತು. ಇದೇ ವೇಳೆ ಸ್ಥಳಕ್ಕೆ ಬಂದ ಕಣ್ಮರೆಯಾದ ವ್ಯಕ್ತಿಯ ಮನೆಯ ಸಾಕು ನಾಯಿ ರೂಬಿ, ತನ್ನ ಯಜಮಾನ ನೀರಿಗೆ ಇಳಿದ ಸ್ಥಳಕ್ಕೆ ಬಂದು ನಿಂತಿದ್ದು, ನೀರಿಗೆ ಬಾಯಿ ಹಾಕಿದೊಡನೆ ಮೃತದೇಹ ಅಚಾನಕ್ಕಾಗಿ ಮೇಲಕ್ಕೆ ತೇಲಿ ಬಂದಾಗ ಎಲ್ಲರಲ್ಲೂ ಅಚ್ಚರಿ ಕಾಡಿತ್ತು.
ಹಲವು ಗಂಟೆಗಳ ಕಾಲ ಇಡೀ ನದಿಯಲ್ಲಿ ಶೋಧ ನಡೆಸಿದ್ದರೂ ಸಿಗದ ಸುಳಿವು, ಶ್ವಾನದ ಆಗಮನದ ಬಳಿಕ ತನ್ನಿಂತಾನೆ ಮೇಲಕ್ಕೆ ತೇಲಿ ಬಂದ ದೃಶ್ಯ ಎಲ್ಲರಲ್ಲೂ ಕುತೂಹಲ ಉಂಟುಮಾಡಿದ್ದು, ಶ್ವಾನ ಅವಿನಾಭಾವ ಸಂಬಂಧಕ್ಕೆ ಶೋಕದಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು.
ಇದನ್ನೂ ಓದಿ:ICMR: ಕೊರೊನಾ ಲಸಿಕೆ ಪಡೆದವರಿಗೆ ಹೃದಯಾಘಾತ ?! ICMR ಹೇಳಿದ್ದೇನು?