ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Lakshadweep Travel Plan: ಮಂಗಳೂರಿನಿಂದಲೇ ಲಕ್ಷದ್ವೀಪಕ್ಕೆ ಟೂರ್‌ ಪ್ಯಾಕೇಜ್‌!!! 6 ಸಾವಿರಕ್ಕೆ ಇಷ್ಟೆಲ್ಲಾ ಸೌಲಭ್ಯ!

12:09 PM Jan 12, 2024 IST | ಅಶ್ವಿನಿ ಹೆಬ್ಬಾರ್
UpdateAt: 12:09 PM Jan 12, 2024 IST
Advertisement

Lakshadweep Travel Plan: ಪ್ರವಾಸಿಗರೇ ಗಮನಿಸಿ, ಲಕ್ಷದ್ವೀಪಕ್ಕೆ(Lakshadweep) ಹೋಗುವ ಪ್ಲಾನ್ ನಲ್ಲಿದ್ದಿರಾ?? ಹಾಗಿದ್ರೆ ನಿಮಗೆ ಗುಡ್ ನ್ಯೂಸ್ ಇಲ್ಲಿದೆ ನೋಡಿ!!ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳೂರಿನಿಂದ (Mangaluru)ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಆರಂಭ ಮಾಡಲು ಮುಂದಾಗಿದೆ.

Advertisement

ಮಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi)ಭೇಟಿ ಬೆನ್ನಲ್ಲೇ ಲಕ್ಷದ್ವೀಪದ ಪ್ರವಾಸೋದ್ಯಮ ಚಟುವಟಿಕೆಗಳು ಗರಿಗೆದರಿವೆ. ಹೀಗಾಗಿ ಹಲವು ಮಂದಿ ಲಕ್ಷದ್ವೀಪಕ್ಕೆ(Lakshadweep Travel Plan)ಹಾರಲು ಅಣಿಯಾಗುತ್ತಿದ್ದಾರೆ. ಲಕ್ಷದ್ವೀಪ ಮಂಗಳೂರಿನಿಂದ 356 ಕಿಮೀ ದೂರದಲ್ಲಿದ್ದು, ಕೊಚ್ಚಿಯಿಂದ 391 ಕಿಮೀ ದೂರದಲ್ಲಿದೆ. ಲಕ್ಷದ್ವೀಪಕ್ಕೆ ತರಕಾರಿ ಆಹಾರ ಸಾಮಾಗ್ರಿಯಿಂದ ಹಿಡಿದು ಕಟ್ಟಡ ಸಾಮಾಗ್ರಿವರೆಗೂ ಮಂಗಳೂರಿನಿಂದ ಸಾಗಾಟ ನಡೆಯುತ್ತದೆ.

ಇದನ್ನೂ ಓದಿ: BBK Season 10: ಫಿನಾಲೆ ಟಿಕೆಟ್‌ ದೊರಕಿದ್ದು ಯಾರಿಗೆ? ಪ್ರತಾಪ್‌ಗಾ? ಟ್ವಿಸ್ಟ್‌ ನೀಡಿದ ಬಿಗ್‌ಬಾಸ್‌!!! ಫಿನಾಲೆ ಟಿಕೆಟ್‌ ಜೊತೆಗೆ ಕ್ಯಾಪ್ಟನ್ಸಿ ಪಟ್ಟ ಅಲಂಕರಿಸಿದ್ದು ಇವರೇ ನೋಡಿ!!!

Advertisement

ಮಂಗಳೂರಿನಿಂದ ಪ್ರತಿದಿನ ಲಕ್ಷದ್ವೀಪಕ್ಕೆ ಐವತ್ತಕ್ಕೂ ಹೆಚ್ಚು ವೆಸೆಲ್ಗಳು ತೆರಳುತ್ತವಂತೆ. ಲಕ್ಷದ್ವೀಪದಲ್ಲಿರುವ 36 ಐಲ್ಯಾಂಡ್ಗಳಲ್ಲಿ ಕೇವಲ ಆರು ಐಲ್ಯಾಂಡ್ಗಳಲ್ಲಿ ಮಾತ್ರ ಜನವಸತಿ ಯಿದ್ದು, ಇನ್ನೂ ಮೂರು ಐಲ್ಯಾಂಡ್ಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಕೋವಿಡ್ ಬರುವ ಮೊದಲು ಲಕ್ಷದ್ವೀಪಕ್ಕೆ ಪ್ರವಾಸಿ ಹಡಗಿದ್ದು, ಆರು ಸಾವಿರಕ್ಕೆ ಊಟ ವಸತಿ ಸೇರಿದಂತೆ ಮೂರು ದಿನದ ಪ್ಯಾಕೇಜ್ ಹೊಂದಿತ್ತು. ಆದರೆ ಕೋವಿಡ್ ಬಳಿಕ ಲಕ್ಷದ್ವೀಪದ ಪ್ರವಾಸಿ ಹಡಗು ಸಂಚಾರ ನಿಲುಗಡೆಯಾಗಿದೆ. ಲಕ್ಷದ್ವೀಪ ಪ್ರವಾಸಕ್ಕೆ ಕಠಿಣ ನಿಯಮಗಳನ್ನು ಹೊಂದಿವೆ. ಲಕ್ಷದ್ವೀಪ ಅಭಿವೃದ್ಧಿಯಾದಲ್ಲಿ ಮಂಗಳೂರಿನ ಪ್ರವಾಸೋದ್ಯಮಕ್ಕೂ ಬೂಸ್ಟ್ ದೊರೆಯಲಿದೆ. ಪರ್ಮಿಟ್ ಪಡೆಯಲು ಹತ್ತಾರು ನಿಬಂಧನೆಗಳಿದ್ದು, ಪ್ರವಾಸಕ್ಕೆ 20 ದಿನದ ಮೊದಲು ಅರ್ಜಿ ಸಲ್ಲಿಸಬೇಕಾಗುತ್ತದೆ.

Advertisement
Advertisement