Arecanut: 500ರ ಸನಿಹಕ್ಕೆ ಅಡಿಕೆ ಧಾರಣೆ- ಇನ್ನಷ್ಟೂ ಏರಿಕೆಯ ನಿರೀಕ್ಷೆ
Arecanut : ಪ್ರಮುಖ ವಾಣಿಜ್ಯ ಬೆಲೆ ಅಡಿಕೆಯ ಧಾರಣೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದ್ದು ಡಬ್ಬಲ್ ಚೋಲ್, ಸಿಂಗಲ್ ಚೋಲ್ ಧಾರಣೆಯು ಕೆ.ಜಿ.ಗೆ 500 ರೂ. ಸನಿಹಕ್ಕೆ ಬಂದಿದೆ.
ಇದನ್ನೂ ಓದಿ: Spam calls: ಸ್ಪ್ಯಾಮ್ ಕರೆಗಳಿಂದ ಬೇಸತ್ತಿದ್ದೀರಾ? : ಕೇಂದ್ರದ ಈ ನಿರ್ಧಾರದಿಂದ ನೀವು ಇನ್ನು ನಿರಾಳರಾಗಬಹುದು!
ಈ ಬಾರಿ ಅಡಿಕೆ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವುದು ಒಂದು ಕಾರಣವಾದರೆ ,ಈ ಬಾರಿಯ ಬೇಸಿಗೆಯಲ್ಲಿ ಬಿಸಿಲಿನ ಝಳ ಹೆಚ್ಚಳದ ಪರಿಣಾಮ ಮುಂದಿನ ವರ್ಷ ಶೇ. 50ರಷ್ಟು ಫಸಲು ಕಡಿಮೆ ಆಗಬಹುದೆಂಬ ಮಾರುಕಟ್ಟೆ ತಜ್ಞರ ಅಭಿಪ್ರಾಯದ ಪ್ರಕಾರ ಅಡಿಕೆಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Parliment Election : ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಬಹುದಾದ ಕ್ಷೇತ್ರಗಳಿವು !!
ಈ ಹಿನ್ನೆಲೆಯಲ್ಲಿ ಧಾರಣೆ ಹೆಚ್ಚಳದ ಮೂಲಕ ಖರೀದಿಸುವ ಪ್ರಯತ್ನ ನಡೆಯುತ್ತಿದೆ.
ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ಪ್ರಮುಖ ಅಡಿಕೆ ಮಾರುಕಟ್ಟೆ ಬೆಳ್ಳಾರೆಯ ಹೊರ ಮಾರುಕಟ್ಟೆಯಲ್ಲಿ ಮೇ 15ರಂದು ಡಬ್ಬಲ್ ಚೋಲ್‌ಗೆ ಕೆ.ಜಿ.ಗೆ 490 ರೂ. ಇದ್ದರೆ, ಸಿಂಗಲ್ ಚೋಲ್‌ಗೆ 480 ರೂ. ಇತ್ತು. ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 400 ರೂ. ಗಡಿಗೆ ತಲುಪಿದೆ. ಮೇ 15ರಂದು ಹೊರ ಮಾರುಕಟ್ಟೆಯಲ್ಲಿ 390 ರೂ. ತನಕ ಧಾರಣೆ ಇತ್ತು.ಕ್ಯಾಂಪ್ಕೋದಲ್ಲಿ ಮೇ 15ರಂದು ಹೊಸ ಅಡಿಕೆಗೆ 380 ರೂ., ಸಿಂಗಲ್ ಚೋಲ್‌ಗೆ 465 ರೂ., ಡಬ್ಬಲ್ ಚೋಲ್‌ಗೆ 475 ರೂ.ಗಳಿಗೆ ಖರೀದಿಯಾಗಿದೆ.