Mangaluru: ಈ 6 ಪ್ರದೇಶಗಳಲ್ಲಿ " ಹಾರ್ನ್ ನಿಷೇಧಿತ ಪ್ರದೇಶ" ಘೋಷಣೆ; ಯಾವುದೆಲ್ಲ? ಇಲ್ಲಿದೆ ಕಂಪ್ಲೀಟ್ ವಿವರ
Mangaluru: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಆರು ಆಸ್ಪತ್ರೆಗಳಿರುವ ಪ್ರದೇಶದಲ್ಲಿ ಹಾರ್ನ್ ಬಳಕೆಯನ್ನು ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.
ಲೇಡಿಗೋಷನ್ ಆಸ್ಪತ್ರೆ, ಹಂಪನಕಟ್ಟೆ ಜಂಕ್ಷನ್, ಡಾ.ಅಂಬೇಡ್ಕರ್ ವೃತ್ತ, ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ, ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮತ್ತು ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಈ ಆರು ಪ್ರದೇಶಗಳನ್ನು ʼಹಾರ್ನ್ ನಿಷೇಧಿತ ಪ್ರದೇಶʼ ಎಂದು ಘೋಷಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪನ್ ಅಗ್ರವಾಲ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ?
ಭಾರತೀಯ ಮೋಟಾರು ವಾಹನ ಅಧಿನಿಯಮ (ತಿದ್ದುಪಡಿ) 2019 ರ ಕಲಂ 194 (ಎಫ್) ರಂತೆ ಹಾರ್ನ್ ನಿಷೇಧಿಸಿದ ಸಂಚಾರ ಸೂಚನಾ ಫಲಕ ಇರುವ ಪ್ರದೇಶದಲ್ಲಿ ಹಾರ್ನ್ ಬಳಸಿದ್ದಲ್ಲಿ ಅಂತಹ ವಾಹನ ಚಾಲಕರ ಮೇಲೆ ಮೊದಲನೆಯ ಉಲ್ಲಂಘನೆಗೆ ರೂ 1000 ದಂಡವನ್ನು ಹಾಗೂ ಎರಡನೆ ಹಾಗೂ ನಂತರದ ಪ್ರತಿ ಉಲ್ಲಂಘನೆಗೆ ರೂ 2000 ದಂಡವನ್ನು ವಿಧಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.