For the best experience, open
https://m.hosakannada.com
on your mobile browser.
Advertisement

Mangaluru: ಸ್ಥಳ ಮಹಜರಿಗೆ ಕರೆತಂದ ವೇಳೆ ಚಡ್ಡಿ ಗ್ಯಾಂಗ್‌ನಿಂದ ಪೊಲೀಸರ ಮೇಲೆ ಹಲ್ಲೆ, ತಪ್ಪಿಸಿಕೊಳ್ಳಲು ಯತ್ನ; ಇಬ್ಬರ ಕಾಲಿಗೆ ಗುಂಡು

Mangaluru: ಚಡ್ಡಿ ಗ್ಯಾಂಗ್‌ ನ ಸದಸ್ಯರು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿದ ಘಟನೆ ಬುಧವಾರ (ಇಂದು) ಬೆಳಗ್ಗೆ ನಡೆದಿದೆ.
09:07 AM Jul 10, 2024 IST | ಸುದರ್ಶನ್
UpdateAt: 09:14 AM Jul 10, 2024 IST
mangaluru  ಸ್ಥಳ ಮಹಜರಿಗೆ ಕರೆತಂದ ವೇಳೆ ಚಡ್ಡಿ ಗ್ಯಾಂಗ್‌ನಿಂದ ಪೊಲೀಸರ ಮೇಲೆ ಹಲ್ಲೆ  ತಪ್ಪಿಸಿಕೊಳ್ಳಲು ಯತ್ನ  ಇಬ್ಬರ ಕಾಲಿಗೆ ಗುಂಡು
Advertisement

Mangaluru: ಪೊಲೀಸರಿಗೆ ಭಾರೀ ತಲೆನೋವಾಗಿ ಪರಿಣಮಿಸಿದ್ದ ದರೋಡಿ ಗ್ಯಾಂಗ್‌ ಚಡ್ಡಿ ಗ್ಯಾಂಗ್‌ ನ ಸದಸ್ಯರು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿದ ಘಟನೆ ಬುಧವಾರ (ಇಂದು) ಬೆಳಗ್ಗೆ ನಡೆದಿದೆ.

Advertisement

ನಿನ್ನೆ (ಮಂಗಳವಾರ) ಚಡ್ಡಿ ಗ್ಯಾಂಗ್‌ನ ನಾಲ್ವರನ್ನು ಸಕಲೇಶಪುರದಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚಾರಣೆಯ ಮೂಲಕ ಬಂಧಿಸಿದ್ದು, ನಂತರ ಮಂಗಳೂರಿಗೆ ಕರೆ ತಂದಿದ್ದರು.

ಮಂಗಳೂರಿನಲ್ಲಿ ದರೋಡೆ ನಡೆಸಿದ ಇವರು ಅದೇ ಮನೆಯ ಕಾರಿನಲ್ಲಿ ಮುಲ್ಕಿವರೆಗೆ ಬಂದಿದ್ದು, ನಂತರ ಆ ಕಾರನ್ನು ಅಲ್ಲೇ ಬಿಟ್ಟು ಬೆಂಗಳೂರು ಕಡೆಗೆ ಬಸ್‌ನಲ್ಲಿ ಹೊರಟಿರುವ ಸಮಯದಲ್ಲಿ ಕಾರು ಇಟ್ಟ ಸ್ಥಳಕ್ಕೆ ಇಂದು ಬೆಳಗ್ಗೆ ಸ್ಥಳ ಮಹಜರಿಗಾಗಿ ಪೊಲೀಸರು ಆರೋಪಿಗಳನ್ನು ಕರೆತಂದಿದ ಸಮಯದಲ್ಲಿ, ಆರೋಪಿಗಳ ಪೈಕಿ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ.

Advertisement

ಕೂಡಲೇ ಪೊಲೀಸರು ಆತ್ಮರಕ್ಷಣೆಗಾಗಿ ರಾಜು ಸಿಂಗ್ವಾನಿಯಾ (24) ಮತ್ತು ಬಾಲಿಯ (22) ಕಾಲಿಗೆ ಗುಂಡು ಹಾರಿಸಿದ್ದಾರೆ. ಮಾಹಿತಿ ಅಪ್ಡೇಟ್‌ ಮಾಡಲಾಗುತ್ತಿದೆ.

ದರೋಡೆ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿರುವ ಆರೋಪಿಗಳ ವಿವರ:

1) ರಾಜು ಸಿಂಗ್ವಾನಿಯ (24 ವರ್ಷ), ತಂದೆ: ಕೋಮಲ್ ಸಿಂಗ್ವಾನಿಯ, ವಾಸ: ವಿಶ್ವನಗರ, ಧನ್ಯವಾದ್ ಪಿ.ಎಸ್, ರಗೋಗರ್ ತಾಲೂಕು, ಗುಣಾ ಜಿಲ್ಲೆ, ಮಧ್ಯ ಪ್ರದೇಶ.

2) ಮಯೂರ್ (30 ವರ್ಷ), ತಂದೆ: ಮನೋಹರ್, ವಾ: ಗುಲಾಬ್ಗಂಜ್, ಭೂಪಾಲ್, ಮಧ್ಯಪ್ರದೇಶ.

3) ಬಾಲಿ (22 ವರ್ಷ), ತಂದೆ: ವಿಷ್ಣು, ವಾಸ: ಮಾಧವ್ಗಡ್, ಆಶೋಕನಗರ, ಮಧ್ಯ ಪ್ರದೇಶ

4) ವಿಕ್ಕಿ (21 ವರ್ಷ), ತಂದೆ: ವಿಕ್ರಂ, ವಾಸ: ಜಗನ್ಪುರ್ ಚಾಕ್, ಕೋತ್ವಾಲಿ ಪಿ.ಎಸ್, ಗುಣಾ ಜಿಲ್ಲೆ, ಮಧ್ಯ ಪ್ರದೇಶ.

Advertisement
Advertisement
Advertisement