ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mangaluru: ಸುಪಾರಿ ನೀಡಿ ಪತಿ ಹತ್ಯೆ ಪ್ರಕರಣ; ಪತ್ನಿ ಸಹಿತ ಐವರಿಗೆ ಜೀವಾವಧಿ ಶಿಕ್ಷೆ

Mangaluru: ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು  ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೋರ್ವರು ತನ್ನ ಪತಿಯನ್ನೇ ಕೊಲೆ ಮಾಡಿಸಿದ ಪ್ರಕರಣದಲ್ಲಿ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
10:07 AM Jul 03, 2024 IST | ಸುದರ್ಶನ್
UpdateAt: 10:08 AM Jul 03, 2024 IST
Advertisement

Mangaluru: ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು  ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೋರ್ವರು ತನ್ನ ಪತಿಯನ್ನೇ ಕೊಲೆ ಮಾಡಿಸಿದ ಪ್ರಕರಣದಲ್ಲಿ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.

Advertisement

Annamalai: ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ?- ಲಂಡನ್‌ನಲ್ಲಿ ನೆಲಸಲಿರುವ ಅಣ್ಣಾ ಮಲೈ

Advertisement

ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2016 ರಲ್ಲಿ ಈ ಘಟನೆ ನಡೆದಿತ್ತು. ಪಾವೂರು ನಿವಾಸಿ ಇಸ್ಮಾಯಿಲ್‌ (59) ಎಂಬುವವರೇ ಕೊಲೆಯಾದ ವ್ಯಕ್ತಿ. ಇವರ ಪತ್ನಿ ನೆಬಿಸಾ (40) ಹಾಗೂ ಈಕೆಯ ಪ್ರಿಯಕರ ಕುತ್ತಾರುಪದವಿನ ಜಮಾಲ್‌ ಅಹಮ್ಮದ್‌ (38), ಉಳ್ಳಾಲದ ಅಬ್ದುಲ್‌ ಮುನಾಫ್‌ ಆಲಿಯಾಸ್‌ ಮುನ್ನ (41) ಉಳ್ಳಾದ ಅಬ್ದುಲ್‌ ರೆಹಮಾನ್‌ (36) ಮತ್ತು ಬೋಳಿಯಾರ್‌ನ ಶಬೀರ್‌ (31) ಎಂಬುವವರೇ ಶಿಕ್ಷೆಗೊಳಗಾದವರು.

ನೆಬಿಸಾ ಇಸ್ಮಾಯಿಲ್‌ ಅವರ ಎರಡನೇ ಹೆಂಡತಿ. ಇವರು ನಾಲ್ವರು ಮಕ್ಕಳನ್ನು ಹೊಂದಿದ್ದರು. ನೆಬಿಸಾಳಿಗೆ ಜಮಾಲ್‌ ಜೊತೆ ಅನೈತಿಕ ಸಂಬಂಧವಿತ್ತು. ಇದು ಇಸ್ಮಾಯಿಲ್‌ ಅವರಿಗೆ ತಿಳಿದು ಪ್ರಶ್ನೆ ಮಾಡಿದ್ದಾರೆ. ಈ ಕಾರಣಕ್ಕೆ ಪತಿ-ಪತ್ನಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಈ ಕಾರಣಕ್ಕೆ ನೆಬಿಸಾ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿದ್ದಾಳೆ.

ಕೊಲೆ ಮಾಡಿರುವುದು ಹೇಗೆ?
ರೂ.2.50 ಲಕ್ಷ ಸುಪಾರಿ ನೀಡಿ ಕೊಲೆ ಮಾಡಲಾಗಿತ್ತು. ನೆಬಿಸಾ ತನ್ನ ಪ್ರಿಯಕರ ಜಮೀಲ್‌ ಜೊತೆ ಸೇರಿ ತನ್ನ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದು, ಇದರಲ್ಲಿ ಜಮೀಲ್‌ ತನ್ನ ಸ್ನೇಹಿತ ಆಟೋರಿಕ್ಷಾ ಚಾಲಕ ಅಬ್ದುಲ್‌ ರೆಹಮಾನ್‌ ಜೊತೆ ಅಬ್ದುಲ್‌ ಮುನಾಫ್‌ ಸೇರಿಕೊಂಡಿದ್ದಾರೆ.

ಗಾಡಿ ಬಾಡಿಗೆ ನಡೆಸುತ್ತಿದ್ದ ಇಸ್ಮಾಯಿಲ್‌ ಫರಂಗಿಪೇಟೆಯಲ್ಲಿ ತನ್ನ ವ್ಯಾಪಾರ ಇಟ್ಟುಕೊಂಡಿದ್ದರು. ಇವರಿಗೆ ಮೂರು ವಾಹನಗಳು ಇದ್ದವು. ಫೆ.16, 2016 ರಂದು ಸಂಜೆ ಇಸ್ಮಾಯಿಲ್‌ ಬಳಿ ಆರೋಪಿಗಳು ಹೋಗಿದ್ದು, ಬಾಡಿಗೆ ಇದೆ ಬೆಂಗಳೂರಿಗೆ ಎಂದು ಹೇಳಿ ಕರೆದುಕೊಂಡು ಹೋಗಿದ್ದರು. ನಂತರ ಏಸ್‌ ವಾಹನದಲ್ಲಿ ತೆರಳಿದ್ದು, ಇವರ ಜೊತೆ ಚಾಲಕ ಶಬೀರ್‌ ನಂತರ ಸೇರಿಕೊಂಡಿದ್ದ. ನೆಲ್ಯಾಡಿ ಬಳಿ ಬಾರ್‌ನಲ್ಲಿ ಇಸ್ಮಾಯಿಲ್‌ಗೆ ಕಂಠಪೂರ್ತಿ ಕುಡಿಸಿದ ಆರೋಪಿಗಳು ಶಿರಾಡಿ ರಕ್ಷಿತಾರಣ್ಯದ ಕೆಂಪುಹೊಳೆ ತಲುಪಿದಾಗ ವಾಹನ ಕೆಟ್ಟು ಹೋಗಿತ್ತು. ಅಲ್ಲಿ ಆರೋಪಿಗಳು ಮತ್ತೆ ಇಸ್ಮಾಯಿಲ್‌ಗೆ ಮದ್ಯಪಾನ ಮಾಡಿಸಿದ್ದಾರೆ.

ನಂತರ ಕಾಡಿನಲ್ಲಿ ಒಬ್ಬ ಯುವತಿ ಇದ್ದಾಳೆ ಎಂದು ಹೇಳಿ ರಾತ್ರಿ 11.30 ರ ಹೊತ್ತಿಗೆ ತಾವು ತಂದಿದ್ದ ಚೂರಿಯಿಂದ ಇಸ್ಮಾಯಿಲ್‌ಗೆ ಇರಿದು ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಅಲ್ಲಿಯೇ ಇದ್ದ ತಗ್ಗಾದ ಸ್ಥಳದಲ್ಲಿಟ್ಟು ತರೆಗೆಲೆ, ಮಣ್ಣು ಎಲ್ಲಾ ಹಾಕಿ ಮುಚ್ಚಿ ಹಾಕಿದ್ದರು. ನಂತರ ವಾಹನವನ್ನು ಮರಳಿ ಉಪ್ಪಿನಂಗಡಿ ಬಜತ್ತೂರಿನ ನೀರಕಟ್ಟೆಗೆ ತಂದು ನಿಲ್ಲಿಸಿದ್ದಾರೆ. ಅನಂತರ ಮೊಬೈಲ್‌, ಬಟ್ಟೆ ತಗೊಂಡು ಬಂದು ನೇತ್ರಾವತಿ ನದಿಗೆ ಎಸೆದಿದ್ದಾರೆ.

ದೂರು ದಾಖಲು
ಇಸ್ಮಾಯಿಲ್‌ ನಾಪತ್ತೆ ಎಂದು ಸ್ವತಃ ಪತ್ನಿ ನೆಬಿಸಾ ಕೊಣಾಜೆ ಠಾಣೆಗೆ ದೂರನ್ನು ನೀಡಿದ್ದಾಳೆ.

ವಾಹನ ಪತ್ತೆ
ಫೆ.18 ರಂದು ಇಸ್ಮಾಯಿಲ್‌ ವಾಹನದಲ್ಲಿ ರಕ್ತದ ಕಲೆಗಳು ಇದ್ದವು. ಇದನ್ನು ಗಮನಿಸಿದ ಇಸ್ಮಾಯಿಲ್‌ ಅವರ ಪುತ್ರ (ಮೊದಲನೇ ಪತ್ನಿಯ ಪುತ್ರ) ನೆಬಿಸಾ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಪೊಲೀಸರಿಗೆ ದೂರನ್ನು ನೀಡಿದ್ದಾನೆ. ಅನಂತರ ನೆಬಿಸಾಳನ್ನು ತನಿಖೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿತ್ತು.

ಶಿಕ್ಷೆ ಪ್ರಮಾಣ ಪ್ರಕಟ;
ಐಪಿಸಿ 302 ರಂತೆ ಜೀವಾವಧಿ ಹಾಗೂ 2 ಲಕ್ಷ ದಂಡ, ದಂಡ ಪಾವತಿಸಲು ವಿಫಲರಾದರೆ ಹೆಚ್ಚುವರಿಗೆ 2 ವರ್ಷ ಕಾರಾಗೃಹ, ಐಪಿಸಿ 201 ರ ಅಡಿ 7 ವರ್ಷ ಕಠಿಣ ಸಜೆ, 1 ಲಕ್ಷ ರೂ. ದಂಡ, ದಂಡ ಪಾವತಿಸಲು ವಿಫಲರಾದರೆ 1 ವರ್ಷ ಹೆಚ್ಚುವರಿ ಕಾರಾಗೃಹ, ಐಪಿಸಿ 120 ರ ಅಡಿ 7 ವರ್ಷ ಕಠಿಣ ಸಜೆ ಮತ್ತು 50,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಇಸ್ಮಾಯಿಲ್‌ ಅವರ ಮಕ್ಕಳಿಗೆ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ.

Murder Case: ಮಲಯಾಳಿ ಅಬ್ದುಲ್ ರಹೀಮ್ ಮರಣದಂಡನೆ ರದ್ದು: ಸೌದಿ ಅರೇಬಿಯಾದ ರಿಯಾದ್ ಕೋರ್ಟ್ ಆದೇಶ

Advertisement
Advertisement