Mangaluru: ಉದ್ಯಮಿಗೆ ಚೂರಿಯಿಂದ ಇರಿದು ದರೋಡೆ; ನಗದು, ಚಿನ್ನಾಭರಣ ಲೂಟಿ
Mangaluru: ಉದ್ಯಮಿಯೋರ್ವರಿಗೆ ಚೂರಿಯಿಂದ ಇರಿದು ಮನೆ ದರೋಡೆ ಮಾಡಿದ ಘಟನೆಯೊಂದು ಮಂಗಳೂರು ಹೊರವಲಯದ ಪೆರ್ಮಂಕಿ ಎಂಬಲ್ಲಿ ನಡೆದಿರುವ ಕುರಿತು ವರದಿಯಾಗಿದೆ.
08:20 AM Jun 22, 2024 IST | ಸುದರ್ಶನ್
UpdateAt: 08:20 AM Jun 22, 2024 IST
Advertisement
Mangaluru: ಉದ್ಯಮಿಯೋರ್ವರಿಗೆ ಚೂರಿಯಿಂದ ಇರಿದು ಮನೆ ದರೋಡೆ ಮಾಡಿದ ಘಟನೆಯೊಂದು ಮಂಗಳೂರು ಹೊರವಲಯದ ಪೆರ್ಮಂಕಿ ಎಂಬಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಉದ್ಯಮಿ ಪದ್ಮನಾಭ್ ಕೋಟ್ಯಾನ್ ಮನೆಯಲ್ಲಿ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ.
Advertisement
ಪದ್ಮನಾಭ ಕೋಟ್ಯಾನ್ ಅವರು ಸಿವಿಲ್ ಕಾಂಟ್ರಾಕ್ಟ್ ಆಗಿದ್ದು, 8 ದುಷ್ಕರ್ಮಿಗಳ ತಂಡ ಮಾಸ್ಕ್ ಧರಿಸಿ ಇನ್ನೋವಾ ಕಾರಿನಲ್ಲಿ ಬಂದು ಮನೆಗೆ ನುಗ್ಗಿ ಮನೆ ಮದಿಗೆ ಚೂರಿ ತೋರಿಸಿ ಬೆದರಿಸಿದ್ದು, ನಂತರ ಪದ್ಮನಾಭ ಅವರ ಭುಜಕ್ಕೆ ಚೂರಿಯಿಂದ ಇರಿದು, ಅವರ ಪತ್ನಿಯನ್ನು ಕಟ್ಟಿ ಹಾಕಿ ದರೋಡೆ ಮಾಡಿದ್ದು, ಅನಂತರ ನಗದು ಸೇರಿ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಬಂದಿದ್ದು, ಪರಿಶೀಲನೆ ಮಾಡಿದ್ದಾರೆ. ಗಾಯಗೊಂಡ ಪದ್ಮನಾಭ್ ಕೋಟ್ಯಾನ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದುಷ್ಕರ್ಮಿಗಳು ಹಿಂದಿ ಭಾಷೆಯಲ್ಲಿ ಸಂವಹನ ಮಾಡುತ್ತಿದ್ದರೆಂದು ತಿಳಿದು ಬಂದಿದೆ.
Advertisement
Advertisement