Mangaluru: ಅಡ್ಯಾರ್‌ನಲ್ಲಿರುವ ʼಬೊಂಡ ಫ್ಯಾಕ್ಟರಿʼ ಬಂದ್‌ಗೆ ಆದೇಶ
Mangaluru: ಅಡ್ಯಾರ್‌ನಲ್ಲಿರುವ ʼಬೊಂಡ ಫ್ಯಾಕ್ಟರಿʼ ಯಲ್ಲಿ ಎಳನೀರು ಕುಡಿದು ಹಲವು ಮಂದಿ ಅಸ್ವಸ್ಥರಾಗಿರುವ ಘಟನೆಯೊಂದು ನಡೆದಿತ್ತು. ಒಟ್ಟು 137 ಮಂದಿ ಅಸ್ವಸ್ಥರಾಗಿರುವ ಕುರಿತು ವರದಿಯಾಗಿದೆ. ಹಾಗಾಗಿ ಎಳನೀರು ಮತ್ತು ನ್ಯಾಚುರಲ್ ಐಸ್‌ಕ್ರೀಂ ಮಾರಾಟ ಸಂಸ್ಥೆಯಾದ ʼಬೊಂಡ ಫ್ಯಾಕ್ಟರಿʼ ಯನ್ನು ಬಂದ್ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಆದೇಶ ನೀಡಿದ್ದಾರೆ.
ಇದನ್ನೂ ಓದಿ: Conversion: ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರವಾಗುವಿರಾ? ಹಾಗಾದರೆ ಇದನ್ನು ಕಡ್ಡಾಯ ಪಾಲಿಸಬೇಕು-ಸರಕಾರದಿಂದ ಆದೇಶ
ತಾತ್ಕಾಲಿಕವಾಗಿ ಮತ್ತು ಮುಂದಿನ ಆದೇಶದವರೆಗೆ ಬೊಂಡ ನೀರು ಮತ್ತು ಇತರೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: Urfi Javed: 'ಆ ಡೈರೆಕ್ಟರ್ ರೂಮಿಗೆ ಕರೆದೊಯ್ದು ನೇರವಾಗಿ ನನ್ನ...' ಶಾಕಿಂಗ್ ಸತ್ಯ ಹೊರಹಾಕಿದ ಉರ್ಫಿ ಜಾವೇದ್ !!
ಹೊರರೋಗಿಗಳಾಗಿ 84 ಮಂದಿ ಒಳರೋಗಿಗಳಾಗಿ, ಹಾಗೂ 53 ಮಂದಿಗೆ ಚಿಕಿತ್ಸೆ ಪಡೆದಿದ್ದಾರೆ. ಇದೀಗ ಬಂಟ್ವಾಳದ ಸರಕಾರಿ, ಖಾಸಗಿ ಆಸ್ಪತ್ರೆಯಲ್ಲಿ 30 ಮಂದಿಗೆ ಚಿಕಿತ್ಸೆ ಮುಂದುವರೆದಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.