ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mangaluru: ಮಂಗಳೂರು ಕ್ರಿಶ್ಚಿಯನ್ ಶಾಲಾ ಶಿಕ್ಷಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಪತ್ರಿಕಾ ಪ್ರಕಟಣೆ ಹೊರಡಿಸಿ ಬಿಜೆಪಿ ಶಾಸಕರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಮುಖ್ಯೋಪಾಧ್ಯಾಯಿನಿ

09:16 AM Feb 16, 2024 IST | ಹೊಸ ಕನ್ನಡ
UpdateAt: 09:24 AM Feb 16, 2024 IST
Advertisement

Mangaluru: ಹಿಂದೂ ಸಂಸ್ಕೃತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಂಗಳೂರಿನ ಜೆರೋಸಾ ಶಾಲೆಯ ಸಿಸ್ಟರ್ ಪ್ರಭ(Sister prabha)ಅವರ ಮೇಲೆ ಗಂಭೀರ, ಆಕ್ರೋಶ ಕೇಳಿ ಬಂದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಅವರನ್ನು ಅಮಾತನತು ಮಾಡಿತ್ತು. ಅಲ್ಲದೆ ಮಾಧ್ಯಮಗಳ ಮುಂದೆ ವಿಷಾದ ವ್ಯಕ್ತಪಡಿಸಿತ್ತು. ಆದರೆ ಈ ಬೆನ್ನಲ್ಲೇ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಶಾಲಾ ಮುಖ್ಯ ಶಿಕ್ಷಕಿ ಪತ್ರಿಕಾ ಪ್ರಕಟಣೆ ನಡೆಸಿ, ಶಿಕ್ಷಕಿ ಪ್ರಭಾ ಅವರದ್ದು ಏನೂ ತಪ್ಪಿಲ್ಲವೆಂದು ಬಿಜೆಪಿ ಶಾಸಕರ(BJP) ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

Advertisement

ಇದನ್ನೂ ಓದಿ: Chamarajanagar: ಕರಿಮಣಿ ಮಾಲಿಕ ನೀನಲ್ಲ ಎಂದು ರೀಲ್ಸ್ ಮಾಡಿದ ಹೆಂಡತಿ- ನೊಂದು ಆತ್ಮಹತ್ಯೆ ಮಾಡಿಕೊಂಡ ಗಂಡ !!

https://x.com/NaadaPremiSha/status/1757071297320796595?t=cjZlo1eGgjppPPxwItOuIA&s=08

Advertisement

ಪ್ರಭಾ ಅವರನ್ನು ಅಮಾನತು ಮಾಡಿದಮೇಲೆ ಬಿಜೆಪಿ ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿಲಾಗಿತ್ತು. ಇದೀಗ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಅನಿತಾ ಅವರು ಇದರಲ್ಲಿ ಪ್ರಭಾ ಅವರು ಕ್ಲಾಸಿನಲ್ಲಿ ಮಾಡಿದ ಪಾಠ ಯಾವುದು, ಅದರಲ್ಲಿ ಅವರು ನೀಡಿದ ವಿವರಣೆ ಏನು ಮತ್ತು ಒಟ್ಟಾರೆ ಪ್ರಕರಣದಲ್ಲಿ ಶಾಸಕ ವೇದವ್ಯಾಸ ಕಾಮತ್‌ (MLA Vedavyasa Kamath) ಅವರ ಪಾತ್ರವೇನು ಎಂಬ ವಿವರಣೆಯನ್ನು ನೀಡಲಾಗಿದೆ.

ಹೌದು, ಶಿಕ್ಷಕಿ ಪ್ರಭಾ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿಲ್ಲ. ಅವರನ್ನು ಕೆಲಸದಿಂದ ತೆಗೆದುಹಾಕಲು ಶಾಸಕ ವೇದವ್ಯಾಸ್ ಕಾಮತ್ ಅವರು ಆಡಳಿತವನ್ನು ಒತ್ತಾಯಿಸಿದ್ದರು. ಬೇರೆ ದಾರಿಯಿಲ್ಲದೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪ್ರಭಾ ಅವರನ್ನು ಕೆಲಸದಿಂದ ತೆಗೆದುಹಾಕುವ ಹೇಳಿಕೆಯನ್ನು ನೀಡುವಂತಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.

ಶಿಕ್ಷಕಿ ಪ್ರಭಾ ಹೇಳಿದ್ದೇನಂತೆ?

ಶಿಕ್ಷಕಿ ಪ್ರಭಾ ಅವರು ಏಳನೇ ತರಗತಿಯ ಮಕ್ಕಳಿಗೆ ಶಾಲಾ ಪಠ್ಯದಲ್ಲೇ ಉಲ್ಲೇಖಿತವಾಗಿರುವ ರವೀಂದ್ರನಾಥ ಠಾಗೋರ್‌ ಅವರು ಬರೆದಿರುವ Work is Worship ಎಂಬ ಪಾಠವನ್ನು ಮಾಡಿದ್ದಾರೆ. ಇದೊಂದು ಗೀತೆಯಾಗಿದ್ದು ಅದರಲ್ಲಿ ಉಲ್ಲೇಖಿತವಾಗಿರುವ ಅಂಶಗಳನ್ನು ಆಧರಿಸಿಯೇ ಕೆಲವೊಂದು ವಿವರಣೆಗಳನ್ನು ನೀಡಿದ್ದಾರೆ 'ದೇವಾಲಯಗಳು, ಚರ್ಚುಗಳು ಮತ್ತು ಮಸೀದಿಗಳು ಕೇವಲ ಕಟ್ಟಡಗಳಾಗಿವೆ. ದೇವರು ಮಾನವ ಹೃದಯದಲ್ಲಿ ನೆಲೆಸಿದ್ದಾನೆ. ಆದ್ದರಿಂದ ದೇವರ ಹೆಸರಿನಲ್ಲಿ ಮನುಷ್ಯರನ್ನುಕೊಲ್ಲಬಾರದು. ನಾವು ಕೆಲಸ ಮತ್ತು ಮನುಷ್ಯರನ್ನು ಗೌರವಿಸಬೇಕು ಮತ್ತು ಅವರಲ್ಲಿ ದೇವರನ್ನು ಕಾಣಬೇಕು. ದೇವರು ರಚನೆಗಳಲ್ಲಿ ಅಸ್ತಿತ್ವದಲ್ಲಿಲ್ಲ ಆದರೆ ಮಾನವ ಹೃದಯಗಳಲ್ಲಿ ಮತ್ತು ನಾವೆಲ್ಲರೂ ದೇವರ ದೇವಾಲಯಗಳು. ಎಂದು ಹೇಳಿದ್ದಾರೆ. ಶಿಕ್ಷಕಿ ತಾನು ಯಾವುದೇ ದೇವರ ವಿರುದ್ಧ ಮಾತನಾಡಿಲ್ಲ. ಇಷ್ಟೇ ವಿಚಾರಗಳನ್ನು ಶಿಕ್ಷಕಿ ಹೇಳಿದ್ದಾರೆ. ಯಾವುದೇ ಧರ್ಮವನ್ನು ಅವಹೇಳನ ಮಾಡಿಲ್ಲ, ಕವನದ ಅರ್ಥವನ್ನಷ್ಟೇ ಹೇಳಿದ್ದಾರೆ ಎಂದು ಮುಖ್ಯ ಶಿಕ್ಷಕಿ ಅನಿತಾ ಹೇಳಿದ್ದಾರೆ.

ಶಾಸಕ ವೇದವ್ಯಾಸ ಕಾಮತರ ಮೇಲೆ ಹಲವು ಆರೋಪ:

ಮುಖ್ಯ ಶಿಕ್ಷಕಿ ಅನಿತಾ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಶಾಸಕ ವೇದವ್ಯಾಸ ಕಾಮತ್‌ ಅವರ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ.

• ಘಟನೆಯ ಸಂಬಂಧ ಶಿಕ್ಷಕಿ ವಿರುದ್ಧ ಒಬ್ಬ ಹೆತ್ತವರು ದೂರು ನೀಡಿದ್ದು ನಿಜ. ದೂರನ್ನು ಪರಿಶೀಲನೆ ಮಾಡೋದಾಗಿಯೂ ಹೇಳಿದ್ದೆ. ಆದರೆ, ಅಷ್ಟರಲ್ಲಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗಿತ್ತು.

• ಶಿಕ್ಷಕಿ ಅನಿತಾ ಯಾವುದೇ ಧರ್ಮದ ಅವಹೇಳನದ ಪಾಠ ಮಾಡಿಲ್ಲ. ಆದರೆ, ಶಾಸಕ ವೇದವ್ಯಾಸ ಕಾಮತ್‌ ಅವರು ಶಿಕ್ಷಕಿ ಪ್ರಭಾ ಅವರನ್ನು ಅಮಾನತು ಮಾಡಲು ಒತ್ತಡ ಹೇರಿದರು.

• ವೇದವ್ಯಾಸ ಕಾಮತ್ ಜೊತೆ ಶಾಲೆಯ ಬಳಿ ಬಂದ ಹಿಂದೂ ಕಾರ್ಯಕರ್ತರು ಶಾಲೆಯ ವಿರುದ್ಧ ಘೋಷಣೆ ಕೂಗಿದರು. ಶಾಸಕ ವೇದವ್ಯಾಸ ಕಾಮತ್ ಈ ಘೋಷಣೆಯ ನೇತೃತ್ವ ವಹಿಸಿಕೊಂಡಿದ್ದರು.

• ಅಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿಗಳು ಯಾರೂ ಆ ಪಾಠ ಮಾಡಿದಾಗ ಇದ್ದ ತರಗತಿಯ ವಿದ್ಯಾರ್ಥಿಗಳು ಅಲ್ಲ.

• ಶಿಕ್ಷಣಾಧಿಕಾರಿಗಳ ಸೂಚನೆಯಂತೆ ನಾವು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದೆವು. ಈ ವೇಳೆ ಶಾಸಕ ಕಾಮತ್ ಶಿಕ್ಷಕಿಯನ್ನು ವಜಾ ಮಾಡುವಂತೆ ಬೆದರಿಕೆ ಹಾಕಿದರು. ಶಾಸಕರ ಒತ್ತಡದ ಮೇರೆಗೆ ಶಿಕ್ಷಕಿ ವಜಾ ಆದೇಶವನ್ನು ನೀಡಿದ್ದೇವೆ.

• ಶಿಕ್ಷಕಿ ಪ್ರಭಾ ಹದಿನಾರು ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ. ಜೆರೊಸಾ ಶಾಲೆಯಲ್ಲಿ ಐದು ವರ್ಷದಿಂದ ಶಿಕ್ಷಕಿಯಾಗಿದ್ದಾರೆ. ಈವರೆಗೆ ಇಂತಹ ಪಾಠಗಳನ್ನು ಅವರು ಮಾಡಿಲ್ಲ.

• ಆಡಿಯೋ ವೈರಲ್ ಮಾಡಿದ ಹೆತ್ತವರ ಉದ್ದೇಶ ನಮ್ಮ ಶಾಲೆಯ ಹೆಸರನ್ನು ಹಾಳು ಮಾಡುವುದಾಗಿದೆ. ಈ ಹೆತ್ತವರು ಯಾವುದೇ ಲಿಖಿತ ದೂರನ್ನು ನೀಡಿಲ್ಲ. ಆಡಿಯೋ ಹರಿಬಿಟ್ಟು ಶಾಲೆಯ ಹೆಸರನ್ನು ಕೆಡಿಸಲು ನೋಡಿದ್ದಾರೆ.

Related News

Advertisement
Advertisement