For the best experience, open
https://m.hosakannada.com
on your mobile browser.
Advertisement

Rishab Shetty: ಏಕಾಏಕಿ ರಿಷಬ್ ಶೆಟ್ಟಿ ವಿರುದ್ಧ ತಿರುಗಿಬಿದ್ದ ತುಳುನಾಡ ಜನ, ಕಾರಣ ಇದೇನಾ ?! ಕಾಂತಾರ- 2 ಬರೋದು ಡೌಟಾ?!

04:05 PM Dec 07, 2023 IST | ಅಶ್ವಿನಿ ಹೆಬ್ಬಾರ್
UpdateAt: 04:16 PM Dec 07, 2023 IST
rishab shetty  ಏಕಾಏಕಿ ರಿಷಬ್ ಶೆಟ್ಟಿ ವಿರುದ್ಧ ತಿರುಗಿಬಿದ್ದ ತುಳುನಾಡ ಜನ  ಕಾರಣ ಇದೇನಾ    ಕಾಂತಾರ  2 ಬರೋದು ಡೌಟಾ

Rishab Shetty: ಕಾಂತಾರ ಸಿನಿಮಾದ (Kantara Cinema)ಮೂಲಕ ಜಗತ್ತಿನಾದ್ಯಂತ ಸಂಚಲನ ಸೃಷ್ಟಿ ಮಾಡಿದ ನಟ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರಿಗೆ ಡಿವೈನ್ ಸ್ಟಾರ್ ಅನ್ನೋ ಪಟ್ಟ ಸಿಕ್ಕಿ ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಇದೀಗ, ರಿಷಬ್ ಶೆಟ್ಟಿಯವರು, ‘ಕಾಂತಾರʼ ಸಿನಿಮಾದ ಯಶಸ್ಸಿನ ಗುಂಗಿನಿಂದ ಹೊರ ಬಂದು ಮೈಕೊಡವಿ ಹೊಸ ಚಿತ್ರ ನಿರ್ಮಾಣದ ತಯಾರಿಯಲ್ಲಿ ಮುಳುಗಿದ್ದಾರೆ. ಈ ನಡುವೆ, ಕಾಂತಾರ ಸಿನಿಮಾದ ತಮ್ಮೆಲ್ಲಾ ಈ ಯಶಸ್ಸಿಗೆ ಬೆಂಬಲ ನೀಡುತ್ತಿದ್ದ ಅಭಿಮಾನಿಗಳು ಜೊತೆಗೆ ಅದರಲ್ಲೂ ವಿಶೇಷವಾಗಿ ತುಳುನಾಡ ಜನರೇ ರಿಷಬ್ ಶೆಟ್ಟಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

Advertisement

ಕಾಂತಾರ ಸಿನಿಮಾದಲ್ಲಿ (Kanatara Cinema)ಭೂತಾರಾಧನೆ, ಗುಳಿಗ ದೈವ, ಪಂಜುರ್ಲಿ ದೈವದ ಜತೆಗೆ ತುಳುನಾಡ ಸಂಪ್ರದಾಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಮುತುವರ್ಜಿ ವಹಿಸಿದ್ದ ರಿಷಬ್‌ ಶೆಟ್ಟಿಗೆ ಕರಾವಳಿ ಭಾಗದ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಅದೇ ಭಾಗದ ಜನ ರಿಷಬ್‌ ವಿರುದ್ಧ ಕಿಡಿಕಾರಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೈವದ ಹೆಸರಲ್ಲಿ ಅಪಹಾಸ್ಯ ನಡೆಯುತ್ತಿದ್ದು, ಕಂಡ ಕಂಡಲ್ಲಿ ದೈವದ ಹೆಸರಲ್ಲಿ ದುಡ್ಡು ಮಾಡುವ ಮಂದಿ ಹೆಚ್ಚಾಗಿದ್ದು, ಅಷ್ಟೆ ಅಲ್ಲದೇ, ಭೂತಾರಾಧನೆಯನ್ನು ಬೀದಿಗೆ ತಂದಿದ್ದಾರೆ. ಈ ರೀತಿ ಆಗಲು ಕಾಂತಾರ ಚಿತ್ರವೇ ಕಾರಣವೆಂದು ತುಳುಭಾಷಿಕರೇ ಆರೋಪ ಮಾಡುತ್ತಿದ್ದಾರೆ. ಇದಲ್ಲದೆ, ನೇರವಾಗಿ ಇದೆಲ್ಲದಕ್ಕು ರಿಷಬ್‌ ಶೆಟ್ಟಿ ಅವರೆ ಕಾರಣ ಎಂದು ಕರಾವಳಿ ಮಂದಿ ಆರೋಪಿಸಿದ್ದಾರೆ. ಹೀಗಾಗಿ, ಹಣ ಮತ್ತು ಹೆಸರು ಮಾಡಲು ಭೂತಾರಾಧನೆಯನ್ನು ಬಳಸಬೇಡಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ತುಳು ಭಾಷಿಕರೇ #SaveTulunad ಎಂಬ ಅಭಿಯಾನವನ್ನು ಪ್ರಾರಂಭ ಮಾಡಿದ್ದಾರೆ.

ಇದನ್ನು ಓದಿ: Vastu Tips: ಕಾರಲ್ಲಿ ಈ ವಸ್ತುಗಳನ್ನು ಇಟ್ಟರೆ ವಾಸ್ತು ಪ್ರಕಾರ ಶುಭವಂತೆ !!

Advertisement

"ಹಲೋ ರಿಷಬ್‌ ಶೆಟ್ಟಿ ಹೊಂಬಾಳೆ ಫಿಲಂಸ್..‌ ಕಾಂತಾರ ಚಿತ್ರ ಮಾಡಿ ಅನಾದಿ ಕಾಲದಿಂದ ರಕ್ಷಿಸಿಕೊಂಡು ಬಂದಿದ್ದ ತುಳುನಾಡಿನ ಭೂತಾರಾಧನೆಯನ್ನು ಈ ರೀತಿ ಬೀದಿಗೆ ತಂದು ಪ್ರದರ್ಶನ ವಸ್ತು ಮಾಡಿ, ಅಪಹಾಸ್ಯ ಮಾಡಿ, ಅದರ ಪಾವಿತ್ರ್ಯತೆಯನ್ನು ಹಾಳು ಮಾಡಲು ಕಾರಣರಾಗಿದ್ದೀರಿ. ದಯವಿಟ್ಟು ಹಣ ಮತ್ತು ಹೆಸರು ಮಾಡಲು ಭೂತಾರಾಧನೆ ಬಳಕೆ ಮಾಡಬೇಡಿ. ಬೇರೆ ಕಥಾವಸ್ತುಗಳನ್ನು ಬಳಸಿ. ಕೇವಲ ನೀವು ಆ ಭಾಗವದವರು ಎಂಬ ಕಾರಣಕ್ಕೆ ದೈವಾರಾಧನೆಯನ್ನು ನೀವು ಗುತ್ತಿಗೆ ಪಡೆದುಕೊಂಡಿಲ್ಲ! ಈ ಚಿತ್ರದಿಂದ ಪ್ರಚಾರ ಸಿಗುತ್ತದೆ ಎಂದರೆ, ದೈವಗಳಿಗೆ ನಿಮ್ಮ ಪ್ರಚಾರದ ಅಗತ್ಯವೂ ಇಲ್ಲ. ಅವುಗಳಿಗೆ ಕಾರ್ಣಿಕ ತೋರಿಸಲು ಅವರದ್ದೇ ಶಕ್ತಿ ಇದೆ ". ಎಂದು ಬರೆದುಕೊಂಡ ಪೋಸ್ಟ್ ವೈರಲ್ ಆಗಿದೆ. ಈ ಮೂಲಕ ರಿಷಬ್‌ ಶೆಟ್ಟಿ ಮತ್ತು ಹೊಂಬಾಳೆ ಫಿಲಂಸ್‌ ಅವರಿಗೆ ಒಂದಷ್ಟು ಪ್ರಶ್ನೆಯನ್ನೂ ಕೇಳಲಾಗಿದೆ. ರಿಷಬ್‌ ಶೆಟ್ಟಿ ಅವರನ್ನು ಕೂಡ ತರಾಟೆಗೆ ತೆಗೆದುಕೊಳ್ಳಲಾಗಿದೆ. ತುಳುವ ಸ್ಪೀಕ್ಸ್‌ ಟ್ವಿಟರ್‌ ಖಾತೆಯಲ್ಲಿ ಈ ಕುರಿತು ಅಸಮಾಧಾನ ಹೊರಹಾಕಿದ್ದಾರೆ.

Advertisement
Advertisement