For the best experience, open
https://m.hosakannada.com
on your mobile browser.
Advertisement

Polutry Farm Building: ವಿಟ್ಲ ಸಮೀಪದ ಕೊಳ್ನಾಡಿಯಲ್ಲಿ ಕೋಳಿ ಫಾರಂ ಕಟ್ಟಡ ಕುಸಿತ: 5, 000ಕ್ಕೂ ಅಧಿಕ ಕೋಳಿಗಳು ಬಲಿ!!

polutry farm building  ವಿಟ್ಲ ಸಮೀಪದ ಕೊಳ್ನಾಡಿಯಲ್ಲಿ ಕೋಳಿ ಫಾರಂ ಕಟ್ಟಡ ಕುಸಿತ  5  000ಕ್ಕೂ ಅಧಿಕ ಕೋಳಿಗಳು ಬಲಿ

Polutry Farm Building: ದಕ್ಷಿಣ ಕನ್ನಡ (Mangaluru)ಜಿಲ್ಲೆಯ ವಿಟ್ಲ ಸಮೀಪ ಕೊಳ್ನಾಡು ಗ್ರಾಮದ ದೇವಸ್ಯ ದಲ್ಲಿ ಕೋಳಿ ಫಾರಂ ಕಟ್ಟಡ(Polutry Farm Building) ದಿಢೀರ್ ಕುಸಿದ ಪರಿಣಾಮ 5,000 ಕ್ಕೂ ಹೆಚ್ಚು ಕೋಳಿಗಳು ಸತ್ತಿವೆ ಎನ್ನಲಾಗಿದೆ.

Advertisement

ಯಜ್ಞನಾಥ ಶೆಟ್ಟಿ ಮಾಲೀಕತ್ವದ ಕೋಳಿ ಫಾರಂ ಕಟ್ಟಡ ಇದ್ದಕಿದ್ದಂತೆ ಸಂಜೆ ದಿಢೀರನೆ ಕುಸಿದು ಬಿದ್ದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕಟ್ಟಡ ಕುಸಿದ ಶಬ್ದ ಕೇಳಿ ಸ್ಥಳಕ್ಕೆ ಆಗಮಿಸಿದ ಮಾಲಕರು ಮತ್ತು ಸ್ಥಳೀಯರು ಸ್ಥಳಕ್ಕೆ ಬರುವಷ್ಟರಲ್ಲಿ ಐದು ಸಾವಿರಕ್ಕೂ ಅಧಿಕ ಕೋಳಿಗಳು ಸತ್ತು ಹೋಗಿದ್ದವು ಎನ್ನಲಾಗಿದೆ. ಕೋಳಿ ಫಾರಂ ಕಟ್ಟಡ ದಿಢೀರ್ ಕುಸಿದು ಸುಮಾರು ಆರು ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಏಕಾಏಕಿ ಕಟ್ಟಡ ಕುಸಿದು ಬೀಳಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Intresting Facts: ಪಾಕಿಸ್ತಾನದ ರಾಷ್ಟ್ರೀಯ ತರಕಾರಿ ಯಾವುದು ಗೊತ್ತಾ? ಗೊತ್ತಾದ್ರೆ ಬೆಚ್ಚಿ ಬೀಳ್ತೀರ!

Advertisement

Advertisement
Advertisement