ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Mangalore Central Railway Station: ಮಂಗಳೂರಿಗೆ ಬರುವ ಈ ರೈಲುಗಳು ರದ್ದು; ದಿನಾಂಕ, ಸಮಯದ ಕುರಿತು ಕಂಪ್ಲೀಟ್‌ ವಿವರ ಇಲ್ಲಿದೆ!

11:56 AM Nov 21, 2023 IST | ಹೊಸ ಕನ್ನಡ
UpdateAt: 11:56 AM Nov 21, 2023 IST
Advertisement

Mangalore Central Railway Station: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನವೆಂಬರ್‌ 24, 25 ರಂದು ಎರಡು ದಿನಗಳ ಕಾಲ ರೈಲು (Train) ಸೇವೆ ಸ್ಥಗಿತಗೊಳ್ಳಲಿದೆ. ಹೆಚ್ಚುವರಿ ಫ್ಲಾಟ್‌ಫಾರಮ್‌ ನಿರ್ಮಾಣ ಆರಂಭವಾದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನವೆಂಬರ್‌ 24ರ ರೈಲು ಸಂಖ್ಯೆ 06487 ಮಂಗಳೂರು ಸೆಂಟ್ರಲ್‌-ಕಬಕ ಪುತ್ತೂರು ಎಕ್ಸ್‌ಪ್ರೆಸ್‌ ಮತ್ತು ರೈಲು ಸಂಖ್ಯೆ 06486 ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ಅನ್ನು ರದ್ದುಗೊಳಿಸಲಾಗಿದೆ.

Advertisement

ರೈಲು ಸಂಖ್ಯೆ 06485 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 06484 ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಅನ್ನು ನವೆಂಬರ್ 25ರಂದು ಸಂಪೂರ್ಣ ರದ್ದುಗೊಳಿಸಲಾಗಿದೆ. ನವೆಂಬರ್ 24 ರಂದು ಮಡಗಾಂವ್ ಜಂಕ್ಷನ್‌ನಿಂದ ಹೊರಡುವ ರೈಲು ಸಂಖ್ಯೆ 10107 ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಮೆಮು ಎಕ್ಸ್‌ಪ್ರೆಸ್ ಠೋಕೂರಿನಲ್ಲೇ ಕೊನೆಗೊಳ್ಳುತ್ತದೆ. ತೋಕೂರು ಮತ್ತು ಮಂಗಳೂರು ಸೆಂಟ್ರಲ್ ನಡುವೆ ರೈಲು ಭಾಗಶಃ ರದ್ದಾಗಲಿದೆ(Mangalore Central Railway Station).

ನವೆಂಬರ್ 24 ರಂದು ಮಡಗಾಂವ್ ಜಂಕ್ಷನ್‌ನಿಂದ ಹೊರಡುವ ರೈಲು ಸಂಖ್ಯೆ 06601 ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು, ಮಂಗಳೂರು ಜಂಕ್ಷನ್‌ನಲ್ಲೇ ಕೊನೆಗೊಳ್ಳುತ್ತದೆ. ರೈಲು ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ನಡುವಿನ ರೈಲುಗಳು ಭಾಗಶಃ ರದ್ದುಗಲಿವೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ.

Advertisement

ರೈಲು ಸಂಖ್ಯೆ 10108 ಮಂಗಳೂರು ಸೆಂಟ್ರಲ್-ಮಡ್ಗಾಂವ್ ಜಂಕ್ಷನ್ ಮೆಮು ಎಕ್ಸ್‌ಪ್ರೆಸ್ ನವೆಂಬರ್ 24 ರಂದು ಮಂಗಳೂರು ಸೆಂಟ್ರಲ್ ಬದಲಿಗೆ ತೋಕೂರು ನಿಲ್ದಾಣದಿಂದ ಹೊರಡಲಿದೆ. ಮಂಗಳೂರು ಸೆಂಟ್ರಲ್ ಮತ್ತು ತೋಕೂರ್ ನಡುವೆ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗುವುದು (ತೋಕೂರಿನಲ್ಲಿ ನಿರ್ಗಮನ ಸಮಯ ಸಂಜೆ 4.25)
ರೈಲು ಸಂಖ್ಯೆ 22638 ಮಂಗಳೂರು ಸೆಂಟ್ರಲ್-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ವೆಸ್ಟ್ ಕೋಸ್ಟ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ನವೆಂಬರ್ 24 ರಂದು ಮಂಗಳೂರು ಸೆಂಟ್ರಲ್ ಬದಲಿಗೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ. (ಮಂಗಳೂರು ಜಂಕ್ಷನ್‌ನಲ್ಲಿ ನಿಗದಿತ ನಿರ್ಗಮನ ಸಮಯ ರಾತ್ರಿ 11.45)
ರೈಲು ಸಂಖ್ಯೆ 16610 ಮಂಗಳೂರು ಸೆಂಟ್ರಲ್-ಕೋಜಿಕೋಡ್ ಎಕ್ಸ್‌ಪ್ರೆಸ್ ನವೆಂಬರ್ 25 ರಂದು ಮಂಗಳೂರು ಸೆಂಟ್ರಲ್ ಬದಲಿಗೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ. (ಮಂಗಳೂರು ಜಂಕ್ಷನ್‌ನಲ್ಲಿ ನಿಗದಿತ ನಿರ್ಗಮನ ಸಮಯ ಬೆಳಗ್ಗೆ 5.15) ಎಂದು ಟಿವಿ9 ಕನ್ನಡ ವರದಿ ಮಾಡಿದೆ.

ಇದನ್ನೂ ಓದಿ: Mangaluru: ಈ 6 ಪ್ರದೇಶಗಳಲ್ಲಿ " ಹಾರ್ನ್‌ ನಿಷೇಧಿತ ಪ್ರದೇಶ" ಘೋಷಣೆ; ಯಾವುದೆಲ್ಲ? ಇಲ್ಲಿದೆ ಕಂಪ್ಲೀಟ್‌ ವಿವರ

Advertisement
Advertisement