For the best experience, open
https://m.hosakannada.com
on your mobile browser.
Advertisement

Section 144: ಈ ಏರಿಯಾಗಳಲ್ಲಿ ಸೆ.144 ಸೆಕ್ಷನ್‌ ಜಾರಿ!!! ಯಾಕಾಗಿ? ಇಲ್ಲಿದೆ ಉತ್ತರ!!!

09:04 AM Dec 31, 2023 IST | ಹೊಸ ಕನ್ನಡ
UpdateAt: 09:04 AM Dec 31, 2023 IST
section 144  ಈ ಏರಿಯಾಗಳಲ್ಲಿ ಸೆ 144 ಸೆಕ್ಷನ್‌ ಜಾರಿ    ಯಾಕಾಗಿ  ಇಲ್ಲಿದೆ ಉತ್ತರ

Mall Of Asia: ಮಾಲ್‌ ಆಫ್‌ ಏಷ್ಯಾ ಕ್ಲೋಸ್‌ ಮಾಡಿ ಆದೇಶ ಹೊರಡಿಸಿದ ಕುರಿತು ವರದಿಯಾಗಿದೆ. ನಗರ ಪೊಲೀಸ್‌ ಕಮಿಷನರ್‌ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಜನವರಿ 15 ರವರೆಗೆ ಮಾಲ್‌ ಆಫ್‌ ಏಷ್ಯಾ ಬಂದ್‌ ಆಗಲಿದೆ. ಹಾಗಾಗಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಾಲ್‌ ವ್ಯಾಪ್ತಿಯಲ್ಲಿ 144 ಹಾಕಲಾಗಿದೆ. ಪೊಲೀಸರ ನಿಯೋಜನೆಯನ್ನು ಮಾಡಲಾಗಿದೆ.

Advertisement

ಶೇ.60 ರಷ್ಟು ಕನ್ನಡ ಬಳಕೆ ಮಾಡಿಲ್ಲ ಎಂದು ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಮಾಲ್‌ ಮೇಲೆ ದಾಳಿ ನಡೆಸಿ ಪ್ರತಿಭಟನೆ ಮಾಡಿತ್ತು. ಮಾಲ್‌ಗೆ ನುಗ್ಗಿ ಕರವೇ ಕಾರ್ಯಕರ್ತರು ನುಗ್ಗಿ ಗಲಾಟೆ ಮಾಡಿದ್ದರು. ಹಾಗಾಗಿ ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಡಿ.31ರಿಂದ ಜನವರಿ 15 ರವರೆಗೆ ಮಾಲ್‌ ಆಫ್‌ ಏಷ್ಯಾ ಬಂದ್‌ ಮಾಡಲಾಗಿದೆ. ಬೆಂಗಳೂರಿನ ಯಲಹಂಕ (Yelhanka, Bengaluru) ಹೋಬಳಿಯ ಬ್ಯಾಟರಾಯನಪುರದ ಬಳ್ಳಾರಿ ರಸ್ತೆಯ ಭಾಗದಲ್ಲಿ ಮಾಲ್ ಆಫ್ ಏಷ್ಯಾ ಇದೆ.

Advertisement

Advertisement
Advertisement