ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Maldives President Mohammed Muizu: ಭಾರತವನ್ನು "ಅತ್ಯಂತ ಹತ್ತಿರದ ಮಿತ್ರ" ಎಂದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು : ಚೀನಾ ಪರ ಒಲವಿದ್ದ ಮುಯಿಜು ಭಾರತದ ಪರ ಬದಲಾಗಿದ್ದು ಹೇಗೆ ?

11:02 AM Mar 23, 2024 IST | ಹೊಸ ಕನ್ನಡ
UpdateAt: 11:04 AM Mar 23, 2024 IST

ಭಾರತದೊಂದಿಗಿನ ದೀರ್ಘಕಾಲದ ಬಿಕ್ಕಟ್ಟಿನ ಸಂಬಂಧದ ನಂತರ, ಇದೀಗ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಮಾಲ್ಡೀವ್ಸ್ ಭಾರತದ " ಹತ್ತಿರದ ಮಿತ್ರ "ಎಂದು ಹೇಳುವ ಮೂಲಕ ಭಾರತದ ನಿರ್ಣಾಯಕ ಪಾತ್ರವನ್ನು ಪ್ರತಿಪಾದಿಸಿದ್ದಾರೆ ಎಂದು ಮಾಲ್ಡಿಸ್ ನ ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸ್ಥಳೀಯ ಮಾಧ್ಯಮಗಳಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ವಿಶೇಷವಾಗಿ ಮಾಲ್ಡೀವ್ಸ್ನ ಸಾಲದ ಹೊರೆಯನ್ನು ಪರಿಹರಿಸಲು ಭಾರತದಿಂದ ನಿರಂತರ ಬೆಂಬಲದ ಅಗತ್ಯವನ್ನು ಮುಯಿಜು ಒತ್ತಿ ಹೇಳಿದ್ದಾರೆ.

Advertisement

ಇದನ್ನೂ ಓದಿ: Belthangady: ತುಮಕೂರಿನಲ್ಲಿ ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ; ಆರು ಮಂದಿ ವಶಕ್ಕೆ

ಭಾರತವು ಮಾಲ್ಡೀವ್ಸ್ನ ಅತ್ಯಂತ ಹತ್ತಿರದ ಮಿತ್ರನಾಗಿ ಮುಂದುವರಿಯುತ್ತದೆ , ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ " ಎಂದು ಮುಯಿಜು ಹೇಳಿದ್ದಾರೆ. ಕಳೆದ ನವೆಂಬರ್ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಸಂದರ್ಶನವಾಗಿದೆ.

Advertisement

ಇದನ್ನೂ ಓದಿ: Udupi Chikmagaluru Constituency: ಬಿಜೆಪಿ ಅಭ್ಯರ್ಥಿ ಕೋಟಗೆ ಹಿಂದಿ, ಇಂಗ್ಲೀಷ್‌ ಬರಲ್ಲ, ಅವರನ್ನು ಗೆಲ್ಲಿಸಬೇಡಿ-ಜೆಪಿ ಹೆಗ್ಡೆ

ಕಳೆದ ವರ್ಷದ ಕೊನೆಯಲ್ಲಿ , ಮಾಲ್ಡೀವ್ಸ್ ಭಾರತಕ್ಕೆ ಸುಮಾರು $ 1 ಮಿಲಿಯನ್ ಸಾಲವನ್ನು ಹೊಂದಿತ್ತು, ಇದು ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಸಹಕಾರದ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಇದ್ದಕ್ಕಿದ್ದಂತೆ ಬದಲಾದ ಮುಯಿಜು ರಾಜತಾಂತ್ರಿಕ ನಡೆ ಕಾರಣವೇನು ?

2023ರ ಡಿಸೆಂಬರ್ನಲ್ಲಿ ಮಾಲ್ಡೀವ್ಸ್ ನಿಂದ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ವಾಪಸಾತಿಗೆ ಬೇಡಿಕೆ ಇಟ್ಟಿದ್ದ ಮುಯಿಜು ಆ ವರ್ಷದ ನವೆಂಬರ್ನಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಚೀನಾದ ಕಡೆಗೆ ಒಲವು ತೋರಿದ್ದ. ಆದರೆ ಇದೀಗ ತನ್ನ ನಿಲುವನ್ನು ಬದಲಾಯಿಸಿರುವ ಮುಯಿಜು ಮಾಲ್ಡೀವ್ಸ್ಗೆ ಸಹಾಯ ಮಾಡುವಲ್ಲಿ ಭಾರತದ ಪ್ರಮುಖ ಪಾತ್ರವನ್ನು ಒಪ್ಪಿಕೊಂಡಿದ್ದಾನೆ. ಭಾರತ ಮಾಲ್ಡೀಸ್ ನಲ್ಲಿ ಕೈಗೊಂಡಿರುವ ಯೋಜನೆಗಳ ಮಹತ್ವವನ್ನು ಒತ್ತಿಹೇಳುವ ಮೂಲಕ ಭಾರತದ ಕೊಡುಗೆಗಳಿಗೆ ಕೃತಜ್ಞತೆ ಸಲ್ಲಿಸಿದ್ದಾನೆ. ಮುಯಿಜು ತನ್ನ ಒಲವು ಬದಲಾಯಿಸಲು ಮುಖ್ಯ ಕಾರಣ ಭಾರತದ ರಾಜತಾಂತ್ರಿಕ ನಿಲುವು ಎಂದು ಹೇಳಲಾಗುತ್ತಿದೆ.

Advertisement
Advertisement
Next Article