For the best experience, open
https://m.hosakannada.com
on your mobile browser.
Advertisement

Makar Sankranti: ಮಕರ ಸಂಕ್ರಾಂತಿ ದಿನ ಹೀಗೇ ಮಾಡಿದರೆ ಸಾಕು!!

05:18 PM Jan 12, 2024 IST | ಅಶ್ವಿನಿ ಹೆಬ್ಬಾರ್
UpdateAt: 05:18 PM Jan 12, 2024 IST
makar sankranti  ಮಕರ ಸಂಕ್ರಾಂತಿ ದಿನ ಹೀಗೇ ಮಾಡಿದರೆ ಸಾಕು
Advertisement

Makar Sankranti: ಭಾರತದಲ್ಲಿ ಆಚರಿಸುವ ಬಹುದೊಡ್ಡ ಹಬ್ಬಗಳಲ್ಲಿ (Festival)ಮಕರ ಸಂಕ್ರಾಂತಿ (Makar Sankranti)ಕೂಡ ಒಂದು. ಈ ಹಬ್ಬವನ್ನು ಬಹುತೇಕ ಭಾರತ ಎಲ್ಲಾ ರಾಜ್ಯಗಳಲ್ಲೂ ಆಚರಿಸಲಾಗುತ್ತದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಧನುರ್ಮಾಸ ಮುಗಿದು ಶುಭ ಕಾರ್ಯಗಳು ನಡೆಯಲು ಮುಹೂರ್ತಗಳೂ ಕೂಡಿ ಬರುತ್ತವೆ.

Advertisement

ಧಾರ್ಮಿಕತೆಯ ಅನುಗುಣವಾಗಿ ಸಂಕ್ರಾಂತಿಯನ್ನು ಮಂಗಳಕರ ದಿನವೆಂದು ಕರೆಯುತ್ತೇವೆ. ಈ ವರ್ಷ ಜನವರಿ 15 ರಂದು ಮಕರ ಸಂಕ್ರಾಂತಿ( Makar Sankranti)ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಆದಾಗ್ಯೂ, ಕೆಲವೊಂದು ನಂಬಿಕೆ, ಪದ್ಧತಿಗಳು ಎಲ್ಲೆಡೆ ಸಾಮಾನ್ಯವಾಗಿದೆ.

Advertisement

ಮಕರ ಸಂಕ್ರಾಂತಿ ಹಬ್ಬದಲ್ಲಿ ಎಳ್ಳು, ಬೆಲ್ಲವನ್ನು ಹಂಚಿ ತಿನ್ನುವ ಪದ್ಧತಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಇದರ ಜೊತೆಗೆ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಇದಲ್ಲದೆ, ಸಂಕ್ರಾಂತಿ ಸಂದರ್ಭದಲ್ಲಿ ಖಿಚಡಿ ತಯಾರಿಸಿ, ಸೂರ್ಯ ದೇವನಿಗೆ ಅರ್ಘ್ಯ ಅರ್ಪಿಸಿ, ದಾನ ನೀಡುವ ಪದ್ದತಿ ಕೂಡ ಕೆಲವೆಡೆ ಈಗಲೂ ನಡೆಯುತ್ತದೆ.

ಸಂಕ್ರಾಂತಿ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ. ಅದರಲ್ಲಿಯೂ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ. ಹೀಗಾಗಿ, ಹೆಚ್ಚಿನ ಮಂದಿ ಅಯೋಧ್ಯಾ ಮಥುರಾ, ಹರಿದ್ವಾರ, ಕಾಶಿ, ಕಾಂಚೀಪುರಂ, ಉಜ್ಜಯಿನಿ, ದ್ವಾರಕಾದ ಪುಣ್ಯ ಸ್ಥಳಕ್ಕೆ ಹೋಗುವುದು ವಾಡಿಕೆ. ಈ ಏಳು ಸ್ಥಳಗಳಲ್ಲಿ ಸ್ನಾನ ಮಾಡಲು ಆಗುವುದಿಲ್ಲ ಎನ್ನುವವರು ಚಿಂತಿಸಬೇಕಾಗಿಲ್ಲ. ಮನೆಯಲ್ಲೇ ಗಂಗಾ ಸ್ನಾನ ಮಾಡಬಹುದು. ಹೇಗೆ ಅಂತೀರಾ??

ನೀವು ಸ್ನಾನ ಮಾಡುವ ನೀರಿಗೆ ಸ್ವಲ್ಪ ಎಳ್ಳು ಮತ್ತು ಗಂಗಾಜಲವನ್ನು ಸೇರಿಸಿ ಕೈಯಿಂದ ನೀರನ್ನು ಮುಟ್ಟಿಕೊಂಡು ಗಂಗಾ ಗಂಗಾ ಎಂದು ಏಳು ಬಾರಿ ಹೇಳುತ್ತಾ ಸ್ನಾನ ಮಾಡಬೇಕು. ಹೀಗೆ ಮಾಡಿದರೆ ಗಂಗೆಯಲ್ಲಿ ಸ್ನಾನ ಮಾಡಿದಷ್ಟೇ ಪುಣ್ಯ ನಿಮಗೆ ಲಭಿಸುತ್ತದೆ. ಇದರ ಜೊತೆಗೆ ಅಯೋಧ್ಯೆ ಮಥುರಾ ಮಾಯಾ, ಕಾಶೀ ಕಂಚಿ ಆವಂತಿಕಾ, ಪುರಿ ದ್ವಾರವತಿ ಚೈವ ಸಪ್ಪೆತೆಮೋಕ್ಷದಾಯಿಕಾ ಎಂಬ ಮಂತ್ರವನ್ನು ಕೂಡ ಪಠಿಸಬಹುದು.

Advertisement
Advertisement
Advertisement