Soujanya Case: ಸೌಜನ್ಯಾಳಿಗೆ ನ್ಯಾಯ ದೊರೆಯಬೇಕೆಂದಾದರೆ ಈ ಬಾರಿ NOTA ಕ್ಕೆ ಮತ ಚಲಾಯಿಸಿ : ಮಹೇಶ್ ಶೆಟ್ಟಿ ತಿಮರೋಡಿ
Soujanya Case: ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಇದುವರೆಗು ತಾರ್ಕಿಕ ಅಂತ್ಯ ಕಂಡಿಲ್ಲ. ಸೌಜನ್ಯಳ ಪರವಾಗಿ ನಿರಂತರ ಹೋರಾಟ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರು ಸೌಜನ್ಯ ಪರ ಹೋರಾಟಕ್ಕೆ ಬೆಂಬಲ ನೀಡದ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಲು ಮುಂದಾಗಿದ್ದಾರೆ. ಈ ಭಾರಿಯ ಚುನಾವಣೆಯಲ್ಲಿ ಕರಾವಳಿ ಭಾಗದ ಜನರೆಲ್ಲರೂ NOTA ಗೆ ಮತ ಹಾಕುವ ಮೂಲಕ ಸೌಜನ್ಯಳ ಪರ ನ್ಯಾಯಕ್ಕಾಗಿ ನಮ್ಮೊಂದಿಗೆ ನಿಲ್ಲಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಇದನ್ನೂ ಓದಿ: TSRTC: ಮಹಿಳೆಯರಿಗೆ ಫ್ರೀ ಬಸ್, ಹಾಗಾದ್ರೆ ಪುರುಷರಿಗೆ? ಗುಡ್ ನ್ಯೂಸ್ ನಿಮಗಾಗಿ
ಸುಳ್ಯಾದ ಪ್ರೆಸ್ ಕ್ಲಬ್ ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಚುನಾವಣೆಯಲ್ಲಿ ಕರಾವಳಿ ಭಾಗದ ಜನರ ಮತಗಳು NOTA ಗೆ ಬಿದ್ದರೆ ಆಗ ಕೇಂದ್ರ ಸರ್ಕಾರಕ್ಕೆ ಜನರ ಮನಸ್ಸಿನಲ್ಲಿ ಏನಿದೆ ಎಂಬುದು ತಿಳಿಯಲಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: Bournvita ಇನ್ನು ಮುಂದೆ ಕುಡಿಯುವ ಹಾಗಿಲ್ಲ? ಸರ್ಕಾರದಿಂದ ಹೊರ ಬಂದಿದೆ ಬಿಗ್ ಅಪ್ಡೇಟ್!
ಸೌಜನ್ಯ ಸಾವಿಗೆ ಇದೀಗ ಹನ್ನೆರಡು ವರ್ಷ ಪೂರೈಸುತ್ತಿದ್ದೆ. ನಾವು ಸೌಜನ್ಯಳ ಪರವಾಗಿ ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ, ಆದರೆ ನಮಗೆ ಇದುವರೆಗೂ ನ್ಯಾಯ ದೊರೆತಿಲ್ಲ. ಆದರೆ ನಮಗೆ ನ್ಯಾಯ ದೊರೆಯರು ದೇವರು ನಮಗೆ ಸದಾವಕಾಶ ಒಂದನ್ನು ನೀಡಿದ್ದಾನೆ, ಅದೇ ಲೋಕಸಭಾ ಚುನಾವಣೆ ಕರಾವಳಿ ಭಾಗದ ಎಲ್ಲಾ ಜನರು ಸೌಜನ್ಯಾಳಿಗೆ ಆದ ಅನ್ಯಾಯವನ್ನು ಮನಸ್ಸಿನಲ್ಲಿಟ್ಟುಕೊಂಡು NOTA ಕ್ಕೆ ಮತ ಹಾಕಬೇಕು.
NOTA ಗೆ ಮತಾ ಹಾಕುವುದರ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಅನೇಕ ಬದಲಾವಣೆಗಳು ನಡೆದಿವೆ, ಇದರಿಂದ ಅನೇಕರಿಗೆ ನ್ಯಾಯ ದೊರೆತಿದೆ. ಈ ಮೂಲಕ ನಾವು, ನಮ್ಮ ಭಾಗದಲ್ಲಿ NOTA ಚಲಾಯಿಸುವ ಮೂಲಕ ಸೌಜನ್ಯಾಳಿಗೆ ನ್ಯಾಯ ಒದಗಿಸಲೇಬೇಕು.
ನಮ್ಮ ಇಡೀ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಹಿಂದೂಗಳಿದ್ದರೂ ಸಹ ಸೌಜನ್ಯಾಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗಲಿಲ್ಲವೆಂದರೆ ಹೇಗೆ ಸಾಧ್ಯ? ಈ ಹಿಂದೆ ಸಂಸದರ ಬಳಿ, ಸೌಜನ್ಯಳ ತಾಯಿ ನಾವು ಪ್ರಧಾನಮಂತ್ರಿಯವರನ್ನು ಭೇಟಿಯಾಗಿ ಅವರ ಬಳಿ ನಮ್ಮ ಸಂಕಷ್ಟ ತೊಡಿಕೊಳ್ಳಬೇಕು ಎಂದು ಕೇಳಿದ್ದರು. ಆಗ ಸಂಸದರು ಭೇಟಿ ಮಾಡಿಸುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ.
ಬಿಜೆಪಿಯವರು ಪ್ರತಿಬಾರಿ ವೇದಿಕೆಗಳ ಮೇಲೆ ಮಾತನಾಡುವಾಗ ಸ್ತ್ರೀಶಕ್ತಿ, ಮಾತೆ, ಬೇಟಿ ಬಚಾವೋ ಬೇಟಿ ಪಡಾವೋ, ಎಂದು ಹೇಳುವ ಬಿಜೆಪಿ ನಾಯಕರಿಗೆ, ಹೆಣ್ಣಿನ ಕುರಿತಾಗಿ ಅಷ್ಟೊಂದು ಗೌರವ ಇರುವವರಾಗಿದ್ದಾರೆ, ನಮ್ಮ ಸೌಜನ್ಯಳಿಗೇಕೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಸ್ಥಳೀಯ ನಾಯಕರಿಗೆ ಏನಾಗಿದೆ ಅವರು ಸಹ ಈ ಕುರಿತು ಧ್ವನಿ ಎತ್ತುತ್ತಿಲ್ಲ, ಆದರೆ ಅನ್ಯಾಯಕ್ಕೊಳಗಾದ ಹೆಣ್ಣಿನ ಪರ ಹೋರಾಟ ಮಾಡಲು ಮುಂದೆ ಬರುವ ನಮ್ಮಂತಹವರ ಮೇಲೆ ಅನೇಕರು ತೇಜೋವಧೆ ಮಾಡಲು ಯತ್ನಿಸುತ್ತಾರೆ. ಆದರೆ ಇದನ್ನು ಸಹಿಸಲು ಸಾಧ್ಯವಿಲ್ಲ.
ಇನ್ನೇನು ಕೆಲವೇ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡಮಟ್ಟದ ಸಾರ್ವಜನಿಕ ಸಭೆಯೊಂದನ್ನು ಆಯೋಜಿಸುತ್ತಿದ್ದೇವೆ ಈ ಸಭೆಯಲ್ಲಿ ಎಲ್ಲರೂ ಭಾಗವಹಿಸಿ. ಈ ಬಾರಿ ಚುನಾವಣೆಯಲ್ಲಿ ಕರಾವಳಿ ಭಾಗದ ಎಲ್ಲಾ ಜನರು ನೋಟಾಕ್ಕೆ ಮತ ಹಾಕುವ ಮೂಲಕ ಸೌಜನ್ಯಳಿಗೆ ನ್ಯಾಯ ದೊರಕಿಸೋಣ ಎಂದು ತಿಳಿಸಿದರು.