ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Madikeri: Urgent make an accident - ʼತುರ್ತಾಗಿ ಒಂದು ಅಪಘಾತ ಮಾಡಿʼ ಎಂಬ ಸೂಚನಾಫಲಕ ನೋಡಿ ಜನ ನಕ್ಕಿದ್ದೇ ನಕ್ಕಿದ್ದು!

Madikeri: ಕೊಡಗಿನ ಬಳಿಯ ಹೆದ್ದಾರಿಯಲ್ಲಿ ತುರ್ತು ಸೂಚನಾ ಫಲಕದಲ್ಲಿ ' ಅರ್ಜೆಂಟ್ ಆಗಿದೆ. ಒಂದು ಆಕ್ಸಿಡೆಂಟ್ ಮಾಡಿ ' ನಾಮಫಲಕವನ್ನು ಹಾಕಲಾಗಿದೆ.
08:19 AM Jul 05, 2024 IST | ಸುದರ್ಶನ್
UpdateAt: 08:19 AM Jul 05, 2024 IST
Advertisement

Madikeri: ರಸ್ತೆ ಸುರಕ್ಷತೆಯ ಫಲಕಗಳನ್ನು ಆಯ್ದ ತಿರುವುಗಳಲ್ಲಿ, ಹೈವೆಗಳಲ್ಲಿ, ಅಥವಾ ಹಲವು ಆಕ್ಸಿಡೆಂಟ್ ಆಗಿರುವ ಪ್ರದೇಶಗಳಲ್ಲಿ ಹಾಕುವುದನ್ನು ಕಾಣುತ್ತೇವೆ. ಅಪಘಾತ ವಲಯ, ಅವಸರವೇ ಅಪಘಾತಕ್ಕೆ, ನಿಧಾನವಾಗಿ ಚಲಿಸಿ, ಮುಂದೆ ತಿರುವು ಇದೆ ಇತ್ಯಾದಿ ಸೂಚನಾ ಫಲಕ ಅಳವಡಿಸಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ಸ್ವತ: ' ಅರ್ಜೆಂಟ್ ಆಗಿದೆ. ಒಂದು ಆಕ್ಸಿಡೆಂಟ್ ಮಾಡಿ ' ಎನ್ನುವ ನಾಮಫಲಕವನ್ನು ಹಾಕಲಾಗಿದೆ. ಈ ರೀತಿಯ ಹಾಸ್ಯದ ಪ್ರಸಂಗ ಕೊಡಗಿನ ಬಳಿಯ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ತುರ್ತು ಸೂಚನಾ ಫಲಕದಿಂದ ಮೂಡಿದ್ದು ಇದೀಗ ಅಂತರ್ಜಾಲದಲ್ಲಿ ಈ ಸುದ್ದಿ ಫುಲ್ ವೈರಲ್ ಆಗುತ್ತಿದೆ.

Advertisement

Sumalatha Ambarish: ದರ್ಶನ್ ಕೊಲೆಗೈದ ಆರೋಪ ವಿಚಾರ- ಕೊನೆಗೂ ಸುದೀರ್ಘ ಪತ್ರದ ಮೂಲಕ ಮೌನ ಮುರಿದ ಸುಮಲತಾ !!

Advertisement

ಮೊದಲು ಇನ್ನೊಮ್ಮೆ ಈ ಫೋಟೋ ನೋಡಿ. ಇಲ್ಲಿ “ಅವಸರವೇ ಅಪಘಾತಕ್ಕೆ ಕಾರಣ” ಮತ್ತು “Urgent Make An Accident” ಎಂದು ಬರೆಯಲಾಗಿದೆ. ಅರ್ಜೆಂಟ್ ಮೇಕ್ ಎನ್ ಆಕ್ಸಿಡೆಂಟ್ ಅಂದರೆ ಇಂಗ್ಲಿಷ್‌ ಮತ್ತು. ಕನ್ನಡ ಬಲ್ಲವರಿಗೆ ನಗು ಬರುತ್ತದೆ. ಅದರ ಅರ್ಥ ʼತುರ್ತಾಗಿ ಒಂದು ಅಪಘಾತ ಮಾಡಿʼ ಎಂದಾಗುತ್ತದೆ ! ಅರ್ಜೆಂಟ್ ಅಪಘಾತಕ್ಕೆ ನಾಂದಿಯಾಗುತ್ತದೆ ಅನ್ನುವ ಬದಲು ಅರ್ಜೆಂಟಾಗಿ ಒಂದು ಆಕ್ಸಿಡೆಂಟ್ ಮಾಡಿ ಎನ್ನುವಂತೆ ಈ ಸೂಚನಾ ಫಲಕ ಬಿದ್ದಿದೆ. ಇಲ್ಲಿ ತಪ್ಪಿರುವ ಈ ಸೂಚನಾ ಫಲಕವನ್ನು ವಾಹನ ಚಾಲಕರು ಅಕ್ಷರಶಃ ಪಾಲಿಸಲು ಹೋದರೆ ಗೋವಿಂದ !! ಭಾಷಾ ಪ್ರಯೋಗ ತಪ್ಪಿ, ಕನ್ನಡದಿಂದ ಇಂಗ್ಲಿಷ್‌ಗೆ ತಪ್ಪಾಗಿ ಅನುವಾದ ಮಾಡಿರುವುದರಿಂದ ಈ ಅವಾಂತರ ಉಂಟಾಗಿದೆ.

ಮೊದಲೇ ಹೇಳಿದಂತೆ ಈ ದೃಶ್ಯ ಕಂಡು ಬಂದಿದ್ದು ಮಡಿಕೇರಿಯ ಸಂಪಾಜೆ ಬಳಿ ಮುಖ್ಯರಸ್ತೆಯಲ್ಲಿ. ಈಗ ಈ ಭಾಗದಲ್ಲಿ ಇದು ಟ್ರೆಂಡಿಂಗ್ ವಿಚಾರ. ಜನರು ಸಾಮಾಜಿಕ ಜಾಲತಾಣದಲ್ಲಿ ಈ ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡುವ ಮೂಲಕ ನಗುತ್ತಿದ್ದಾರೆ. ಒಟ್ಟಾರೆ ಜನರಿಗೆ ತಿಳಿ ಹೇಳಲು ಹಾಕಿರುವ ಸೂಚನಾ ಫಲಕಕ್ಕೆ ಜನ ಈಗ ತಿಳಿ ಹೇಳುತ್ತಿದ್ದಾರೆ !!!

KAS Exam Time Table: ಅಭ್ಯರ್ಥಿಗಳೇ ಗಮನಿಸಿ – 384 ಕೆಎಎಸ್ ಹುದ್ದೆಗಳ ಪರೀಕ್ಷೆಗೆ ಅಂತಿಮ ವೇಳಾಪಟ್ಟಿ ಪ್ರಕಟ

Advertisement
Advertisement