Madhya Pradesh: ನೀರು ಕುಡಿದ ಕೂಡಲೇ ಪ್ರಾಣ ಬಿಟ್ಟ ಯುವಕ - ಆತನಿಗೆ ಗೊತ್ತಿಲ್ಲದೆ ನೀರೊಂದಿಗೆ ಹೊಟ್ಟೆ ಸೇರಿದ್ದೇನು ಗೊತ್ತಾ?! ಅಬ್ಬಬ್ಬಾ.. ಕೇಳಿದ್ರೆ ಶಾಕ್ ಆಗ್ತೀರಾ
Madhya Pradesh: ಇಲ್ಲೊಬ್ಬ ರೈತನಿಗೆ ದಾಹ ನೀವಾರಿಸೋ ನೀರಲ್ಲಿ ಜವರಾಯ ಕುಳಿತಿದ್ದ ಎಂದರೆ ತಪ್ಪಾಗಲಾರದು. ಹೌದು, ಮಧ್ಯ ಪ್ರದೇಶದಲ್ಲಿ (Madhya Pradesh) ನೀರು ಕುಡಿಯುವ ವೇಳೆ ಯುವಕನ ದೇಹ ಪ್ರವೇಶಿಸಿದ ಜೇನು ನೊಣ, ಅಲ್ಲಿಯೇ ಸಿಲುಕಿಕೊಂಡು ಯುವಕನ ಗಂಟಲಿನ ಒಳಗೆ ಚುಚ್ಚಿ ಆತ ಉಸಿರುಗಟ್ಟಿ ಸಾಯುವಂತೆ ಮಾಡಿದೆ!
22 ವರ್ಷ ವಯಸ್ಸಿನ ಹಿರೇಂದ್ರ ಸಿಂಗ್ ಬೆರಾಸಿಯಾ ಪ್ರಾಂತ್ಯದ ಮನ್‌ಪುರ ಚಕ್ ಎಂಬ ಗ್ರಾಮದ ರೈತ ಯುವಕನೊಬ್ಬ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಊಟ ಸಮಯದಲ್ಲಿ ನೀರು ಕುಡಿಯುವಾಗ ಆಕಸ್ಮಿಕವಾಗಿ ಜೇನು ನೊಣವೊಂದನ್ನು ನುಂಗಿದ್ದಾನೆ. ಆತನ ಗಂಟಲಿನ ಮೂಲಕ ಅನ್ನನಾಳಕ್ಕೆ ಹೋಗಿ ಅಲ್ಲಿಯೇ ಸಿಲುಕಿಕೊಂಡಿದೆ. ಈ ವೇಳೆ ಯುವಕನಿಗೆ ಉಸಿರಾಟದ ತೊಂದರೆ ಎದುರಾಗಿದೆ. ಕೂಡಲೇ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದರೆ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯರು ಚಿಕಿತ್ಸೆಯ ಭಾಗವಾಗಿ ಹಿರೇಂದ್ರ ಸಿಂಗ್‌ಗೆ ಬಲವಂತವಾಗಿ ವಾಂತಿ ಮಾಡಿಕೊಳ್ಳುವಂತೆ ಮಾಡಿದರು. ಆಗ ಹಿರೇಂದ್ರ ಸಿಂಗ್ ಗಂಟಲಿನಲ್ಲಿದ್ದ ಜೇನು ನೊಣ ಹೊರಗೆ ಬಿದ್ದಿತ್ತು. ಆದರೂ ಹಿರೇಂದ್ರ ಸಿಂಗ್ ಜೀವ ಉಳಿಯಲಿಲ್ಲ. ವೈದ್ಯರ ಪ್ರಕಾರ ಹಿರೇಂದ್ರ ಸಿಂಗ್ ಗಂಟಲಿಗೆ ಪ್ರವೇಶಿಸಿದ ವೇಳೆ ಜೇನು ನೊಣ ಕಡಿದಿರಬಹುದು ಎಂದು ಶಂಕಿಸಲಾಗಿದೆ. ಇದೇ ಕಾರಣಕ್ಕೆ ಅವರಿಗೆ ನೋವು ಹಾಗೂ ಗಂಟಲು ಉರಿ ಶುರುವಾಗಿದೆ. ಬಳಿಕ ಉಸಿರಾಟದ ಸಮಸ್ಯೆ ಎದುರಾಗಿ ಜೀವ ಹೋಗಿದೆ. ಇದೇ ವಿಚಾರವನ್ನು ವೈದ್ಯರು ಪೊಲೀಸರಿಗೂ ತಿಳಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬೆರಾಸಿಯಾ ಠಾಣಾ ಪೊಲೀಸರು ಅಸಹಜ ಸಾವಿನ ಕುರಿತಾಗಿ ತನಿಖೆ ಕೈಗೊಂಡಿದ್ಧಾರೆ.
ಇದನ್ನೂ ಓದಿ: ರಾಜ್ಯದ ಶೇ.85 ರಷ್ಟು ಶಾಲೆಗಳಲ್ಲಿ ಶೌಚಾಲಯ ಇಲ್ಲ ?! ಶಿಕ್ಷಣ ಸಚಿವರು ಹೇಳಿದ್ದಿಷ್ಟು