ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

LPG Subsidy: LPG ಗ್ರಾಹಕರೇ ನಿಮಗಿದು ಕೊನೆ ಎಚ್ಚರಿಕೆ- ಡಿ.31ರೊಳಗೆ ತಪ್ಪದೇ ಈ ಕೆಲಸ ಮಾಡಿ, ಇಲ್ಲಾಂದ್ರೆ ಹೊಸ ವರ್ಷದಿಂದ ಸಬ್ಸಿಡಿ ಆಸೆ ಬಿಡಿ !!

05:24 PM Dec 16, 2023 IST | ಅಶ್ವಿನಿ ಹೆಬ್ಬಾರ್
UpdateAt: 05:24 PM Dec 16, 2023 IST
Advertisement

LPG Subsidy: ಕೇಂದ್ರ ಸರ್ಕಾರ ಅಡುಗೆ ಅನಿಲ ಸಂಪರ್ಕ (LPG Gas Cylinder)ಹೊಂದಿರುವ ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ್ದು, ಎಲ್‌ಪಿಜಿ ಸಬ್ಸಿಡಿ ಪಡೆಯಲು ಪ್ರತಿಯೊಬ್ಬರೂ ಡಿಸೆಂಬರ್‌ 31ರೊಳಗೆ ಇ-ಕೆವೈಸಿ (E-Kyc)ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ.

Advertisement

 

ಎಲ್‌ಪಿಜಿ ಸಬ್ಸಿಡಿ (LPG Subsidy) ಪಡೆಯಲು ಪ್ರತಿಯೊಬ್ಬರೂ ಇ-ಕೆವೈಸಿ (e-kyc) ಮಾಡಿಸಲು ಕೇಂದ್ರ ಸೂಚನೆ ನೀಡಿದ್ದು, ಇ-ಕೆವೈಸಿ ಮಾಡದಿದ್ದರೆ ಸಬ್ಸಿಡಿಯನ್ನು ರದ್ದುಗೊಳಿಸುವ ಎಚ್ಚರಿಕೆ ನೀಡಿದೆ. ಹೀಗಾಗಿ, ಎಲ್‌ಪಿಜಿ (LPG Gas Cylinder)ಸಂಪರ್ಕ ಹೊಂದಿರುವ ಎಲ್ಲ ಫಲಾನುಭವಿಗಳು ಈ ವರ್ಷದ ಡಿಸೆಂಬರ್ 31ರೊಳಗೆ ಇ-ಕೆವೈಸಿ ಮಾಡಿಸತಕ್ಕದ್ದು. ಗ್ಯಾಸ್ ಸಿಲಿಂಡರ್ ರೀಫಿಲ್ ಮೇಲೆ ಸಬ್ಸಿಡಿ ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸೂಚನೆಯ ಅನುಸಾರ, ಇ-ಕೆವೈಸಿ ಮಾಡಲು ಗ್ರಾಹಕರು ಬಳಸುತ್ತಿರುವ ಗ್ಯಾಸ್ ಸಿಲಿಂಡರ್ ಏಜೆನ್ಸಿಯನ್ನು ಸಂಪರ್ಕಿಸಬೇಕಾಗುತ್ತದೆ. ಇಲ್ಲದೇ ಹೋದರೆ, ಗ್ರಾಹಕರಿಗೆ ಲಭ್ಯವಿರುವ ಸಬ್ಸಿಡಿ ಮರುಪಾವತಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

Advertisement

Related News

Advertisement
Advertisement