ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

LPG Cylinder Hacks : ಗೃಹಿಣಿಯರೇ ಗಮನಿಸಿ, ಗೃಹಪಯೋಗಿ ಸಿಲಿಂಡರ್ ಉಳಿಸೋದು ಹೇಗೆ ಗೊತ್ತಾ?? ಇಲ್ಲಿದೆ ನೋಡಿ ಸೂಪರ್ ಟ್ರಿಕ್ಸ್!! !

04:13 PM Jan 19, 2024 IST | ಅಶ್ವಿನಿ ಹೆಬ್ಬಾರ್
UpdateAt: 04:13 PM Jan 19, 2024 IST
Advertisement

LPG Saving Tips: ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಅದರಲ್ಲಿಯೂ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಏರಿಕೆಯಾಗುತ್ತಿದೆ. ಈ ನಡುವೆ, ಗ್ಯಾಸ್ ಸಿಲಿಂಡರ್ ಅನ್ನು ಹೆಚ್ಚು ಕಾಲ ಉಳಿಯುವಂತೆ ಮಾಡಲು ಏನೂ ಮಾಡೋದು ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ನೋಡಿ ಸಿಂಪಲ್(Lpg Cylinder Hacks) ಟಿಪ್ಸ್!!

Advertisement

 

ಗ್ಯಾಸ್ ಬರ್ನರ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಇದರಿಂದ ಅವುಗಳನ್ನು ಸರಿಯಾಗಿ ಬಳಕೆ ಮಾಡಬಹುದು. ಬರ್ನರ್ ಕೊಳಕು ಇಲ್ಲವೇ ಧೂಳಿನಿಂದ ಮುಚ್ಚಿಹೋಗಿದ್ದರೆ, ಅದರ ಜ್ವಾಲೆಯು ನೀಲಿ ಬಣ್ಣಕ್ಕೆ ತಿರುಗಿ ಇಲ್ಲವೇ ಸ್ವಲ್ಪ ಹಳದಿಯಾಗಬಹುದು. ಹೀಗಾದರೆ, ಈ ಬರ್ನರ್ ಅನ್ನು ತೊಳೆದು ಸ್ವಚ್ಛಗೊಳಿಸಬೇಕು. ಗ್ಯಾಸ್ ಬರ್ನರ್ ಅನ್ನು ಸ್ವಚ್ಛಗೊಳಿಸಲು,ಗ್ಯಾಸ್ ಬರ್ನರ್ ಅನ್ನು ಬಿಸಿ ನೀರಿನಲ್ಲಿ ಇರಿಸಿ ಅದಕ್ಕೆ ಸ್ವಲ್ಪ ನಿಂಬೆ ಹಿಂಡಿಕೊಂಡು ಅದರಲ್ಲಿ ಸಂಪೂರ್ಣ ಇನೋ ಪ್ಯಾಕೆಟ್ ಸೇರಿಸಬೇಕು. ಹೀಗೆ ಎರಡರಿಂದ ಮೂರು ಗಂಟೆವರೆಗೆ ಈ ಮಿಶ್ರಣದಲ್ಲಿ ಬರ್ನರ್ ಅನ್ನು ನೆನೆಸಿದ ಬಳಿಕ ಬ್ರಷ್ನಿಂದ ಬರ್ನರ್ ಅನ್ನು ಸ್ವಚ್ಛಗೊಳಿಸಬೇಕು.

Advertisement

 

ಅಡುಗೆಯಲ್ಲಿ ಸಾಧ್ಯವಾದಷ್ಟು ಕುಕ್ಕರ್(GAS COOKERS) ಬಳಸಿದರೆ ಉತ್ತಮ.ಇದು ಅಡುಗೆಗೆ ಗ್ಯಾಸ್ ಬಳಕೆಯನ್ನು ಕಡಿಮೆ ಮಾಡುತ್ತದೆ. ಅಷ್ಟೆ ಅಲ್ಲದೇ, ಸಮಯ ಉಳಿತಾಯವಾಗುತ್ತದೆ. ಬೇಳೆ ಮತ್ತು ಅಕ್ಕಿಯನ್ನು ಅಡುಗೆ ಮಾಡುವ ಮೊದಲು ಕನಿಷ್ಠ ಅರ್ಧ ಘಂಟೆವರೆಗೆ ನೆನೆಸಿಡಬೇಕು. ಹೀಗೆ ಮಾಡುವುದರಿಂದ ದಾಲ್ ಇಲ್ಲವೇ ಅನ್ನ ಬೇಗ ಬೇಯುತ್ತದೆ.

 

ಸಿಲಿಂಡರ್ ಅನ್ನು ಮನೆಗೆ ತಂದ ಬಳಿಕ, ಮೊದಲು ಈ ಸಿಲಿಂಡರ್‌ನ ತೂಕವನ್ನು ಅಳೆಯಿರಿ. ತೂಕ ಸರಿಯಾಗಿ ಇರದೆ ಹೋದರೆ ಸಿಲಿಂಡರ್ ಅನ್ನು ಬದಲಾಯಿಸಬೇಕು. ನಾವು ಸಿಲಿಂಡರ್ ಅನ್ನು ದೀರ್ಘಕಾಲ ಬಳಸಲು ಅದನ್ನು ಸರಿಯಾಗಿ ತುಂಬಿದೆಯೇ (GAS CYLINDER REFILLING)ಎಂದು ಗಮನಿಸುವುದು ಬಹಳ ಮುಖ್ಯ.

 

ಗ್ಯಾಸ್ ಬಳಸುವಾಗ(GAS CYLINDER) ಸರಿಯಾದ ಪಾತ್ರೆಗಳನ್ನು ಬಳಸುವುದು ಉತ್ತಮ. ಅನುಪಾತದ ಅನುಸಾರ ಮಡಕೆ ಗಾತ್ರವನ್ನು ಆರಿಸಿಕೊಳ್ಳಿ. ಕಿಟಕಿ ಚೌಕಟ್ಟಿನಲ್ಲಿ ಇಲ್ಲವೇ ಗ್ಯಾಸ್ ಪೈಪ್‌ನಲ್ಲಿ ಸ್ವಲ್ಪ ಸೋರಿಕೆಯಿದ್ದರೆ ತಕ್ಷಣ ಅದನ್ನು ಸರಿಪಡಿಸಿಕೊಳ್ಳಿ. ಇದರಿಂದ ಅನಿಲವನ್ನು ವ್ಯರ್ಥವಾಗದು. ನೀವು ಸಿಲಿಂಡರ್ ಅನ್ನು ಮನೆಗೆ ತಂದ ದಿನಾಂಕವನ್ನು ಕ್ಯಾಲೆಂಡರ್‌ನಲ್ಲಿ ಬರೆದಿಟ್ಟುಕೊಳ್ಳಿ. ಹೀಗೆ ಮಾಡಿದರೆ, ಸಿಲಿಂಡರ್ ಅನ್ನು ಎಷ್ಟು ದಿನ ಬಳಸಿದ್ದೀರಾ ಎಂಬುದು ತಿಳಿಯುತ್ತದೆ. ಈ ಅಭ್ಯಾಸದಿಂದ ಸಿಲಿಂಡರ್ ಎಷ್ಟು ಕಾಲ ಉಳಿಯುತ್ತದೆ ಎಂದು ನೀವು ಅಂದಾಜಿಸಬಹುದು.

Advertisement
Advertisement