ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

LPG: ಎಲ್‌ಪಿಜಿ ಗ್ರಾಹಕರಿಗೆ ಸಿಗಲಿದೆ ಫ್ರೀ 50 ಲಕ್ಷ ವಿಮೆ; ಇಲ್ಲಿದೆ ಕಂಪ್ಲೀಟ್‌ ವಿವರ!!!

02:55 PM Jan 05, 2024 IST | ಹೊಸ ಕನ್ನಡ
UpdateAt: 02:55 PM Jan 05, 2024 IST
Advertisement

LPG free insurance coverage: LPG ಸಿಲಿಂಡರ್‌ ಸ್ಫೋಟಗೊಳ್ಳುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಇಂಥದಕ್ಕೆ ಇನ್ಶೂರೆನ್ಸ್‌ ಕವರೇಜ್‌ ಬೇಕಾಗುತ್ತದೆ. ಪೆಟ್ರೋಲಿಯಂ ಕಂಪನಿಗಳೇ ತಮ್ಮ ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ ಉಚಿತವಾಗಿ ಅಪಘಾತ ವಿಮಾ ಕವರೇಜ್‌ ಸೌಲಭ್ಯ ನೀಡುತ್ತದೆ. 50 ಲಕ್ಷ ರೂ. ಮೊತ್ತದ ಆಕ್ಸಿಡೆಂಟ್‌ ಇನ್ಶೂರೆನ್ಸ್‌ ಕವರೇಜ್‌ ಇದರಲ್ಲಿ ದೊರೆಯುತ್ತದೆ. ಇದಕ್ಕೆ ಎಲ್‌ಪಿಜಿ ಗ್ರಾಹಕರು ಪ್ರತ್ಯೇಕ ಪ್ರೀಮಿಯಂ ಕಟ್ಟಬೇಕಾಗಿಲ್ಲ. ಪೆಟ್ರೋಲಿಯಂ ಕಂಪನಿ ಈ ಕವರೇಜ್‌ ಉಚಿತವಾಗಿ ನೀಡುತ್ತದೆ.

Advertisement

ಗ್ಯಾಸ್‌ ಸೋರಿಕೆ, ಸ್ಫೋಟ ಇತ್ಯಾದಿ ಅಪಘಾತ ಘಟನೆಗಳಿಗೆ ಈ ವಿಮೆ ಲಭ್ಯವಿದೆ. ಈ ಸೌಲಭ್ಯಕ್ಕಾಗಿ ಪೆಟ್ರೋಲಿಯಂ ಕಂಪನಿಗಳು ವಿವಿಧ ವಿಮಾ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಎಲ್‌ಪಿಜಿ ಗ್ರಾಹಕ ಹಾಗೂ ಕುಟುಂಬ ವರ್ಷಕ್ಕೆ ಐವತ್ತು ಲಕ್ಷ ರೂ.ವರೆಗೆ ಕಾಂಪನ್ಶೇಶನ್‌ ಅವಕಾಶ ಇದೆ. ಒಬ್ಬ ಸದಸ್ಯರಿಗೆ ಹತ್ತು ಲಕ್ಷ ರೂ. ಪರಿಹಾರ ದೊರಕುತ್ತದೆ.

ಗ್ಯಾಸ್‌ ಸ್ಫೋಟ ದುರಂತ ಸಂಭವಿಸಿದರೆ ನೀವು ಸಮೀಪದ ಪೊಲೀಸ್‌ ಸ್ಟೇಷನ್‌ಗೆ ಹಾಗೂ ಎಲ್‌ಪಿಜಿ ಡಿಸ್ಟ್ರಿಬ್ಯೂಟರ್‌ಗೆ ಮಾಹಿತಿ ನೀಡಬೇಕು. ಇದಕ್ಕಾಗಿ ನೀವು ಇನ್ಶೂರೆನ್ಸ್‌ ಕಂಪನಿಯನ್ನು ಸಂಪರ್ಕಿಸುವ ಅಗತ್ಯ ಇರುವುದಿಲ್ಲ. ದೂರನ್ನು ಪೊಲೀಸ್‌ ಸ್ಟೇಷನ್‌ನಲ್ಲಿ ನೀಡಿದಾಗ ಅದರ ಪ್ರತಿ ನಿಮ್ಮಲ್ಲಿ ಇರಬೇಕು. ನೀವು ಎಲ್‌ಪಿಜಿ ಡಿಸ್ಟ್ರಿಬ್ಯೂಟರ್‌ಗೆ ವಿಷಯ ತಿಳಿಸಿದಾಗ ಅದು ಇನ್ಶೂರೆನ್ಸ್‌ ಕಂಪನಿಗೆ ತಿಳಿಸುತ್ತದೆ. ಅನಂತರ ಸಂಸ್ಥೆಯ ಪ್ರತಿನಿಧಿಗಳು ಬಂದು ತನಿಖೆ ಮಾಡುತ್ತಾರೆ. ತನಿಖೆಯ ಕೂಲಂಕುಷ ವರದಿಯ ಬಳಿಕ ಕ್ಲೈಮ್‌ ಪ್ರಕ್ರಿಯೆ ಪ್ರಾರಂಭವಾಗುತ್ತದೆ.

Advertisement

ಇನ್ಶೂರೆನ್ಸ್‌ ಕಂಪನಿಗೆ ನೀವುಗಳು ಎಲ್‌ಪಿಜಿ ದುರಂತದಿಂದ ಗಾಯಗೊಂಡಿದ್ದರೆ ಚಿಕಿತ್ಸಾ ದಾಖಲೆ, ಸಾವಾಗಿದ್ದರೆ ಡೆತ್‌ ಸರ್ಟಿಫಿಕೇಟ್‌, ಪೊಲೀಸರಿಗೆ ನೀಡಿದ ದೂರಿನ ಪ್ರತಿ, ಪೋಸ್ಟ್‌ ಮಾರ್ಟಮ್‌ ರಿಪೋರ್ಟ್‌ ಇವೆಲ್ಲ ದಾಖಲೆಗಳನ್ನು ನೀಡಬೇಕಾಗುತ್ತದೆ.

ಎಲ್‌ಪಿಜಿ ಸಿಲಿಂಡರ್‌ ಅಪಘಾತದದಲ್ಲಿ ಆಸ್ತಿ ಹಾನಿಯಾದರೆ ಗರಿಷ್ಠ ಎರಡು ಲಕ್ಷ ರೂ ವರೆಗೆ ಹಣ ಕ್ಲೈಮ್‌ ಮಾಡಬಹುದು. ಸಾವಾದರೆ ಆರು ಲಕ್ಷ ಒಬ್ಬ ವ್ಯಕ್ತಿಗೆ ವಿಮಾ ಪರಿಹಾರ ದೊರಕುತ್ತದೆ. ಗಾಯವಾದರೆ ಎರಡು ಲಕ್ಷ ಒಬ್ಬ ವ್ಯಕ್ತಿಗೆ ಪರಿಹಾರ ದೊರಕುತ್ತದೆ.

 

Advertisement
Advertisement