ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

LPG ಗ್ರಾಹಕರೇ ಗಮನಿಸಿ- ಮುಂದಿನ ತಿಂಗಳಿಂದ ಸಬ್ಸಿಡಿ ಬೇಕಂದ್ರೆ ತಕ್ಷಣ ಈ ಕೆಲಸ ಮಾಡಿ !!

10:23 AM Feb 17, 2024 IST | ಹೊಸ ಕನ್ನಡ
UpdateAt: 10:24 AM Feb 17, 2024 IST
Advertisement

LPG ಗ್ರಾಹಕರಿಗೆ ಮುಖ್ಯ ಮಾಹಿತಿಯೊಂದು ಹೊರಬಿದ್ದಿದ್ದು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ಸಿಲಿಂಡರ್‌ ಗಳ ಮೇಲಿ ಕೇಂದ್ರವು ನೀಡುವ ಸಬ್ಸಿಡಿಯನ್ನು ಪಡೆಯುತ್ತಿದ್ದರೃ ತಪ್ಪದೇ ಇದೊಂದು ಕೆಲಸ ಮಾಡಿಬಿಡಿ. ಇಲ್ಲಾಂದರೆ ಮುಂದಿನ ಮಾರ್ಚ್ ತಿಂಗಳಿಂದ ನಿಮ್ಮ ಸಬ್ಸಿಡಿ ನಿಲ್ಲುತ್ತದೆ.

Advertisement

ಇದನ್ನೂ ಓದಿ: Kidney Problems: ಬಿಸಿ ಬಿಸಿ ನೀರು ಕುಡಿತೀರಾ? ಕಿಡ್ನಿ ಸ್ಟೋನ್ ಆಗುವ ಸಂಭವ ಹೆಚ್ಚು!

ಹೌದು, ಉಜ್ವಲ ಯೋಜನೆಯ ಫಲಾನುಭವಿಗಳಾಗಿದ್ದು, LPG ಸಬ್ಸಿಡಿ ಪಡೆಯುತ್ತಿದ್ದರೆ ತಪ್ಪದೆ ನಿಮ್ಮ ಆಧಾರ್ ಸಂಖ್ಯೆಯನ್ನು ಎಲ್ಪಿಜಿ ಸಂಪರ್ಕಕ್ಕೆ ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಮಾರ್ಚ್ 31 ರೊಳಗೆ ನೀವು ಗ್ಯಾಸ್ ಸಿಲಿಂಡರ್ಗೆ ಕೆವೈಸಿ ಮಾಡದಿದ್ದರೆ, ಮಾರ್ಚ್ 31ರ ನಂತರ ನೀವು ಸಬ್ಸಿಡಿ ಪಡೆಯಲು ಸಾಧ್ಯವಾಗುವುದಿಲ್ಲ, ಸಿಗುವುದೂ ಇಲ್ಲ.

Advertisement

LPG ಗೆ ಆಧಾರ್ ಲಿಂಕ್ ಮಾಡುವುದು ಹೇಗೆ?* ಮೊದಲನೆಯದಾಗಿ, ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.

• ಇಲ್ಲಿ ಅಗತ್ಯ ವಿವರಗಳನ್ನು ನಮೂದಿಸಿದ ನಂತರ, ಪ್ರಯೋಜನ ಪ್ರಕಾರದಲ್ಲಿ ಎಲ್ಪಿಜಿ ಆಯ್ಕೆಯನ್ನು ಆರಿಸಿ.

• ಈಗ ನೀವು ಯೋಜನೆಯ ಹೆಸರನ್ನು ಹೇಳಬೇಕು.

• ನಂತರ ವಿತರಕರ ಹೆಸರನ್ನು ಆಯ್ಕೆ ಮಾಡಿ ಮತ್ತು ಗ್ರಾಹಕ ಸಂಖ್ಯೆಯನ್ನು ನಮೂದಿಸಿ.

• ಇದರ ನಂತರ, ನೀವು ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

• ಸಬ್ಮಿಟ್ ಬಟನ್ ಕ್ಲಿಕ್ ಮಾಡಿದ ನಂತರ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗೆ ಒಟಿಪಿ ಬರುತ್ತದೆ. ನೀವು ಈ ಒಟಿಪಿಯನ್ನು ನಮೂದಿಸಿ.

• ಈಗ ಸಂಬಂಧಪಟ್ಟ ಪ್ರಾಧಿಕಾರವು ವಿವರಗಳನ್ನು ಪರಿಶೀಲಿಸಿದ ನಂತರ, ನಿಮ್ಮ ಆಧಾರ್ ಅನ್ನು ಲಿಂಕ್ ಮಾಡಲಾಗುತ್ತದೆ.

Advertisement
Advertisement