For the best experience, open
https://m.hosakannada.com
on your mobile browser.
Advertisement

Love Jihad: ಲವ್‌ಜಿಹಾದ್‌ ಅಭಿಯಾನ; ಶ್ರೀರಾಮಸೇನೆಗೆ ಕೊಲೆ ಬೆದರಿಕೆ, ಫೇಸ್ಬುಕ್‌ ಖಾತೆ ಬಂದ್

Love Jihad: ಶ್ರೀರಾಮಸೇನೆ ಹೆಲ್ಪ್‌ಲೈನ್‌ಗೆ 170 ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆ ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಮುಖಂಡ ಗಂಗಾಧರ ಕುಲಕರ್ಣಿ ಆರೋಪ ಮಾಡಿರುವ ಕುರಿತು ವರದಿಯಾಗಿದೆ.
01:15 PM Jul 06, 2024 IST | ಸುದರ್ಶನ್
UpdateAt: 01:15 PM Jul 06, 2024 IST
love jihad  ಲವ್‌ಜಿಹಾದ್‌ ಅಭಿಯಾನ  ಶ್ರೀರಾಮಸೇನೆಗೆ ಕೊಲೆ ಬೆದರಿಕೆ  ಫೇಸ್ಬುಕ್‌ ಖಾತೆ ಬಂದ್
Advertisement

Love Jihad: ಶ್ರೀರಾಮಸೇನೆ ಲವ್‌ಜಿಹಾದ್‌ ವಿರುದ್ಧ ಅಭಿಯಾನ ಪ್ರಾರಂಭ ಮಾಡಿದ್ದಕ್ಕೆ ಇವರ ಮೇಲೆ ಬಾಂಬ್‌ ಹಾಕುವ ಹಾಗೂ ಜೀವ ತೆಗೆಯುವ ಬೆದರಿಕೆಗಳು ಬರುತ್ತಿರುವ ಕುರಿತು ಕೇಳಿ ಬರುತ್ತಿದೆ. ಈಗಾಗಲೇ ಶ್ರೀರಾಮಸೇನೆ ಹೆಲ್ಪ್‌ಲೈನ್‌ಗೆ 170 ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆ ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಮುಖಂಡ ಗಂಗಾಧರ ಕುಲಕರ್ಣಿ ಆರೋಪ ಮಾಡಿರುವ ಕುರಿತು ವರದಿಯಾಗಿದೆ.

Advertisement

Karnataka BJP: ರಾಜ್ಯ ಬಿಜೆಪಿಗೆ ಹೊಸ ಉಸ್ತುವಾರಿ ನೇಮಿಸಿದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ !!

ಮೇ 29 ರಂದು ಹೆಲ್ಪ್‌ಲೈನನ್ನು ಲವ್‌ಜಿಹಾದ್‌ ವಿರುದ್ಧ ಶ್ರೀರಾಮಸೇನೆ ಪ್ರಾರಂಭ ಮಾಡಿತ್ತು. ಈ ಹೆಲ್ಪ್‌ಲೈನ್‌ ನಂಬರ್‌ಗೆ ಇಲ್ಲಿಯವರೆಗೆ 1000 ಕ್ಕೂ ಅಧಿಕ ಕರೆಗಳು ಬಂದಿದೆ ಎಂದು ವರದಿಯಾಗಿದೆ.

Advertisement

ಇಂಟರ್‌ನೆಟ್‌ ಮೂಲಕ ದುಷ್ಕರ್ಮಿಗಳು ಜೀವ ಬೆದರಿಕೆ ಹಾಕುತ್ತಿದ್ದು, ಶ್ರೀರಾಮಸೇನೆ ಸಂಘಟನೆ ಮುಖಂಡರ ಫೇಸ್‌ಬುಕ್‌ ಅಕೌಂಟ್‌ ಅನ್ನು ಕೂಡಾ ಕ್ಲೋಸ್‌ ಮಾಡಿದ್ದಾರೆ ಎಂದು ವರದಿಯಾಗಿದೆ. ಸರಕೃ ಮಾಡಿದೆಯೋ ಅಥವಾ ಜಿಹಾದಿಗಳು ಮಾಡಿದ್ದಾರೋ ಎಂದು ಗೊತ್ತಿಲ್ಲ ಎಂದು ಹೇಳಲಾಗಿದೆ.

ಲವ್‌ಜಿಹಾದ್‌ ವಿರುದ್ಧ ಅಭಿಯಾನದಲ್ಲಿ ಈ ರೀತಿಯ ಷಡ್ಯಂತ್ರ ಮಾಡಲಾಗಿದೆ. ಪ್ರಮೋದ್‌ ಮುತಾಲಿಕ್‌, ಸಿದ್ಧಲಿಂಗ ಸ್ವಾಮೀಜಿ ಸೇರಿ ಎಲ್ಲರ ಅಕೌಂಟ್‌ ಬ್ಲಾಕ್‌ ಮಾಡಲಾಗಿದೆ. ಜಿಲ್ಲಾ ಅಧ್ಯಕ್ಷರ 18, ವಿಭಾಗ ಅಧ್ಯಕ್ಷರ 4 ಹಾಗೆನೇ ಕೆಲವು ಪ್ರಮುಖ ಕಾರ್ಯಕರ್ತರ ಫೇಸ್ಬುಕ್‌ ಬಂದ್‌ ಆಗಿದೆ.

ಈ ರೀತಿ ರಾಜ್ಯ ಸರಕಾರ ಮಾಡಿದ್ದರೆ ಕಾರಣ ಹೇಳಬೇಕು, ಮಾಡಿಲ್ಲ ಎನ್ನುವುದಾದರೇ ಫೇಸ್ಬುಕ್‌ ವಿರುದ್ಧ ಕೇಸ್‌ ಮಾಡಬೇಕು. ಸಂವಿಧಾನ ಬದ್ಧವಾದ ಹಕ್ಕುಗಳನ್ನು ವಾಪಸ್‌ ಕೊಡಿಸಬೇಕು. ಇದಕ್ಕೆಲ್ಲ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ಕಾರಣ ಎಂದು ಗಂಗಾಧರ ಕುಲಕರ್ಣಿ ಹೇಳಿದ್ದು, ಎಲ್ಲಾ ಅಕೌಂಟ್‌ಗಳನ್ನು ಮರು ಆರಂಭಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂಬ ಎಚ್ಚರಿಕೆ ಸಂದೇಶ ನೀಡಿದ್ದಾರೆ.

Divya Vasantha: ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ ಓದಿದವಳಿಗೆ ಐಷರಾಮಿ ಜೀವನವೇ ಮುಳುವಾಯ್ತೇ?

Advertisement
Advertisement
Advertisement