RSS: ಲೋಕ ಸಮರದಲ್ಲಿ ಗರ್ವಭಂಗ - ಬಿಜೆಪಿಗೆ ಟಾಂಗ್ ಕೊಟ್ಟ RSS ಸಂಚಾಲಕ ಮೋಹನ್ ಭಾಗವತ್ !!
RSS: ಲೋಕಸಭಾ ಚುನಾವಣೆಯಲ್ಲಿ ಮುಗ್ಗರಿಸಿ ಗರ್ವ ಭಂಗ ಮಾಡಿಕೊಂಡಿರುವ ಬಿಜೆಪಿಗೆ(BJP) ಆರೆಸ್ಸೆಸ್(RSS) ಮುಖ್ಯಸ್ಥ ಮೋಹನ ಭಾಗವತ್(Mohan Bhagavat) ಟಾಂಗ್ ನೀಡಿದ್ದಾರೆ. ಅಲ್ಲದೆ ಆರೆಸ್ಸೆಸ್ ಸಂಬಂಧಿ ನಿಯತಕಾಲಿಕೆ ‘ಆರ್ಗನೈಸರ್’(Arganisers) ನಲ್ಲಿ ಚಾಟಿ ಬೀಸಲಾಗಿದೆ.
ಹೌದು, ಲೋಕ ಸಮರದಲ್ಲಿ(Parliament Election) ನಾನು 400 ಸೀಟ್ ಗೆಲ್ಲತ್ತೇನೆ ಎಂದು ಭೀಗುತ್ತಿದ್ದ ಬಿಜೆಪಿ 400 ಸ್ಥಾನ ಹೋಗಲಿ, ಕನಿಷ್ಠ ಬಹುಮತದ 272 ಸ್ಥಾನದ ಗುರಿಯನ್ನೂ ದಾಟದೆ 240 ಸ್ಥಾನ ಪಡೆಯುವಲ್ಲಿಯೂ ಸುಸ್ತು ಹೊಡೆದಿದೆ. ಇದೀಗ ಬಿಜೆಪಿಯ ಮಾತೃ ಸಂಸ್ಥೆ RSS ನ ಸಂಚಾಲಕ ಮೋಹನ್ ಭಾಗವತ್ ನಯವಾಗಿ ಬಿಜೆಪಿಯನ್ನು ತಿವಿದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು 'ನಿಜವಾದ ಕಾರ್ಯಕರ್ತರು ಎಂದೂ ಅಹಂಕಾರಿ ಆಗಿರುವುದಿಲ್ಲ. ಚುನಾವಣಾ ಪ್ರಚಾರದ ವೇಳೆ ಶಿಸ್ತು ಕಾಪಾಡಲಿಲ್ಲ. ಚುನಾವಣೆಯನ್ನು ನಾವು ಸ್ಪರ್ಧೆ ರೀತಿಯಲ್ಲಿ ನೋಡಬೇಕೇ ವಿನಃ ಯುದ್ಧದ ರೀತಿಯಲ್ಲಲ್ಲ. ಚುನಾವಣೆಯಲ್ಲಿ ಆಡಿದ ಮಾತುಗಳು, ಪರಸ್ಪರರ ನೀಡಿದ ಎಚ್ಚರಿಕೆಗಳು, ಇಂಥ ಮಾತುಗಳಿಂದ ಸಮಾಜವನ್ನು ವಿಭಜನೆ ಮಾಡುವುದನ್ನು ಪ್ರಚೋದಿಸುತ್ತವೆ ಎಂದಿದ್ದಾರೆ. ಅಲ್ಲದೆ ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಕೇಳಿ ಬಂದ ಮಾತುಗಳಿಗೆ ಭಾಗವತ್ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
RSS ನಿಯತಕಾಲಿಕೆ 'ಆರ್ಗನೈಸರ್' ಹೇಳಿದ್ದೇನು?
ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶವು 'ಅತಿಯಾದ ಆತ್ಮವಿಶ್ವಾಸ' ಹೊಂದಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ ವಾಸ್ತವಾಂಶದ ದರ್ಶನ ಮಾಡಿಸಿಕೊಟ್ಟಿದೆ ಎಂದು ಆರ್‌ಎಸ್‌ಎಸ್ ಮುಖವಾಣಿ 'ಆರ್ಗನೈಸರ್' ನಿಯತಕಾ- ಲಿಕೆಯಲ್ಲಿ ಪ್ರಕಟಗೊಂಡ ಲೇಖನದಲ್ಲಿ ವಿಶ್ಲೇಷಿಸಲಾಗಿದೆ.
'ಪ್ರಧಾನಿ ನರೇಂದ್ರ ಮೋದಿ ಅವರು 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಬೇಕೆಂದು ಹೇಳುತ್ತಿದ್ದುದು, ತಮಗೆ ನೀಡಿದ ಗುರಿ ಎಂಬುದು ಪಕ್ಷದ ಹೆಚ್ಚಿನ ಕಾರ್ಯಕರ್ತರಿಗೆ ತಿಳಿಯಲೇ ಇಲ್ಲ' ಎಂದು ರತನ್ ಶಾರ್ದಾ ಅವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ. ಅಲ್ಲದೆ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ನಡೆಸುವ ಮೂಲಕ ಗುರಿಗಳನ್ನು ಈಡೇರಿಸ ಬಹುದೇ ಹೊರತು, ಪೋಸ್ಟರ್‌ಗಳು ಮತ್ತು ಸೆಲ್ಪಿಗಳನ್ನು ಮಾಧ್ಯಮಗಳಲ್ಲಿ ಸಾಮಾಜಿಕ ಹಂಚಿಕೊಳ್ಳುವು- ದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿವಿದಿದ್ದಾರೆ.
Darshan Thoogudeepa: ಶವ ಎಸೆಯಲು, ಕೊಲೆ ಆರೋಪ ಹೊತ್ತುಕೊಳ್ಳಲು 30 ಲಕ್ಷ ಹಣ ಕೊಟ್ಟಿದ್ದ ದರ್ಶನ್?