Lok Sabha Election 2024: ಲೋಕಸಭೆ ಚುನಾವಣೆ 2024; ದಿನಾಂಕ, ವೇಳಾಪಟ್ಟಿ ಇಂದು ಘೋಷಣೆ ಕುರಿತು ಆಯೋಗದ ಸುದ್ದಿಗೋಷ್ಠಿಯ ನೇರ ಪ್ರಸಾರ ನೋಡಲು ಇಲ್ಲಿದೆ ಲಿಂಕ್
Lok Sabha Elections 2024: ಲೋಕಸಭೆ ಚುನಾವಣೆ 2024 ರ ದಿನಾಂಕ ವೇಳಾಪಟ್ಟಿಯನ್ನು ಇಂದು (ಮಾರ್ಚ್ 16) ಮಧ್ಯಾಹ್ನ 3 ಗಂಟೆಗೆ ಚುನಾವಣಾ ಆಯೋಗ ಸುದ್ದಿಗೋಷ್ಠಿಯಲ್ಲಿ ಪ್ರಕಟ ಮಾಡಲಿದೆ. ಈ ಪತ್ರಿಕಾಗೋಷ್ಠಿಯ ನೇರ ಪ್ರಸಾರವಿರಲಿದ್ದು ಈ ಕೆಳಗೆ ನೀಡಿದ ಲಿಂಕ್ ಮೂಲಕ ನೀವು ಎಲ್ಲಾ ವಿವರಗಳನ್ನು ಪಡೆಯಬಹುದು.
ಇದನ್ನೂ ಓದಿ: Education Board : ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ಹೊಸ ರೂಲ್ಸ್ - ಇಲಾಖೆಯಿಂದ ಖಡಕ್ ಆದೇಶ !!
ಭಾರತದ ಚುನಾವಣಾ ಆಯೋಗವು ಕಳೆದ ಬಾರಿ 2019 ರ ಲೋಕಸಭೆ ಚುನಾವಣೆಯ ದಿನಾಂಕ ಮತ್ತು ವೇಳಾಪಟ್ಟಿಯನ್ನು ಮಾರ್ಚ್ 10 ರಂದು ಪ್ರಕಟ ಮಾಡಿತ್ತು. ಅಂದು ಏಳು ಹಂತಗಳಲ್ಲಿ ಚುನಾವಣೆ ನಡೆದು, ಎಪ್ರಿಲ್ 11 ರಿಂದ ಮೇ.19 ರ ತನಕ ಮತದಾನ ನಡೆಯಿತು. ಮೇ.23 ರಂದು ಫಲಿತಾಂಶ ಪ್ರಕಟವಾಗಿತ್ತು.
ಇದನ್ನೂ ಓದಿ: Political News: ಬಿಜೆಪಿಗೆ ಬಾಕಿ ಉಳಿಸಿಕೊಂಡಿರುವ ಈ 5 ಕ್ಷೇತ್ರಗಳು ಇದೀಗ ಮಗ್ಗಲ ಮುಳ್ಳಾಗಿ ಬಿಜೆಪಿಗೆ ಚುಚ್ಚುತ್ತಿವೆ
ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ 2019 ರ ಎಪ್ರಿಲ್ 18 ಮತ್ತು 23 ರಂದು ತಲಾ 14 ಕ್ಷೇತ್ರಗಳ ಮತದಾನ ನಡೆದಿದ್ದು, 25ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು, ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ 1ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸುತ್ತು. ಒಟ್ಟು 28 ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆದಿತ್ತು.