For the best experience, open
https://m.hosakannada.com
on your mobile browser.
Advertisement

Aadhaar Biometric: ನಿಮ್ಮ ಹಣ ಸೇಫ್ ಆಗಿರಲು ಬ್ಯಾಂಕ್‌ ಖಾತೆ ಸೇಫ್ ಝೋನ್ ಇರಲಿ! ಹಾಗಿದ್ರೆ ಈಗಲೇ ಈ ರೀತಿ ಆಧಾರ್ ಬಯೋಮೆಟ್ರಿಕ್ ಲಾಕ್‌ ಮಾಡಿ!

Aadhaar Biometric: ಆಧಾರ್ ಸಂಖ್ಯೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಖಾತೆ ಹಣವನ್ನು ಕ್ಷಣ ಮಾತ್ರದಲ್ಲಿ ಲೂಟಿ ಮಾಡಿ ಬಿಡುತ್ತಾರೆ. ಈ ಹಿನ್ನೆಲೆಯಲ್ಲಿ ಆಧಾರ್ ಬಯೋಮೆಟ್ರಿಕ್ ಲಾಕ್‌ ಅವಶ್ಯಕ ಎನ್ನಲಾಗುತ್ತಿದೆ. 
11:38 AM May 20, 2024 IST | ಕಾವ್ಯ ವಾಣಿ
UpdateAt: 12:00 PM May 20, 2024 IST
aadhaar biometric  ನಿಮ್ಮ ಹಣ ಸೇಫ್ ಆಗಿರಲು ಬ್ಯಾಂಕ್‌ ಖಾತೆ ಸೇಫ್ ಝೋನ್ ಇರಲಿ  ಹಾಗಿದ್ರೆ ಈಗಲೇ ಈ ರೀತಿ ಆಧಾರ್ ಬಯೋಮೆಟ್ರಿಕ್ ಲಾಕ್‌ ಮಾಡಿ

Aadhaar biometric: ತಪ್ಪದೇ ನಿಮ್ಮ ಆಧಾರ್ ನ್ನು ಬಯೋಮೆಟ್ರಿಕ್(Aadhaar biometric) ಲಾಕ್‌ ಮಾಡಿ. ಹೌದು, ಡಿಜಿಟಲ್ ಹ್ಯಾಕರ್‌ಗಳು ಕೇವಲ ನಿಮ್ಮ ಆಧಾರ್ ಸಂಖ್ಯೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಖಾತೆ ಹಣವನ್ನು ಕ್ಷಣ ಮಾತ್ರದಲ್ಲಿ ಲೂಟಿ ಮಾಡಿ ಬಿಡುತ್ತಾರೆ. ಈ ಹಿನ್ನೆಲೆಯಲ್ಲಿ ಆಧಾರ್ ಬಯೋಮೆಟ್ರಿಕ್ ಲಾಕ್‌ ಅವಶ್ಯಕ ಎನ್ನಲಾಗುತ್ತಿದೆ.

Advertisement

ಇದನ್ನೂ ಓದಿ: Number Plate : ವಾಹನಗಳಿಗೆ ವಿವಿಧ ಬಣ್ಣಗಳಲ್ಲಿ ನಂಬರ್ ಪ್ಲೇಟ್ ಗಳು ಯಾಕೆ ಕೊಡ್ತಾರೆ ಗೊತ್ತಾ? : ಯಾವ ವಾಹನಕ್ಕೆ ಯಾವ ಬಣ್ಣದ ಪ್ಲೇಟ್ ನೀಡಲಾಗಿದೆ ಗೊತ್ತಾ?

ಆಧಾರ್ ಕಾರ್ಡ್‌ ವೈಯಕ್ತಿಕ ವಿವರಗಳ ಜತೆಗೆ ಈ ಎಲ್ಲ ದೈಹಿಕ ಗುರುತುಗಳು ನಿಮ್ಮ ಆಧಾರ್‌ ನಂಬರ್‌ನಲ್ಲಿ ಶೇಖರಣೆ ಆಗಿರುವ ಮಾಹಿತಿಗಳಾಗಿವೆ. ಇನ್ನು ಬ್ಯಾಂಕ್‌ ಖಾತೆ ಹೊಂದಿರುವವರೆಲ್ಲಾ ಈ ಆಧಾರ್ ಸಂಖ್ಯೆಯೊಂದಿಗೆ ಲಿಂಕ್‌ ಸಹ ಮಾಡಿಸಿದ್ದೀರಿ. ಸದ್ಯ ಹ್ಯಾಕರ್‌ಗಳು ಆಧಾರ್ ಬಳಕೆದಾರರ ಬ್ಯಾಂಕ್‌ ಖಾತೆಗೆ ಕನ್ನ ಹಾಕಬಾರದು, ಯಾವುದೇ ಡಾಟಾ ಕದಿಯಬಾರದು ಎಂದರೆ ಇರುವ ಒಂದೇ ಆಯ್ಕೆ ಎಂದರೆ ಅದೇ ' ಬಯೋಮೆಟ್ರಿಕ್ ಲಾಕ್‌' ಮಾಡುವುದು. ಬಯೋಮೆಟ್ರಿಕ್ ಲಾಕ್‌ ಮಾಡುವುದರಿಂದ ಯಾರು ಸಹ ನಿಮ್ಮ ಆಧಾರ್ ಅನ್ನು ಅನಧಿಕೃತವಾಗಿ, ಕಾನೂನು ಬಾಹಿರವಾಗಿ ಯಾವುದಕ್ಕೇ ಬಳಕೆ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ.

Advertisement

ಇದನ್ನೂ ಓದಿ: Ghost Marriage: ಪ್ರೇತ ಮದುವೆಗೆ ಸಿಕ್ಕಿದ ವರ; ಆಟಿಯಲ್ಲಿ ಮದುವೆ

ಅದಕ್ಕಾಗಿ ನಿಮ್ಮ ಆಧಾರ್ 'ಬಯೋಮೆಟ್ರಿಕ್ ಲಾಕ್‌' ಮಾಡಬೇಕು ಎಂದರೆ ಈ ಕೆಳಗಿನ ವಿಧಾನ ಅನುಸರಿಸಬಹುದು. ಆದರೆ ನೀವು ಆಧಾರ್ ಬಯೋಮೆಟ್ರಿಕ್ ಲಾಕ್‌ ಮಾಡಿದ ನಂತರ ಮುಂದೇನು ಎನ್ನುವುದನ್ನು ಕೂಡ ಈ ಕೆಳಗೆ ತಿಳಿಸಲಾಗಿದೆ.

ನಿಮ್ಮ ಆಧಾರ್ ಬಯೋಮೆಟ್ರಿಕ್ ಲಾಕ್‌ ಮಾಡುವ ವಿಧಾನ:

- ಸ್ಮಾರ್ಟ್‌ಫೋನ್‌ ಗೂಗಲ್‌ ಅಪ್ಲಿಕೇಶನ್‌ ಓಪನ್ ಮಾಡಿ.

- ಸರ್ಚ್‌ ಬಾರ್‌ನಲ್ಲಿ 'My Aadhar' ಎಂದು ಟೈಪ್ ಮಾಡಿ ಎಂಟರ್ ಮಾಡಿ.

- ನಂತರ ವೆಬ್‌ಪೇಜ್‌ಗಳ ಪೈಕಿ ಮೊದಲ ವೆಬ್‌ ಲಿಂಕ್ 'https://myaadhaar.uidai.gov.in/login' ಕ್ಲಿಕ್ ಮಾಡಿ.

- ಈಗ ಮೈ ಆಧಾರ್ ವೆಬ್‌ಸೈಟ್‌ ಪೇಜ್ ತೆರೆಯುತ್ತದೆ. ಇಲ್ಲಿ ' Login' ಎಂದಿರುವಲ್ಲಿ ಕ್ಲಿಕ್ ಮಾಡಿ.

- ನಂತರ ಮತ್ತೊಂದು ವೆಬ್‌ಪುಟ ತೆರೆಯುತ್ತದೆ.

- ಇಲ್ಲಿ Enter Aadhaar Number ಎಂದಿರುವಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿ .

- Enter Captcha ಎಂದಿರುವಲ್ಲಿ ಪಕ್ಕದ ಬಾಕ್ಸ್‌ನಲ್ಲಿರುವ ಅಕ್ಷರಗಳನ್ನು ಟೈಪಿಸಿ.

- ನಂತರ 'Login With OTP' ಎಂದಿರುವಲ್ಲಿ ಕ್ಲಿಕ್ ಮಾಡಿ.

- ನಿಮ್ಮ ರಿಜಿಸ್ಟರ್‌ ಮೊಬೈಲ್‌ ನಂಬರ್‌ಗೆ 6 ಸಂಖ್ಯೆಯ ಒಟಿಪಿ ಬರುತ್ತದೆ ಅದನ್ನು ನೀಡಿ.

- ನಂತರ ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ. 'Update My Aadhar section' ಗೆ ಭೇಟಿ ನೀಡಿ.

- 'Lock / Unlock Biometrics ಎಂದಿರುವಲ್ಲಿ ಕ್ಲಿಕ್ ಮಾಡಿ.

- ಈ ಹಂತದಲ್ಲಿ ಮತ್ತೆ ನಿಮಗೆ ಆಧಾರ್ ನಂಬರ್ ಮತ್ತು ಓಟಿಪಿ ಕೇಳಲಾಗುತ್ತದೆ. ನೀಡಿ.

- ನಂತರ ನೀವು ಬಯಸಿದ್ದಲ್ಲಿ 'Lock Biometrics' ಎಂದಿರುವಲ್ಲಿ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಬಯೋಮೆಟ್ರಿಕ್ ಮಾಹಿತಿಗಳು ಲಾಕ್‌ ಆಗುತ್ತವೆ.

ಮತ್ತೆ ನಿಮಗೆ ಎಂದಾದರೂ ಆಧಾರ್ ಬಯೋಮೆಟ್ರಿಕ್ ಲಾಕ್‌ ಬೇಡ ಎಂದರೆ ನೀವೆ ಇದೇ ಮಾದರಿಯಲ್ಲಿ ಫಾಲೋ ಮಾಡಿ ' Unlock Biometric / Disable the Locking system' ಆಯ್ಕೆ ಮಾಡಿ, ಬಯೋಮೆಟ್ರಿಕ್ ಅನ್‌ಲಾಕ್‌ ಮಾಡಿಕೊಳ್ಳಬಹುದು.

ಬಯೋಮೆಟ್ರಿಕ್‌ ಲಾಕ್‌ ಆದರೆ ಏನೆಲ್ಲಾ ಆಗುತ್ತದೆ: 

ಆಧಾರ್ ಹೊಂದಿರುವವರು ಮುಂದೆ ಯಾವುದೇ ಬಯೋಮೆಟ್ರಿಕ್‌ ಪ್ರಮಾಣೀಕರಣ ಮಾಡಲು ಸಾಧ್ಯವಾಗುವುದಿಲ್ಲ.

ಉದಾಹರಣೆಗೆ ಒಂದು ವೇಳೆ ಬಯೋಮೆಟ್ರಿಕ್ ಲಾಕ್‌ ಆದರೆ ಈ ರೇಷನ್‌ ಪಡೆಯುವ ಸಂದರ್ಭದಲ್ಲಿ ನಿಮ್ಮ ಪ್ರಮಾಣೀಕರಣ ಆಗದೇ ಇರಬಹುದು. ಮತ್ತೆ ನೀವು ಈ ಆಧಾರ್ ಬಯೋಮೆಟ್ರಿಕ್ ಅನ್ನು 'ಅನ್‌ಲಾಕ್‌' ಮಾಡಲೇಬೇಕಾಗುತ್ತದೆ.

ನಿಮ್ಮ ಬಯೋಮೆಟ್ರಿಕ್ ಇಲ್ಲದೇ ಯಾವುದೇ ಆಧಾರ್ ದೃಢೀಕರಣ ಆಗದಿರಬಹುದು. ಬಯೋಮೆಟ್ರಿಕ್ ಲಾಕ್‌ ಆದರೆ ಹ್ಯಾಕರ್‌ಗಳು ನಿಮ್ಮ ಯಾವುದೇ ಮಾಹಿತಿಗಳು ಇದ್ದರೂ ಸಹ ಏನು ಮಾಡಲು ಸಾಧ್ಯವಾಗುವುದಿಲ್ಲ.

Advertisement
Advertisement
Advertisement