L K Advani: ಮೋದಿಯಿಂದ ರಾಮ ಮಂದಿರ ಉದ್ಘಾಟನೆ - ಎಲ್ ಕೆ ಅಡ್ವಾಣಿ ಯಿಂದ ಮಹತ್ವದ ಹೇಳಿಕೆ!!
L K Advani: ಕೋಟ್ಯಾಂತರ ಹಿಂದೂಗಳ ನೂರಾರು ವರ್ಷಗಳ ಕನಸು ನನಸಾಗುತ್ಥಿದ್ದು, ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗಿ ನಿಂತಿದೆ. ಜನವರಿ 22ರಂದು ಪ್ರಧಾನಿ ಮೋದಿಯವರಿಂದ ರಾಮ ರಾಮಲಲ್ಲಾ ಪ್ರಾಣ ಪ್ರತಿಷ್ಠೆ, ಮಂದಿರ ಉದ್ಘಾಟನೆ ನಡೆಯಲಿದ್ದು, ಪ್ರಧಾನಿ ದಿನಗಣನೆ ಶುರುವಾಗಿದ್ದು, ಅಯೋಧ್ಯೆ ಸಿಂಗಾರಗೊಳ್ಳುತ್ತಿದೆ. ಕೋಟ್ಯಾಂತರ ಹಿಂದೂಗಳ ಮನಸ್ಸು ರಾಮನ ದರ್ಶನಕ್ಕೆ ಮಿಡಿಯುತ್ತಿದೆ. ಈ ಬೆನ್ನಲ್ಲೇ ಪ್ರಧಾನಿ ಮೋದಿಯಿಂದ(PM Modi) ರಾಮ ಮಂದಿರ ಉದ್ಘಾಟನೆ ಆಗುವ ಬಗ್ಗೆ ಬಿಜೆಪಿ ಹಿರಿಯ ನಾಯಕ, ರಾಮ ಮಂದಿರ ನಿರ್ಮಾಣದ ಕನಸುಗಾರ ಎಲ್ ಕೆ ಅಡ್ವಾಣಿ(L K Advani) ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
ರಾಮ ಮಂದಿರ ಉದ್ಘಾಟನೆ ಬಗ್ಗೆ ಸಾಕಷ್ಟು ಅಪರಸ್ವರ ಎದಿದ್ದು, ಕಾಂಗ್ರೆಸ್ ಅಂತೂ ಬಿಜೆಪಿ(BJP) ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ, ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮವಾಗಿ ಮಾಡುತ್ತಿದೆ. ಮಠಗಳ ಗುರುಗಳನ್ನು ಬಿಟ್ಟು ಪ್ರಧಾನಿ ಕೈಯಿಂದ ಮಂದಿರ ಉದ್ಘಾಟನೆ ನಡೀತಿದೆ ಎಂದೆಲ್ಲಾ ಹಂಗಿಸಿತ್ತು. ಅಲ್ಲದೆ ರಾಮ ಮಂದಿರ ನಿರ್ಮಾಣಕ್ಕೆ ಪಣತೊಟ್ಟಿ, ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಡ್ವಾಣಿಯವರನ್ನು ಕಡೆಗಣಿಸಿದೆ ಎಂದೆಲ್ಲಾ ಚೇಡಿಸಿತ್ತು. ಇದೀಗ ರಾಮ ಮಂದಿರದ ಉದ್ಘಾಟನೆಯು ಮೋದಿಯವರಿಂದ ಆಗುವ ಕುರಿತು ಎಲ್ ಕೆ ಅಡ್ವಾಣಿ ಅವರು ಪ್ರತಿಕ್ರಿಯಿಸಿದ್ದು, ಮೋದಿಯೇ ರಾಮಮಂದಿರ ಉದ್ಘಾಟನೆ ಮಾಡಬೇಕೆಂದು ವಿಧಿಯೇ ನಿರ್ಧಾರ ಮಾಡಿದೆ, ರಾಮನೇ ವಿಶೇಷ ಭಕ್ತನನ್ನು ಆರಿಸಿಕೊಂಡಿದ್ದಾನಿ ಎಂದು ಹೇಳಿದ್ದಾರೆ.
ಹೌದು, ಈ ಬಗ್ಗೆ ಸಂದರ್ಶನವೊಂದರಲ್ಲಿ ಬಹಳ ಹೆಮ್ಮೆಯಿಂದ ಮಾತನಾಡಿರುವ ಅಡ್ವಾಣಿ ಅವರು 'ತಮ್ಮ ಜೀವಮಾನದ ಕನಸೊಂದು ಈಗ ಈಡೇರಿದಂತಾಗಿದೆ ಎಂದು ಹೇಳಿರುವ ಅವರು, ರಾಮಲಲ್ಲಾನ ಪ್ರಾಣ ಪ್ರತಿಷ್ಠ ಕಾರ್ಯಕ್ರಮವನ್ನು ವೀಕ್ಷಿಸಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ತಮ್ಮ ಈ ಸಂಕಲ್ಪವನ್ನು ನೆರವೇರಿಸಿ, ಈ ಅಮೂಲ್ಯ ಕ್ಷಣವನ್ನು ತಂದುಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನಸಾರೆ ಅಭಿನಂದಿಸಿದ್ದಾರೆ.
ಇದನ್ನೂ ಓದಿ: Thaina Feels: 24ನೇ ವಯಸ್ಸಿಗೆ ಸಾವಿಗೀಡಾದ ಖ್ಯಾತ ನೀಲಿಚಿತ್ರ ತಾರೆ - ಮನ ಮಿಡಿಯುತ್ತೆ ಸಾವಿನ ಹಿಂದಿನ ಕರುಣಾಜನಕ ಕಥೆ !!
ಮೋದಿಯೇ ರಾಮಮಂದಿರ ಉದ್ಘಾಟನೆ ಮಾಡಬೇಕೆಂದು ವಿಧಿಯೇ ನಿರ್ಧಾರ ಮಾಡಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇವಸ್ಥಾನವನ್ನು ಉದ್ಘಾಟನೆ ಮಾಡಿದಾಗ, ದೇಶದ ಪ್ರತಿಯೊಬ್ಬರನ್ನು ಅವರು ಪ್ರತಿನಿಧಿಸುತ್ತಾರೆ. ದೇವಾಲಯವು ಎಲ್ಲಾ ಭಾರತೀಯರಿಗೆ ಶ್ರೀರಾಮನ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಆಡ್ವಾಣಿ ಸಂದರ್ಶನದಲ್ಲಿ ಹೇಳಿದ್ದಾರೆ.
ರಥಯಾತ್ರೆ ಬಗ್ಗೆ ಮಾತನಾಡಿದ ಅವರು ರಥಯಾತ್ರೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ, ನಾನು ಕೇವಲ ಇದಕ್ಕೆ ಸಾರಥಿ ಎಂದು ಅರಿತುಕೊಂಡಿದ್ದೆ. ಆ ರಥವೇ ರಥಯಾತ್ರೆಯ ಮುಖ್ಯ ಸಂದೇಶವಾಹಕವಾಗಿತ್ತು. ಈ ಯಾತ್ರೆಯನ್ನು ಆರಂಭ ಮಾಡಿದ ದಿನ, ಭಗವಾನ್ ರಾಮನ ಮೇಲಿನ ನಂಬಿಕೆ ದೇಶದಲ್ಲಿ ಚಳವಳಿ ರೂಪವನ್ನು ತೆಗೆದುಕೊಳ್ಳುತ್ತದೆ ಎಂದು ನಮಲ್ಲಿದ್ದ ಯಾರಿಗೂ ಅನಿಸಿರಲಿಲ್ಲ. ರಥಯಾತ್ರೆಯ ವೇಳೆ ಈಗಿನ ಪ್ರಧಾನಿ ನರೇಂದ್ರ ಮೋದಿ ನನ್ನ ಸಹಾಯಕರಾಗಿದ್ದರು. ಇಡೀ ರಥಯಾತ್ರೆಯ ಪ್ರಯಾಣದಲ್ಲಿ ಅವರು ನನ್ನ ಜೊತೆಗಿದ್ದರು. ಅಂದು ಅವರು ಇಷ್ಟು ಪ್ರಸಿದ್ಧರಾಗಿರಲಿಲ್ಲ. ಆದರೆ, ಅದಾಗಲೇ ರಾಮ ಮಾತ್ರ ತನ್ನ ದೇವಸ್ಥಾನದ ಪುನರ್‌ನಿರ್ಮಾಣಕ್ಕೆ ವಿಶೇಷ ಭಕ್ತನನ್ನು ಆರಿಸಿಕೊಂಡಿದ್ದ ಎಂದು ತಿಳಿಸಿದ್ದಾರೆ.
ಅಂದಹಾಗೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹಿಂದಿ ಸಾಹಿತ್ಯ ಮಾಸ ಪತ್ರಿಕೆ ರಾಷ್ಟ್ರಧರ್ಮ ಲಾಲ್ ಕೃಷ್ಣ ಆಡ್ವಾಣಿ ಅವರನ್ನು ಸಂದರ್ಶನ ಮಾಡಿದ್ದು ತನ್ನ ಜನವರಿ 15 ರಂದು ಬರಲಿರುವ ಸಂಚಿಕೆಯಲ್ಲಿ ಇದನ್ನು ಪ್ರಕಟಿಸಲಿದೆ. 'ಶ್ರೀ ರಾಮ ಮಂದಿರ: ಫುಲ್‌ಫಿಲ್‌ಮೆಂಟ್ ಆಫ್ ಡಿವೈನ್ ಡ್ರೀಮ್' ಎನ್ನುವ ಶೀರ್ಷಿಕೆಯಲ್ಲಿ ಸಂದರ್ಶನ ಪ್ರಕಟವಾಗಿದೆ. ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಈ ಮ್ಯಾಗಝೀನ್‌ಅನ್ನು ನೀಡಲಾಗುತ್ತಿದೆ.