ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Liquid Nitrogen Paan: ಮದುವೆ ಸಮಾರಂಭದಲ್ಲಿ ಲಿಕ್ವಿಡ್‌ ನೈಟ್ರೋಜನ್‌ ಪಾನ್‌ ತಿಂದು 12 ವರ್ಷದ ಹುಡುಗಿಯ ಹೊಟ್ಟೆಯಲ್ಲಿ ರಂಧ್ರ

Liquid Nitrogen Paan: 12 ವರ್ಷದ ಬಾಲಕಿಯೊಬ್ಬಳು ಬೆಂಗಳೂರಿನಲ್ಲಿ ನಡೆದ ಆರತಕ್ಷತೆ ಮದುವೆಯಲ್ಲಿ ಲಿಕ್ವಿಡ್‌ ನೈಟ್ರೋಜನ್‌ ತುಂಬಿದ ಪಾನ್‌ ಸೇವಿಸಿದ್ದು ನಂತರ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ
12:12 PM May 20, 2024 IST | ಸುದರ್ಶನ್
UpdateAt: 12:16 PM May 20, 2024 IST
Advertisement

Liquid Nitrogen Paan: 12 ವರ್ಷದ ಬಾಲಕಿಯೊಬ್ಬಳು ಬೆಂಗಳೂರಿನಲ್ಲಿ ನಡೆದ ಆರತಕ್ಷತೆ ಮದುವೆಯಲ್ಲಿ ಲಿಕ್ವಿಡ್‌ ನೈಟ್ರೋಜನ್‌ ತುಂಬಿದ ಪಾನ್‌ ಸೇವಿಸಿದ್ದು ನಂತರ ಆಸ್ಪತ್ರೆಗೆ ದಾಖಲಾಗಿರುವ ಘಟನೆಯೊಂದು ನಡೆದಿತ್ತು. ಈ ಘಟನೆ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ನಡೆದಿದೆ. ಇದೀಗ ಬಾಲಕಿಯ ಹೊಟ್ಟೆಯಲ್ಲಿ ರಂಧ್ರವಾಗಿರುವುದು ಗಮನಕ್ಕೆ ಬಂದಿರುವುದಾಗಿ ವರದಿಯಾಗಿದೆ.

Advertisement

ಇದನ್ನೂ ಓದಿ: Viral News: ಮೇಲಿಂದ ಬಿದ್ದ ಮಗುವನ್ನು ರಕ್ಷಣೆ ಮಾಡಿದ ವಾರಗಳ ನಂತರ ಇದೀಗ ತಾಯಿ ಸುಸೈಡ್‌; ಕಾರಣವೇನು?

ಬಾಯಲ್ಲಿ ಪಾನ್‌ ಹಾಕಿದ ಕೂಡಲೇ ಹೊಗೆ ಬರುವ ಈ ಟ್ರೆಂಡ್‌ ಇತ್ತೀಚೆಗೆ ಎಲ್ಲಾ ಕಡೆ ವೈರಲ್‌ ಆಗಿದೆ. ಆದರೆ ಈ ಟ್ರೆಂಡಿ ಫುಡ್‌ಗಳ ಹಿಂದೆ ಅಡಗಿರುವ ಅಪಾಯದ ಕುರಿತು ಯಾರಿಗೂ ಅರಿವಿಲ್ಲ.

Advertisement

ಇದನ್ನೂ ಓದಿ: Actor Chetan Kumar Ahimsa: ಸಿಎಂ ಸಿದ್ದರಾಮಯ್ಯ “ಸೋಮಾರಿ” ಎಂದ ಕನ್ನಡ ನಟ!‌

ಬಾಲಕಿಯನ್ನು ಇಂಟ್ರಾಆಪರೇಟಿವ್‌ OGD ಸ್ಕೋಪಿಯೊಂದಿಗೆ ಪರಿಶೋಧನಾತ್ಮಕ ಲ್ಯಾಪರೊಟಮಿಗೆ ಒಳಪಡಿಸಲಾಯಿತು. ಅಲ್ಲಿ ಬಾಲಕಿಗೆ ಅನ್ನನಾಳ, ಹೊಟ್ಟೆ ಮತ್ತು ಡ್ಯುವೋಡೆನಮ್‌ ಅನ್ನು ಪರೀಕ್ಷೆಗೆಂದು ಎಂಡೋಸ್ಕೋಪ್‌ ಮಾಡಲಾಯಿತು. ಅಲ್ಲಿ 4x5 ಸೆಂ.ಮೀ ಅಳತೆಯ ಅನಾರೋಗ್ಯಕರ ಪ್ಯಾಚ್‌ ಕಂಡು ಬಂದಿದೆ.

ಅನಂತರ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಹೊಟ್ಟೆಯ ಒಂದು ಭಾಗವನ್ನು ತೆಗೆದು ಹಾಕಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರು ದಿನಗಳ ಬಳಿಕ ಬಾಲಕಿ ಮನೆಗೆ ಮರಳಿದ್ದಾಳೆ.

Advertisement
Advertisement