ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Relationship Tips: ಗಂಡ-ಹೆಂಡ್ತಿ ರಿಲೇಶನ್​ ಶಿಪ್​ ಬೋರ್ ಅನ್ಸತ್ತಾ? ಹಾಗಿದ್ರೆ ರಾತ್ರಿ ಹೊತ್ತು 'ಹೀಗೆ' ಮಾಡಿ ಸಾಕು

04:06 PM Sep 24, 2023 IST | ಕಾವ್ಯ ವಾಣಿ
UpdateAt: 12:07 PM Mar 26, 2024 IST
Advertisement

Husband And Wife: ಗಂಡ ಹೆಂಡತಿಯ ನಡುವೆ ಇರುವ ನಂಟು ಬಹಳ ಪವಿತ್ರವಾದುದು. ಅಲ್ಲದೇ ನಂಬಿಕೆಯ ಪ್ರತಿಬಿಂಬದ ಸಂಬಂಧ ಎಂದರೆ ತಪ್ಪಾಗಲಾರದು. ಆದರೆ ಇತ್ತೀಚೆಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುವ ಗಂಡ ಹೆಂಡತಿಯ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದು ಲವ್ ಮ್ಯಾರೇಜ್ ಆಗಿರಲಿ ಅಥವಾ ಆರೆಂಜ್ಡ್ ಮ್ಯಾರೇಜ್ ಆಗಿರಲಿ ಗಂಡ ಹೆಂಡತಿ (Husband And Wife) ಜಗಳ ಆಡುವುದು ಸಾಮಾನ್ಯ. ಅದೇನೇ ಇರಲಿ ಎಷ್ಟೋ ಮಂದಿ ಹಲವಾರು ವರ್ಷಗಳ ಕಾಲ ಸಂಸಾರ ನಡೆಸಿದರೂ ಕೊನೆಗೆ ವೈಮನಸ್ಸು ಉಂಟಾಗುತ್ತದೆ.

Advertisement

ಮುಖ್ಯವಾಗಿ ಡಿವೋರ್ಸ್ಗೆ ಮೊದಲ ಕಾರಣವೆಂದರೆ ಜೊತೆಗೆ ಸಮಯ ಕಳೆಯದೇ ಇರುವುದು. ಗಂಡ ಆಗಿರಲಿ ಅಥವಾ ಹೆಂಡತಿ ಆಗಿರಲಿ ಇಬ್ಬರೂ ಒಟ್ಟಿಗೆ ಸಮಯ ಕಳೆಯುವುದು ಬಹಳ ಮುಖ್ಯ. ನಿಮ್ಮ ದಾಂಪತ್ಯ ಸುಖಕರವಾಗಿರಬೇಕೆಂದರೆ, ನಿಮ್ಮ ಜೀವನದುದ್ದಕ್ಕೂ ಒಬ್ಬರಿಗೊಬ್ಬರು ಬಿಟ್ಟಿರಬಾರದು ಅಂದರೆ, ನಿಮ್ಮ ಬ್ಯುಸಿ ಶೆಡ್ಯೂಲ್, ಕೆಲಸದ ನಡುವೆಯೂ ನಿಮ್ಮ ಸಂಗಾತಿಗೆಂದು ಸಮಯ ಮೀಸಲಿಡಿ. ಇಲ್ಲದಿದ್ದರೆ ಸಂಬಂಧದಲ್ಲಿ ಬಿರುಕು ಮೂಡಬಹುದು.

Actress Kiara Advani: ಟಾಕ್ಸಿಕ್’ನಲ್ಲಿ ಯಶ್ ಜೋಡಿಯಾಗಿ ನಟಿ ಕಿಯಾರಾ ಅಡ್ವಾನಿ ಆಯ್ಕೆಯಾಗುವ ಸಾಧ್ಯತೆ

ಗಂಡ ಹೆಂಡತಿಯ ಈ ಬ್ಯುಸಿ ಲೈಫ್ ನಲ್ಲಿ ಒಬ್ಬರನ್ನೊಬ್ಬರು ಖುಷಿಯಾಗಿಡಬೇಕೆಂದರೆ ರಾತ್ರಿ ಹೊತ್ತು ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಸರಳವಾಗಿ ಹೇಳಬೇಕೆಂದರೆ, ದಂಪತಿ ರಾತ್ರಿ ಹೊತ್ತು ಕೆಲವು ಕೆಲಸಗಳನ್ನು ಮಾಡಿದರೆ, ದಾಂಪತ್ಯದಲ್ಲಿ ಪ್ರೀತಿ ಶಾಶ್ವತವಾಗಿ ಉಳಿಯುತ್ತದೆ.

Advertisement

ರಾತ್ರಿ ಮಲಗುವಾಗ ಇನ್ಮುಂದೆ ಮೊಬೈಲ್ ಅಥವಾ ಟಿವಿ ನೋಡುವುದು ಕಡಿಮೆ ಮಾಡಿ. ಪರಸ್ಪರ ಮಾತನಾಡಲು ಪ್ರಯತ್ನಿಸಿ. ಇದರಿಂದ ಇಬ್ಬರ ನಡುವೆ ಪರಸ್ಪರರ ಪ್ರೀತಿ ಮತ್ತು ವಿಶ್ವಾಸ ಬೆಳೆಯುತ್ತದೆ. ಇನ್ನು ಪ್ರತೀ ದಿನ ದಿನದ ಕೊನೆಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಮನಸ್ಸಿನಲ್ಲಿರುವುದನ್ನು ಹಂಚಿಕೊಳ್ಳಿ. ಈ ಟ್ರಿಕ್ಸ್ ಒತ್ತಡವನ್ನು ಕಡಿಮೆ ಮಾಡುತ್ತದೆ.

ಇನ್ನು ಮಲಗುವ ಮುನ್ನ ಇಬ್ಬರ ನಡುವಿನ ಪ್ರೀತಿಯನ್ನು ಸ್ವಲ್ಪ ವಿನಿಮಯ ಮಾಡಿಕೊಂಡರೆ ಸಮಸ್ಯೆಗಳಾಗುವುದಿಲ್ಲ, ಹಾಗಾಗಿ ಪ್ರತಿ ರಾತ್ರಿ ಮಲಗುವಾಗ ಪತಿ-ಪತ್ನಿ ಪ್ರೀತಿ ಮತ್ತು ಖುಷಿಯ ನೆನಪುಗಳು, ಸುಂದರ ಕ್ಷಣಗಳ ಬಗ್ಗೆ ಮಾತನಾಡುತ್ತಾ ಒಬ್ಬರನ್ನೊಬ್ಬರು ಸಂತೋಷಪಡಿಸಬಹುದು. ಬೇಕಿದ್ದರೆ ನೀವು 'ಐ ಲವ್ ಯೂ' ಎಂದೂ ಕೂಡ ಹೇಳಬಹುದು.

Actress Priyanka Chopra: ಅಯೋಧ್ಯೆಯ ರಾಮಮಂದಿರದಲ್ಲಿ ಕುಟುಂಬ ಸಮೇತ ಕಾಣಿಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ

ಅದಲ್ಲದೆ ನೀವು ದಾಂಪತ್ಯವನ್ನು ಶಾಶ್ವತವಾಗಿ ಹೊಸದರಂತೆ ಇರಿಸಿಕೊಳ್ಳಲು ಇಬ್ಬರ ನಡುವೆ ದೈಹಿಕ ಅನ್ಯೋನ್ಯತೆ ತುಂಬಾ ಮುಖ್ಯ. ಇಲ್ಲದಿದ್ದರೆ ಸಂಬಂಧ ಮುರಿದು ಬೀಳುವ ಸಾಧ್ಯತೆ ಹೆಚ್ಚು. ಹಾಗಾಗಿ ರಾತ್ರಿ ಹೊತ್ತು ಪ್ರೀತಿಯಿಂದ ಒಂದೇ ಕಂಬಳಿಯನ್ನು ಹೊದ್ದಿಕೊಳ್ಳಿ. ಈ ಟ್ರಿಕ್ ಮೂಲಕ ನಿಮ್ಮ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಮತ್ತು ಇಡೀ ಜೀವನವನ್ನು ನೀವು ಒಟ್ಟಿಗೆ ಕಳೆಯಬಹುದು.

ಸರಾಸರಿ ವಾರದಲ್ಲಿ ಏಳು ದಿನ ಒಬ್ಬರಿಗೊಬ್ಬರು ಹತ್ತಿರ ಇರಲು ಸಾಧ್ಯವಾಗದಿದ್ದರೂ, ಮಲಗುವ ಮುನ್ನ ಕನಿಷ್ಠ ಒಂದು 'ಗುಡ್ ನೈಟ್ ಕಿಸ್' ಸಮಸ್ಯೆಗಳನ್ನು ದೂರ ಮಾಡುತ್ತದೆ. ಇನ್ನು ರಜಾದಿನಗಳಲ್ಲಿ ಹೆಚ್ಚು ಕಾಲ ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯಿರಿ. ವಾಕಿಂಗ್ ಕೂಡ ಹೋಗಬಹುದು, ನೀವು ಒಟ್ಟಿಗೆ ಊಟ ಮಾಡುವುದು ಕೂಡ ಪ್ರೀತಿಯ ಇನ್ನೊಂದು ಭಾಗವಾಗಿದೆ. ಹೀಗೆಲ್ಲ ಮಾಡುವುದರಿಂದ ಇಬ್ಬರೂ ಖುಷಿಯಾಗಿ ಇರಬಹುದು. ಜೊತೆಗೆ ಪ್ರೀತಿ ಹೆಚ್ಚಾಗುತ್ತದೆ.

Advertisement
Advertisement