For the best experience, open
https://m.hosakannada.com
on your mobile browser.
Advertisement

Blood Pressure range: ಈ ವಯಸ್ಸಿನಲ್ಲಿ ಇಷ್ಟಿಷ್ಟು BP ಇದ್ರೆ ಒಳಿತು ಗೊತ್ತಾ ?! ನಿಮಗೆಲ್ಲಾ ಎಷ್ಟಿರಬೇಕು ?

11:35 AM Nov 18, 2023 IST | ಅಶ್ವಿನಿ ಹೆಬ್ಬಾರ್
UpdateAt: 11:35 AM Nov 18, 2023 IST
blood pressure range  ಈ ವಯಸ್ಸಿನಲ್ಲಿ ಇಷ್ಟಿಷ್ಟು bp ಇದ್ರೆ ಒಳಿತು ಗೊತ್ತಾ    ನಿಮಗೆಲ್ಲಾ ಎಷ್ಟಿರಬೇಕು
Advertisement

Blood Pressure range: ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ಅಧಿಕ ರಕ್ತದೊತ್ತಡ (Blood Pressure range)ಇದ್ದರೆ, ಮತ್ತೆ ಕೆಲವರಿಗೆ ಕಡಿಮೆ ರಕ್ತದೊತ್ತಡ ಇರುತ್ತದೆ. ಇದನ್ನು ಇಂಗ್ಲಿಷಿನಲ್ಲಿ ಲೋ ಬಿಪಿ( Low BP)ಎಂದು ಕರೆಯಲಾಗುತ್ತದೆ.

Advertisement

ಸಾಮಾನ್ಯ ರಕ್ತದೊತ್ತಡ 120/80 ಆಗಿದ್ದು, ಆರೋಗ್ಯ ತಜ್ಞರ ಪ್ರಕಾರ ವಯಸ್ಕರಲ್ಲಿ 95-145/60-90 ರ ನಡುವಿನ ರಕ್ತದೊತ್ತಡವನ್ನು ಸಹ ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ ಇದು ವ್ಯಕ್ತಿಯ ದೈಹಿಕ ಸ್ಥಿತಿಯನ್ನು (Physical Health)ಅವಲಂಬಿತವಾಗಿರುತ್ತದೆ. ರೋಗಿಯ ಇತರ ಪರಿಸ್ಥಿತಿಗಳನ್ನು ಅವಲಂಬಿಸಿ ಕೆಲವು ಸಂದರ್ಭಗಳಲ್ಲಿ 145/90 ರಕ್ತದೊತ್ತಡವನ್ನು (Blood Pressure Rate)ಸಾಮಾನ್ಯವೆಂದು ವೈದ್ಯರು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಅಂದರೆ, ಉದಾ:20 ವರ್ಷದ ವಯಸ್ಕ ವ್ಯಕ್ತಿಯಲ್ಲಿ ರೋಗದ ಯಾವುದೇ ಚಿಹ್ನೆಗಳಿಲ್ಲದಿದ್ದರೆ 90/50 ರಕ್ತದೊತ್ತಡವನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ.

ಯಾವ ವಯಸ್ಸಿನಲ್ಲಿ ರಕ್ತದೊತ್ತಡ ಎಷ್ಟು ಇರಬೇಕು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಪ್ರತಿಯೊಬ್ಬರ ರಕ್ತದೊತ್ತಡವನ್ನು ಸಾಮಾನ್ಯವಾಗಿ 120/80 ಎಂದು ಪರಿಗಣಿಸಲಾಗುತ್ತದೆ. ಇದು ರಕ್ತದೊತ್ತಡದ ಸಾಮಾನ್ಯ ಅಳತೆಯಾಗಿದ್ದು, ರಕ್ತದೊತ್ತಡದ ಶ್ರೇಣಿಗಳು ವಯಸ್ಸಿಗೆ ಅನುಗುಣವಾಗಿ ಬದಲಾವಣೆಯಾಗುತ್ತದೆ. ಹೀಗಾಗಿ, ನಿಖರವಾದ ರಕ್ತದೊತ್ತಡದ ಮಾಹಿತಿಯನ್ನು ಅರಿತಿರಬೇಕು.

Advertisement

* ಸಿಸ್ಟೋಲಿಕ್ ಶ್ರೇಣಿಯು 45-90, ಮತ್ತು ಡಯಾಸ್ಟೊಲಿಕ್ ವ್ಯಾಪ್ತಿಯು ನವಜಾತ ಶಿಶುವಿನಿಂದ 6 ತಿಂಗಳವರೆಗೆ 30-65 ಆಗಿದೆ.
* ಸಿಸ್ಟೋಲಿಕ್ ಶ್ರೇಣಿಯು 80-100 ಮತ್ತು ಡಯಾಸ್ಟೊಲಿಕ್ ಶ್ರೇಣಿಯು 6 ತಿಂಗಳಿನಿಂದ 2 ವರ್ಷಗಳವರೆಗೆ 40-70 ಆಗಿದೆ.
* ಮಕ್ಕಳು (2-13 ವರ್ಷಗಳು) 80-120 ಸಿಸ್ಟೋಲಿಕ್ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ಡಯಾಸ್ಟೊಲಿಕ್ ಶ್ರೇಣಿ 40-80 ಆಗಿದೆ.
* ಹದಿಹರೆಯದ (14-18 ವರ್ಷಗಳು) ಸಿಸ್ಟೋಲಿಕ್ ಶ್ರೇಣಿ 90-120, ಡಯಾಸ್ಟೊಲಿಕ್ ಶ್ರೇಣಿ 50-80ಆಗಿದೆ.

*ವಯಸ್ಕ (19-40 ವರ್ಷಗಳು) ಸಿಸ್ಟೋಲಿಕ್ ಶ್ರೇಣಿ 95-135, ಡಯಾಸ್ಟೊಲಿಕ್ ಶ್ರೇಣಿ 60-80ಆಗಿದೆ.
* ವಯಸ್ಕ (41-60 ವರ್ಷಗಳು) ಸಿಸ್ಟೋಲಿಕ್ ಶ್ರೇಣಿ 110-145, ಡಯಾಸ್ಟೊಲಿಕ್ ಶ್ರೇಣಿ 70-90ಆಗಿದೆ.
* ವಯಸ್ಕರಿಗೆ (61 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಸಿಸ್ಟೋಲಿಕ್ ಶ್ರೇಣಿಯು 95-145, 70-90 ಆಗಿದೆ.

ಸಾಮಾನ್ಯವಾಗಿ, ರಕ್ತದೊತ್ತಡದ ವ್ಯಾಪ್ತಿ ವಯಸ್ಸಾಗುತ್ತ ಹೋದಂತೆ ಹೆಚ್ಚಾಗುತ್ತದೆ.ರಕ್ತದೊತ್ತಡದ ಮೇಲೆ ವಯಸ್ಸು, ಲಿಂಗ, ಜನಾಂಗ, ತೂಕ, ವ್ಯಾಯಾಮ, ಭಾವನೆಗಳು, ಒತ್ತಡ, ಗರ್ಭಧಾರಣೆ, ದಿನಚರಿ ಈ ಅಂಶಗಳು ಪರಿಣಾಮ ಬೀರುತ್ತದೆ. ಬಾಲ್ಯದಲ್ಲಿ, ಹುಡುಗರು ಮತ್ತು ಹುಡುಗಿಯರ ರಕ್ತದೊತ್ತಡ ಒಂದೇ ಇರಲಿದ್ದು, ಆದರೆ ಪ್ರೌಢಾವಸ್ಥೆಯಲ್ಲಿ ಹುಡುಗರು ಮತ್ತು ಹುಡುಗಿಯರ ರಕ್ತದೊತ್ತಡ ಹೆಚ್ಚಾಗಿರುತ್ತದೆ. ಮಹಿಳೆಯರು ಸಾಮಾನ್ಯವಾಗಿ ಪುರುಷರಿಗಿಂತ ಕಡಿಮೆ ರಕ್ತದೊತ್ತಡವನ್ನು ಹೊಂದಿದ್ದು, ಆದರೆ ಋತುಚಕ್ರದ ನಂತರ ಪುರುಷರಿಗಿಂತ ಮಹಿಳೆಯರ ರಕ್ತದೊತ್ತಡ ಹೆಚ್ಚಾಗಲಿದೆ

ಇದನ್ನೂ ಓದಿ: ನನ್ನನ್ನು ರಾಜ್ಯಾಧ್ಯಕ್ಷ ಮಾಡಿದ್ಯಾರು ಗೊತ್ತಾ ?! ಸತ್ಯಬಿಚ್ಚಿಟ್ಟ ವಿಜಯೇಂದ್ರ!!

Advertisement
Advertisement
Advertisement