For the best experience, open
https://m.hosakannada.com
on your mobile browser.
Advertisement

Periods Relief Tips: ಮುಟ್ಟಾದಾಗ ಸಂಗಾತಿಗೆ 'ಲಿಪ್ ಕಿಸ್' ಕೊಡ್ಬೋದಾ ?! ಕೊಟ್ರೆ ಏನೇನಾಗುತ್ತೆ ಗೊತ್ತಾ?

10:09 AM Nov 18, 2023 IST | ಕಾವ್ಯ ವಾಣಿ
UpdateAt: 10:09 AM Nov 18, 2023 IST
periods relief tips  ಮುಟ್ಟಾದಾಗ ಸಂಗಾತಿಗೆ  ಲಿಪ್ ಕಿಸ್  ಕೊಡ್ಬೋದಾ    ಕೊಟ್ರೆ ಏನೇನಾಗುತ್ತೆ ಗೊತ್ತಾ
Advertisement

Periods Relief Tips: ಭಾರತೀಯ ಸಂಪ್ರದಾಯದಲ್ಲಿ ಪಿರಿಯಡ್ಸ್‌ ವೇಳೆ, ಈಗಲೂ ಕೆಲವು ಕಟ್ಟುಪಾಡುಗಳನ್ನು ಆಚರಿಸಲಾಗುತ್ತದೆ. ಆದ್ರೆ ಇದೆಲ್ಲದರ ಹೊರತು, ಮುಟ್ಟಿನ ಸಮಯದಲ್ಲಿ ಚುಂಬನ ಮಾಡುವುದು ಒಳ್ಳೆಯದು (Periods Relief Tips) ಅಂತ ಹೇಳಲಾಗುತ್ತದೆ. ಯಾಕೆ? ಹೇಗೆ?ಅನ್ನೋ ಪ್ರಶ್ನೆ ನಿಮ್ಮನ್ನು ಕಾಡದೆ ಇರಲು ಸಾಧವಿಲ್ಲ.

Advertisement

ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ ಮಟ್ಟವು ಏರಿಳಿತಗೊಳ್ಳುತ್ತದೆ, ಇದು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇದರಿಂದ ಮುಟ್ಟಿನ ಭಾವನಾತ್ಮಕ ಏರಿಳಿತಗಳನ್ನು ಸರಾಗಗೊಳಿಸುವಲ್ಲಿ ಸಹಾಯ ಮಾಡುತ್ತದೆ.

ಬಹುತೇಕರಿಗೆ ಮುಟ್ಟಿನ ಸಮಯದಲ್ಲಿ, ಅವರ ಮೂಡ್ ಸ್ವಿಂಗ್ ಆಗುತ್ತಿರುತ್ತದೆ. ಅಲ್ಲದೆ, ಸೆಳೆತ ಮತ್ತು ಆಯಾಸವನ್ನು ಅನುಭವಿಸುತ್ತಾರೆ. ಈ ವೇಳೆ ಒಂದು ಚುಂಬನ ಅವರ ಸಂತೋಷಕ್ಕೆ ಕಾರಣವಾಗುತ್ತದೆಯಂತೆ. ಹೌದು, ಅಧ್ಯಯನಗಳ ಪ್ರಕಾರ ಮುಟ್ಟಿನ ಸಮಯದಲ್ಲಿ ಕಿಸ್‌ ಮಾಡುವುದರಿಂದ ಮಹಿಳೆಯರಲ್ಲಿ ನೋವು ನಿವಾರಕಗಳಾದ ಎಂಡಾರ್ಫಿನ್‌ಗಳನ್ನು ಬಿಡುಗಡೆಯಾಗುತ್ತವೆ, ಇದು ಮೂಡ್‌ ಸ್ವಿಂಗ್‌ ಮತ್ತು ಅವರ ಇತರೆ ಅಸ್ವಸ್ಥತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಹೆಚ್ಚುವರಿಯಾಗಿ, ಚುಂಬನವು ಜೋಡಿಗಳ ನಡುವೆ ಭಾವನಾತ್ಮಕ ಸಂಪರ್ಕವನ್ನು ಹೆಚ್ಚಿಸುತ್ತದೆ.

Advertisement

ಅದಲ್ಲದೆ ಮುಟ್ಟಿನ ಸಮಯದಲ್ಲಿ ಕಿಸ್‌ ಮಾಡುವುದರಿಂದ ಅವರ ಹಾರ್ಮೋನ್‌ಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದರಿಂದಾಗಿ "ಲವ್‌ ಹಾರ್ಮೋನ್" ಎಂದು ಕರೆಯಲ್ಪಡುವ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಇದು ಅವರಿಗೆ ನೆಮ್ಮದಿ, ಸಂತೋಷ ನೀಡುತ್ತದೆ. ಇವೆಲ್ಲವೂ ಮಹಿಳೆಯರಿಗೆ ಹೆಚ್ಚು ಆರಾಮದಾಯಕವಾದ ಮುಟ್ಟಿನ ಅನುಭವ ನೀಡುತ್ತದೆಯಂತೆ.

ಇದನ್ನೂ ಓದಿ: Lucky Draw: ದುಡಿಯಲು ದುಬೈಗೆ ಹಾರಿದ ವ್ಯಕ್ತಿ- ಹೋದ ದಿನವೇ 45 ಕೋಟಿ ಸಂಪಾದಿಸಿ ಬಿಟ್ಟ !! ಅರೆ ಇದ್ಯಾವ ಕೆಲಸ ಮರ್ರೆ ?!

Advertisement
Advertisement
Advertisement