ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Live In Relationship: ಮದುವೆಗೂ ಮುನ್ನವೇ ಸಂಗಾತಿಗಳು ಜೊತೆಯಾಗಿ ಜೀವಿಸೋದು ಸರಿಯೇ?? ಅಧ್ಯಯನ ಬಿಚ್ಚಿಟ್ಟಿದೆ ಶಾಕಿಂಗ್ ನ್ಯೂಸ್!!

10:50 AM Jan 19, 2024 IST | ಅಶ್ವಿನಿ ಹೆಬ್ಬಾರ್
UpdateAt: 11:49 AM Jan 19, 2024 IST
Image source: ವಿಜಯವಾಣಿ
Advertisement

Live In Relationship: ಕಾಲ ಬದಲಾದಂತೆ ಜನರ ಯೋಚನಾ ಶೈಲಿ ಬದಲಾಗುತ್ತಿದೆ. ಮೊದಲೆಲ್ಲ ಪ್ರೇಮ ವಿವಾಹ ಎಂದರೆ ಅಪರಾಧ ಎಂಬಂತೆ ನೋಡಲಾಗುತ್ತಿತ್ತು. ಆದರೆ, ಈಗ ಆಧುನಿಕತೆ ಬೆಳೆದಂತೆ ನಮ್ಮ ಜೀವನಶೈಲಿ, ಆಲೋಚನೆಗಳು ಬದಲಾಗುತ್ತಿದ್ದು, ಲವ್ ಮ್ಯಾರೇಜ್(Love Marriage), ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ಗಳು(Live In Relationship) ಈಗ ಸರ್ವೇ ಸಾಮಾನ್ಯ ಎಂಬಂತಾಗಿದೆ.

Advertisement

ನಗರಗಳಲ್ಲಿ ಲಿವ್‌ ಇನ್‌ ರಿಲೇಶನ್‌ಶಿಪ್‌ (Live In Relationship)ಸಾಮಾನ್ಯವಾಗಿದ್ದು, ಮದುವೆಗೆ ಮೊದಲೇ(Before Marraige) ತಾವು ಇಷ್ಟಪಟ್ಟ ಸಂಗಾತಿಗಳ ಜೊತೆಗೆ ಜೀವಿಸುವುದು ಸಾಮಾನ್ಯವಾಗಿದೆ. ಆದರೆ ಈ ಬದಲಾವಣೆಗಳು ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ತಜ್ಞರು ಅಧ್ಯಯನ ನಡೆಸಿದ್ದು, ಈ ಸಂದರ್ಭ ಅನೇಕ ರೋಚಕ ವಿಚಾರಗಳನ್ನು ಅವರು ಕಂಡುಕೊಂಡಿದ್ದಾರೆ.

ಇದನ್ನೂ ಓದಿ: Prabhakar Bhat: ಪ್ರಭಾಕರ್‌ ಭಟ್‌ಗೆ ಜಾಮೀನು ನೀಡಿದ ವಕೀಲನ ಉಚ್ಛಾಟನೆ ಮಾಡಿದ ಕಾಂಗ್ರೆಸ್‌!!

Advertisement

ಸಾಮಾನ್ಯವಾಗಿ ಸಂಗಾತಿಗಳು ಮದುವೆಗೂ ಮೊದಲೇ ಒಂದೇ ಸ್ಥಳದಲ್ಲಿ ವಾಸಿಸುವುದರಿಂದ ಪರಸ್ಪರರ ಅಭ್ಯಾಸಗಳು, ಮೌಲ್ಯಗಳು ಮತ್ತು ಹೊಂದಾಣಿಕೆಯ (Mutual Understanding)ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಮದುವೆಗೂ ಮೊದಲು ಒಟ್ಟಿಗೆ ಇರುವುದರಿಂದ ಅವರಿಗೆ ಸವಾಲುಗಳನ್ನು ಎದುರಿಸಲು, ಜಂಟಿ ನಿರ್ಧಾರಗಳನ್ನು ಕೈಗೊಳ್ಳಲು ಯಶಸ್ವಿ ದಾಂಪತ್ಯಕ್ಕೆ ದೃಢವಾದ ಅಡಿಪಾಯವನ್ನು ಸ್ಥಾಪಿಸಲು ನೆರವಾಗುತ್ತದೆ.

ಕೆಲವು ಸಂಶೋಧನೆಗಳು ವಿವಾಹ ಪೂರ್ವ ಸಂಬಂಧಗಳು ಸಕಾರಾತ್ಮಕ ಬೆಳವಣಿಗೆಯನ್ನು ಸೂಚಿಸುತ್ತದೆ. ಅದೇ ರೀತಿ, ಮದುವೆಗೆ ಮೊದಲು ಒಟ್ಟಿಗೆ ವಾಸಿಸುವ ಸಂಗಾತಿಗಳು ಹೆಚ್ಚಿನ ತೃಪ್ತಿ ಮಟ್ಟವನ್ನು ಹೊಂದುತ್ತಾರೆ ಎನ್ನಲಾಗಿದೆ. ವಿವಾಹಪೂರ್ವ ಸಹಬಾಳ್ವೆಯಿಂದ ಉಂಟಾಗಬಹುದಾದ ಸಂಭಾವ್ಯ ಸವಾಲುಗಳನ್ನು ಗಮನಿಸಿದರೆ, ಕೆಲವು ದಂಪತಿಗಳು ಘರ್ಷಣೆಗಳನ್ನು ಪರಿಹರಿಸಲು ತೊಡಕಾಗಬಹುದು. ಅದರಲ್ಲೂ ಕಾನೂನು ಪರಿಣಾಮಗಳಿಲ್ಲದೆ ಸಹಬಾಳ್ವೆಯನ್ನು ಕೊನೆಗೊಳಿಸುವ ಆಯ್ಕೆಯನ್ನು ಎದುರಿಸಿದಾಗ ಇದು ಹೆಚ್ಚು ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬುದಾಗಿ ತಜ್ಞರು ಹೇಳುತ್ತಾರೆ.

Related News

Advertisement
Advertisement