LIC Employees: ಎಲ್ಐಸಿ ನೌಕರರಿಗೆ ಕೇಂದ್ರ ಸರಕಾರದಿಂದ ಸಿಹಿ ಸುದ್ದಿ; ಸಂಬಳ ಹೆಚ್ಚಳ ಮಾಡಿ ಆದೇಶ
LIC Employees Salary Hike: ಸಾರ್ವಜನಿಕ ವಲಯದ ಅತಿದೊಡ್ಡ ಜೀವ ವಿಮಾ ಕಂಪನಿಯಾದ ಜೀವ ವಿಮಾ ನಿಗಮದ ನೌಕರರ ವೇತನದಲ್ಲಿ ಶೇಕಡಾ 17 ರಷ್ಟು ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿದೆ. LIC ಉದ್ಯೋಗಿಗಳ ವೇತನವನ್ನು ಹೆಚ್ಚಿಸುವ ನಿರ್ಧಾರವನ್ನು ಆಗಸ್ಟ್ 1, 2022 ರಿಂದ ಜಾರಿಗೆ ತರಲಾಗುವುದು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಎಲ್‌ಐಸಿಯ ಸುಮಾರು 1 ಲಕ್ಷ ಉದ್ಯೋಗಿಗಳು ಮತ್ತು ಸುಮಾರು 30,000 ಪಿಂಚಣಿದಾರರಿಗೆ ಪರಿಹಾರ ದೊರೆಯಲಿದೆ.
ಇದನ್ನೂ ಓದಿ: Dress Code: ಈ ರಾಜ್ಯದ ಶಿಕ್ಷಕರಿಗೆ ಇನ್ನು ಮುಂದೆ ಡ್ರೆಸ್‌ಕೋಡ್ ಕಡ್ಡಾಯ! ಶಿಕ್ಷಣ ಸಚಿವರಿಂದ ಖಡಕ್ ಆದೇಶ
ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಎಲ್ಐಸಿ, ಆಗಸ್ಟ್ 1, 2022 ರಿಂದ 1.10 ಲಕ್ಷ ಉದ್ಯೋಗಿಗಳಿಗೆ ಶೇಕಡಾ 17 ರಷ್ಟು ವೇತನವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಹೇಳಿದೆ. ಈ ಹೆಚ್ಚಳದ ಜತೆಗೆ ಎಲ್ ಐಸಿ ನೌಕರರಿಗೆ ಎರಡು ವರ್ಷಗಳ ವೇತನ ಬಾಕಿಯೂ ಸಿಗಲಿದೆ. ಎಲ್ ಐಸಿ ನೌಕರರ ವೇತನ ಹೆಚ್ಚಳ ನಿರ್ಧಾರದಿಂದ ವಾರ್ಷಿಕ 4 ಸಾವಿರ ಕೋಟಿ ರೂ.ಗಳ ಆರ್ಥಿಕ ಹೊರೆ ಹೆಚ್ಚಲಿದೆ. ಇದರೊಂದಿಗೆ ಎಲ್ ಐಸಿಯ ವೇತನ ವೆಚ್ಚವೂ 29,000 ಕೋಟಿ ರೂ.ಗೆ ಏರಿಕೆಯಾಗುವ ಅಂದಾಜಿದೆ.
ಇದನ್ನೂ ಓದಿ: Shraddha Case: ಶ್ರದ್ಧಾ ಕೊಲೆ ಕೇಸ್ ಪ್ರಕರಣ; ಆರೋಪಿ ಅಫ್ತಾಬ್‌ಗೆ ಒಂಟಿ ಕೋಣೆಯಿಂದ ಮುಕ್ತಿ
ಕೇಂದ್ರ ಸರ್ಕಾರವು ಎನ್‌ಪಿಎಸ್‌ನಲ್ಲಿನ ಕೊಡುಗೆಯನ್ನು ಅಂದರೆ ಎಲ್‌ಐಸಿ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಶೇಕಡಾ 10 ರಿಂದ 14 ಕ್ಕೆ ಹೆಚ್ಚಿಸಿದೆ, ಇದು ಏಪ್ರಿಲ್ 1, 2010 ರಂದು ಸೇರಿರುವ 24000 ಉದ್ಯೋಗಿಗಳಿಗೆ ದೊಡ್ಡ ಲಾಭವಾಗಲಿದೆ.
30 ಎಲ್‌ಐಸಿ ಪಿಂಚಣಿದಾರರಿಗೆ ಒಂದೇ ಬಾರಿ ಪರಿಹಾರ ನೀಡಲು ಸರ್ಕಾರ ಅನುಮೋದನೆ ನೀಡಿದೆ. ಈ ಪರಿಹಾರವನ್ನು ಎಲ್ಐಸಿ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ನೀಡಲಾಗುತ್ತದೆ. ಭಾರತೀಯ ಜೀವ ವಿಮಾ ನಿಗಮವು ವೇತನ ಹೆಚ್ಚಳಕ್ಕೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದೆ. ವಾಸ್ತವವಾಗಿ, ಚುನಾವಣಾ ನೀತಿ ಸಂಹಿತೆ ಶನಿವಾರ, ಮಾರ್ಚ್ 16, 2024 ರಿಂದ ಜಾರಿಗೆ ಬರಲಿದೆ, ಹೀಗಾಗಿ ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಎಲ್‌ಐಸಿ ನೌಕರರ ವೇತನವನ್ನು ಹೆಚ್ಚಿಸಲು ಮತ್ತು ಪಿಂಚಣಿದಾರರಿಗೆ ಪರಿಹಾರ ನೀಡಲು ಸರ್ಕಾರವು ತನ್ನ ಅನುಮೋದನೆಯನ್ನು ನೀಡಿದೆ.