Prajwal Pendrive Case: 100 ಕೋಟಿ ಆಫರ್ ಕೊಟ್ಟು ಪೆನ್‌ಡ್ರೈವ್ ರೆಡಿ ಮಾಡಿಸಿದ್ದೇ ಡಿಕೆ ಶಿವಕುಮಾರ್ - ವಕೀಲ ದೇವರಾಜೇಗೌಡ ಸ್ಪೋಟಕ ಹೇಳಿಕೆ !!
Prajwal Pendrive Case: ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿರುವ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ(Prajwal Pendrive Case) ರೋಚಕ ಟ್ವಿಸ್ಟ್ ಸಿಕ್ಕಿದ್ದು, ಡಿಸಿಎಂ ಡಿ ಕೆ ಶಿವಕುಮಾರ್(D K Shivkumar) ಮೇಲೆ ಆರೋಪ ಮಾಡಿ, ವಕೀಲ ದೇವರಾಜೇಗೌಡ (Devaraje gowda) ಸ್ಪೋಟಕ ಹೇಳಿಕೆ ನೀಡಿದ್ದಾರೆ.
https://x.com/JanataDal_S/status/1791476656143814874?t=t96b90cJY-XJBL9hI0J06A&s=08
'ನನಗೆ 100ಕೋಟಿಯ ಆಫರ್ ನೀಡಿ ಪೆನ್ ಡ್ರೈವ್ ತರಿಸಿಕೊಂಡು ಎಲ್ಲಾ ರೆಡಿ ಮಾಡಿಸಿದ್ದೇ ಡಿ.ಕೆ ಶಿವಕುಮಾರ್. ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿ ಒಟ್ಟಾರೆ ನಾಲ್ಕು ಸಚಿವರಿಗೆ ಇದನ್ನು ನೋಡಿಕೊಳ್ಳಲು ಬಿಟ್ಟಿದ್ದಾರೆ' ಎಂದು ವಕೀಲ ಹಾಗೂ ಬಿಜೆಪಿ ನಾಯಕ ದೇವರಾಜೇಗೌಡ ಸ್ಪೋಟಕ ಹೇಳಿಕೆ ನೀಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ: D K Shivkumar: 'ಇಂಡಿಯಾ' ಗೆ 300, 'ಎನ್‌ಡಿಎ'ಗೆ 200 ಸೀಟು - ಡಿಕೆಶಿ ಕೊಟ್ರು ಬಿಗ್ ಅಪ್ಡೇಟ್ !!
ದೇವರಾಜೇಗೌಡ ಹೇಳಿದ್ದೇನು?
ನನ್ನನ್ನು ಕರೆಸಿಕೊಂಡು ಮಾತನಾಡಿ ಎಲ್ಲವನ್ನೂ ಹೆಚ್‌ಡಿ ಕುಮಾರಸ್ವಾಮಿ ಮಾಡಿದ್ದು ಎಂದು ಹೇಳುವಂತೆ ಒತ್ತಾಯ ಮಾಡಿದ್ದರು. ಪೆನ್‌ಡ್ರೈವ್ ಹಂಚಿಸಿದ್ದು ಹೆಚ್‌ಡಿ ಕುಮಾರಸ್ವಾಮಿ ಎಂದು ಹೇಳುವಂತೆ ಎಲ್ ಆರ್ ಶಿವರಾಮೇಗೌಡರ ಮೂಲಕ ಡಿಕೆ ಶಿವಕುಮಾರ್ ನನಗೆ ಹೇಳಿಸಿದ್ದರು. ₹100 ಕೋಟಿ ನೀಡುವುದಾಗಿ ಆಮಿಷ ಒಡ್ಡಿದ್ದರು. ಅದ್ರಲ್ಲಿ 5 ಕೋಟಿ ಅಡ್ವಾನ್ಸ್ ಅನ್ನ ಬೋರಿಂಗ್ ಕ್ಲಬ್ ನ ರೂಂ ನಂಬರ್ 110 ಕ್ಕೆ ಕಳಿಸಿದ್ದರು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: WhatsApp Status: ವಾಟ್ಸಾಪ್ ಸ್ಟೇಟಸ್'ನಲ್ಲಿ 1 ನಿಮಿಷದ ವಿಡಿಯೋ ಅಪ್ಲೋಡ್'ಗೆ ಅವಕಾಶ !!
ಅಲ್ಲದೆ ಚನ್ನರಾಯಪಟ್ಟಣ ಗೋಪಾಲಸ್ವಾಮಿ ಅವರನ್ನು ಸಂಧಾನಕ್ಕೆ ಕಳುಹಿಸಿದ್ದರು. ಐದು ಕೋಟಿ ಕ್ಯಾಶ್ ಕೊಟ್ಟು ಡಿಕೆಶಿ ಕಳಿಸಿದ್ದರು. ದೇಶದಲ್ಲಿ ಮೋದಿಯವರಿಗೆ ಕಳಂಕ ತರಬೇಕು. ಈ ರಾಸಲೀಲೆ ಹಗರಣದಲ್ಲಿ ಮೋದಿಯವರನ್ನು ಬಿಂಬಿಸಿ ಬಿಜೆಪಿಗೆ ಕೆಟ್ಟ ಹೆಸರು ತರಬೇಕು ಅಂತಾ ಮಾಡಿದರು. ಡಿ.ಕೆ.ಶಿವಕುಮಾರ್ ಮುಖ್ಯ ಉದ್ದೇಶ ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವವನ್ನು ರಾಜ್ಯದಲ್ಲಿ ಹಾಳು ಮಾಡಬೇಕು ಎನ್ನುವುದು. ಇದು ಸತ್ಯ ಎಂದು ದೇವರಾಜೇಗೌಡ ಆರೋಪ ಮಾಡಿದ್ದಾರೆ.
ನನ್ನ ಬಂಧನಕ್ಕೆ ಡಿಕೆ ಶಿವಕುಮಾರ್ ನೇರ ಹೊಣೆ:
ನನ್ನ ಬಳಿ ಅವರಿಗೆ ಸಿಕ್ಕಿರುವ ಪೆನ್ ಡ್ರೈವ್‌ನಲ್ಲಿ ಕಾರ್ತಿಕ್ ಪತ್ನಿ ಕಿಡ್ನಾಪ್ ಪ್ರಕರಣದ ವೀಡಿಯೋ ಇದೆ. ಡಿಕೆ ಶಿವಕುಮಾರ್ ಅವರು ನನ್ನೊಟ್ಟಿಗೆ ಮಾತನಾಡಿರೊ ಆಡಿಯೋ ಇದೆ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಾನು ಬಿಡುಗಡೆಯಾಗಿ ಹೊರಗಡೆ ಬಂದ ದಿನ ಸರ್ಕಾರ ಪತನವಾಗಲಿದೆ ಎಂದರು. ಎಸ್‌ಐಟಿಗೆ ನನ್ನ ಮನೆಯಲ್ಲಿ ಏನೂ ಸಿಗಲ್ಲ. ನನ್ನ ಬಳಿ ಇರೊ ಸಾಕ್ಷಿ ಎಲ್ಲೋ ಇದೆ ಸಾಕ್ಷಿಯನ್ನ ಸೇಫಾಗಿ ಇಟ್ಟಿದ್ದೇನೆ ಎಂದ ವಕೀಲ ದೇವರಾಜೇಗೌಡ ಹೇಳಿದರು.
ಜೆಡಿಎಸ್ ಟ್ವೀಟ್ ವೈರಲ್ !!
ದೇವರಾಜೇಗೌಡರ ಆರೋಪದ ಬೆನ್ನಲ್ಲೇ ಜೆಡಿಎಸ್ '1.ಡಿಸಿಎಂ ಡಿ.ಕೆ.ಶಿವಕುಮಾರ್ , 2.ಕೃಷಿ ಸಚಿವ ಚೆಲುವರಾಯಸ್ವಾಮಿ, 3.ಕಂದಾಯ ಸಚಿವ ಕೃಷ್ಣಭೈರೇಗೌಡ, 4. IT BT ಸಚಿವ ಪ್ರಿಯಾಂಕ್ ಖರ್ಗೆ ಪ್ಲಸ್ ಇನ್ನೂ ಒಬ್ಬ ಸಚಿವ ಹಾಗೇ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ. ಇವರೆಲ್ಲರೂ ಹೂಡಿರುವ ಸಂಚು ಏನ್ ಗೊತ್ತಾ? ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರುವುದು. ಈ ಸಂಚು ಸಾಕಾರಗೊಳಿಸಲು CD ಶಿವಕುಮಾರ್ ಸಾಹೇಬರು ವಕೀಲರಾದ ದೇವರಾಜೇಗೌಡರಿಗೆ ಆಫರ್ ಮಾಡಿದ ಮೊತ್ತ ಬರೋಬ್ಬರಿ 100 ಕೋಟಿ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದೆ.