For the best experience, open
https://m.hosakannada.com
on your mobile browser.
Advertisement

Security Breach: ಸಂಸತ್ತಿನಲ್ಲಿ ಆಗಂತುಕರ ಒಳನುಸುಳುವಿಕೆ ಪ್ರಕರಣ- ಭದ್ರತಾ ಲೋಪದಡಿ 8 ಸಿಬ್ಬಂದಿಗಳ ಅಮಾನತು!

02:34 PM Dec 14, 2023 IST | ಅಶ್ವಿನಿ ಹೆಬ್ಬಾರ್
UpdateAt: 03:10 PM Dec 14, 2023 IST
security breach  ಸಂಸತ್ತಿನಲ್ಲಿ ಆಗಂತುಕರ ಒಳನುಸುಳುವಿಕೆ ಪ್ರಕರಣ   ಭದ್ರತಾ ಲೋಪದಡಿ 8 ಸಿಬ್ಬಂದಿಗಳ ಅಮಾನತು
Image source: Mint

Security Breach: ಲೋಕಸಭೆ (LokSabha)ಕಾರ್ಯಾಲಯ ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪ(Security Breach)ದ ಹಿನ್ನೆಲೆ 8 ಸಿಬ್ಬಂದಿಯನ್ನು ಅಮಾನತು ಮಾಡಿದೆ.

Advertisement

ಬುಧವಾರ ಸಂಸತ್ತಿನ ಭದ್ರತೆಯಲ್ಲಿ ನಡೆದ ಲೋಪ ಭಾರೀ ಚರ್ಚೆಗೆ ಕಾರಣವಾಗಿತ್ತು. ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಆಗಂತುಕರು ಸಂಸದರಿದ್ದ (Security Breach in LokSabha)ಸ್ಥಳಕ್ಕೆ ಆಗಮಿಸಿ ಅಶ್ರುವಾಯು ಸಿಡಿಸಿದ್ದರು. ಈ ಕೃತ್ಯದಲ್ಲಿ ಭಾಗಿಯಾಗಿರುವ ಸಾಗರ್ ಶರ್ಮಾ, ಮನೋರಂಜನ್, ನೀಲಂ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಯೋಜನೆಯನ್ನು 6 ಮಂದಿ ಒಟ್ಟಾಗಿ ಯೋಜನೆ ರೂಪಿಸಿ ಮಾಡಿದ್ದರು ಎನ್ನಲಾಗಿದೆ.ಈ ಘಟನೆಗೆ ಸಂಬಂಧಿಸಿದಂತೆ 120 ಬಿ(ಕ್ರಿಮಿನಲ್ ಪಿತೂರಿ), 452(ಅನುಮತಿ ಇಲ್ಲದೆ ಪ್ರವೇಶ), 153(ಗಲಭೆಗೆ ಪ್ರಚೋದನೆ), 186(ಸಾರ್ವಜನಿಕ ಸೇವೆಗೆ ಅಡ್ಡಿಪಡಿಸುವುದು)ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: Lokasabha: ಲೋಕಸಭೆಯಲ್ಲಿ ಭದ್ರತಾ ಲೋಪ - ಕೇಂದ್ರಕ್ಕೆ ಬಿಗ್ ಶಾಕ್ ಕೊಟ್ಟ ಸ್ಪೀಕರ್!!

Advertisement

ಸಂಸತ್ತಿನ ಭದ್ರತಾ ಲೋಪದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಕುರಿತಂತೆ ಲೋಕಸಭೆ ಸೆಕ್ರಟರಿಯೇಟ್ ಮಹತ್ವದ ನಿರ್ಣಯ ಕೈಗೊಂಡಿದ್ದು, ಭದ್ರತಾ ಉಲ್ಲಂಘಟನೆಯ ಹಿನ್ನೆಲೆ 8 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಇದನ್ನು ಓದಿ: Hay Fever: ಯಪ್ಪಾ.. ಬಂದ ಸೀನನ್ನು ತಡೆದದಕ್ಕೆ ಶ್ವಾಸನಾಳವೇ ಹರಿದುಹೋಯ್ತು - ವಿಚಿತ್ರ ಪ್ರಕರಣ ಕಂಡು ವೈದರೇ ಶಾಕ್

Advertisement
Advertisement